Tag: Krishna Raja Sagara

ಕೆಆರ್‍ಎಸ್ ಜಲಾಶಯದ 143 ಕ್ರೆಸ್ಟ್ ಗೇಟ್ ಬದಲಿಸುವ ಕಾಮಗಾರಿಗೆ ಆರ್ಥಿಕ ಬಿಡ್ ಅಂತಿಮ
ಮೈಸೂರು

ಕೆಆರ್‍ಎಸ್ ಜಲಾಶಯದ 143 ಕ್ರೆಸ್ಟ್ ಗೇಟ್ ಬದಲಿಸುವ ಕಾಮಗಾರಿಗೆ ಆರ್ಥಿಕ ಬಿಡ್ ಅಂತಿಮ

June 25, 2019

– ಎಸ್.ಟಿ. ರವಿಕುಮಾರ್ ಮೈಸೂರು: ವಿಶ್ವ ಪ್ರಸಿದ್ಧ ಕೃಷ್ಣರಾಜ ಸಾಗರ ಅಣೆಕಟ್ಟೆಯ ಅತೀ ಹಳೆಯ 143 ಕ್ರೆಸ್ಟ್ ಗೇಟ್‍ಗಳನ್ನು ಬದಲಿ ಸುವ ಕಾಲ ಸನ್ನಿಹಿತವಾಗಿದೆ. ಕಾವೇರಿ ನೀರಾವರಿ ನಿಗಮ (ಅಓಓ)ವು, ಕೆಆರ್‍ಎಸ್ ಅಣೆಕಟ್ಟೆ ನಿರ್ಮಾಣ ಸಂದರ್ಭ 80 ವರ್ಷಗಳ ಹಿಂದೆ ಅಳವಡಿಸಿದ್ದ 173 ಗೇಟುಗಳ ಪೈಕಿ ಕಾವೇರಿ ನದಿಗೆ ನೀರು ಹರಿಸುವ 143 ಗೇಟ್ (ಸ್ಲೂಸ್ ಗೇಟ್)ಗಳನ್ನು ಬದಲಾಯಿಸಲು ಯೋಜನೆ ರೂಪಿಸಿತ್ತು. 68 ಕೋಟಿ ರೂ. ವೆಚ್ಚದ ಈ ಮಹತ್ತರ ಯೋಜನೆಗೆ ಹಣಕಾಸಿನ ನೆರವು ನೀಡಲು ವಿಶ್ವ…

ಅಂಗವಿಕಲತೆಯಿಂದ ಪಾರಾಗಿ ಎಲ್ಲರಂತೆ ಸಹಜವಾಗಿ ನಡೆದಾಡುತ್ತಿರುವ ಯುವಕ ಪವನ್‍ಕುಮಾರ್
ಮೈಸೂರು

ಅಂಗವಿಕಲತೆಯಿಂದ ಪಾರಾಗಿ ಎಲ್ಲರಂತೆ ಸಹಜವಾಗಿ ನಡೆದಾಡುತ್ತಿರುವ ಯುವಕ ಪವನ್‍ಕುಮಾರ್

September 8, 2018

ಮೈಸೂರು:  12 ವರ್ಷಗಳ ಹಿಂದೆ ಬಿದ್ದು ಬಲಗಾಲಿನ ತೊಡೆಯ ಮೂಳೆ ಮುರಿತದಿಂದ ಕಂಗಾಲಾಗಿದ್ದ ಯುವಕನೊಬ್ಬನಿಗೆ ಶಸ್ತ್ರಚಿಕಿತ್ಸೆ ಮೂಲಕ ಆತ ಸಹಜವಾಗಿ ನಡೆದಾಡುವಂತೆ ಮಾಡುವಲ್ಲಿ ಮೈಸೂರಿನ ಕೀಲು ಮತ್ತು ಮೂಳೆ ತಜ್ಞ ಡಾ.ಟಿ.ಮಂಜುನಾಥ್ ಯಶಸ್ವಿಯಾಗಿದ್ದಾರೆ. ಕೃಷ್ಣರಾಜಸಾಗರದ ಪವನ್‍ಕುಮಾರ್ (17) 5 ವರ್ಷದ ಬಾಲಕನಾಗಿದ್ದಾಗ ಬಿದ್ದು ತೊಡೆಗೆ ಪೆಟ್ಟಾಗಿತ್ತು. ಮೂಳೆ ಮುರಿದಿತ್ತು. 3 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ ಸರಿಯಾಗಿ ಮೂಳೆಗಳು ಬೆಳವಣಿಗೆಯಾಗದೆ 20 ಸೆಂಟಿಮೀಟರ್‍ನಷ್ಟು ಕಾಲು ಬೆಳೆಯದೇ ಅಂಗವೈಕಲ್ಯತೆಗೆ ಒಳಗಾಗಿದ್ದ. ಪೇಯಿಂಟಿಂಗ್ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದ ಆತನ ತಂದೆ…

`ಡಿಸ್ನಿಲ್ಯಾಂಡ್’ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ
ಮಂಡ್ಯ

`ಡಿಸ್ನಿಲ್ಯಾಂಡ್’ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ

July 26, 2018

ಮಂಡ್ಯ:  ವಿಶ್ವವಿಖ್ಯಾತ ಕೆಆರ್‌ಎಸ್‌ನಲ್ಲಿ ‘ಡಿಸ್ನಿ ಲ್ಯಾಂಡ್’ ಮಾದರಿ ಮನರಂಜನಾ ಪಾರ್ಕ್ ನಿರ್ಮಿಸಲು ಸರ್ಕಾರ ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಅಧಿಕಾರಿಗಳೊಂದಿಗೆ ಮಂಗಳವಾರ ಕೆಆರ್‌ಎಸ್‌ಗೆ ಭೇಟಿ ಪರಿಶೀಲನೆ ನಡೆಸಿದರು. ಅಮೆರಿಕಾದ ಡಿಸ್ನಿಲ್ಯಾಂಡ್ ಮಾದರಿ ಯಲ್ಲೇ ಕೆಆರ್‌ಎಸ್‌ ಬೃಂದಾವನವನ್ನು ಅಭಿವೃದ್ಧಿಪಡಿಸಲು ಬಜೆಟ್‍ನಲ್ಲಿ ಘೋಷಣೆ ಯಾಗಿದೆ, ಇದಕ್ಕಾಗಿ 5 ಕೋಟಿ ರೂ. ಗಳನ್ನೂ ಸಹ ಘೋಷಣೆ ಮಾಡಲಾಗಿದೆ, ಈ ಹಿನ್ನೆಲೆಯಲ್ಲಿ ಯೋಜನೆ ಜಾರಿಗೊಳಿಸಲು ಸಿದ್ದತೆ ನಡೆದಿದೆ ಎಂದು ಅಧಿಕಾರಿಗಳ ಸಭೆಯ ಬಳಿಕ ಸಚಿವರು ಸುದ್ದಿಗಾರರಿಗೆ ತಿಳಿಸಿದರು. ನೀಲನಕ್ಷೆ ತಯಾರಿಗೆ…

ಕೆಆರ್‌ಎಸ್‌ನಲ್ಲಿ ಕಾವೇರಿ ಕಲರ್‍ಫುಲ್ ಕಲರವ
ಮಂಡ್ಯ, ಮೈಸೂರು

ಕೆಆರ್‌ಎಸ್‌ನಲ್ಲಿ ಕಾವೇರಿ ಕಲರ್‍ಫುಲ್ ಕಲರವ

July 19, 2018

ಅಣೆಕಟ್ಟೆಯಿಂದ ಭೋರ್ಗರೆಯುತ್ತಿರುವ ನೀರಿಗೆ ಬಣ್ಣ ಬಣ್ಣದ 500 ಎಲ್‍ಇಡಿ ಬಲ್ಬ್‍ಗಳ ಮೆರಗು ಮೈಸೂರು: ಮೈದುಂಬಿದ ಕಾವೇರಿಗೀಗ ಬಣ್ಣದ ಓಕುಳಿ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಕೃಷ್ಣರಾಜ ಸಾಗರ ಅಣೆ ಕಟ್ಟೆಯ ಸೌಂದರ್ಯವನ್ನು ವೀಕ್ಷಿಸಲು ಈಗ ಎರಡು ಕಣ್ಣು ಸಾಲದು. ಕಾವೇರಿ ಕಣಿವೆಯಲ್ಲಿ ಸಮೃದ್ಧವಾಗಿ ಮಳೆ ಯಾಗಿರುವುದರಿಂದ ನಾಲ್ಕು ವರ್ಷಗಳ ನಂತರ ಇದೀಗ ಕೆಆರ್‌ಎಸ್‌ ಜಲಾಶಯ ತುಂಬಿ ತುಳು ಕುತ್ತಿರುವುದರಿಂದ ಹೆಚ್ಚುವರಿ ನೀರನ್ನು ಹೊರ ಬಿಡುತ್ತಿದ್ದು, ಅಣೆಕಟ್ಟೆ ಬಳಿ ಭೋರ್ಗರೆದು ಹರಿ ಯುತ್ತಿರುವ ಕಾವೇರಿಯ ಪ್ರಕೃತಿ ಸೌಂದರ್ಯ ವನ್ನು…

Translate »