ಮುಸ್ಲಿಂ ಬಾಂಧವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಫ್ತಿಯಾರ್ ಕೂಟ

ಮೈಸೂರು:  ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು-ಬೆಂಗಳೂರು ರಸ್ತೆಯ ಪ್ರೆಸ್ಟೀಜ್ ಕನ್ವೆನ್‍ಷನ್‍ಹಾಲ್‍ನಲ್ಲಿ ಇಫ್ತಿ ಯಾರ್ ಕೂಟವನ್ನು ಆಯೋಜಿಸಿದ್ದರು.

ಬನ್ನಿಮಂಟಪದ ಪ್ರೆಸ್ಟಿಜ್ ಕನ್ವೆನ್‍ಷನ್ ಹಾಲ್‍ನಲ್ಲಿ ಮಂಗಳವಾರ ಸಂಜೆ ಏರ್ಪಡಿ ಸಿದ್ದ ಕೂಟದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಾಡಿನ ಜನತೆಗೆ ರಂಜಾನ್ ಹಬ್ಬದ ಶುಭಾಶಯ ಕೋರಿ ದರು. ನಂತರ ತಾವೇ ಖುದ್ದು ನಿಂತು ಊಟಬಡಿಸಿ, ಅವರೊಂದಿಗೆ ಊಟ ಮಾಡಿದರು. ಈ ಕೂಟದಲ್ಲಿ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಭಾಗವ ಹಿಸಿ ಬಗೆಬಗೆಯ ಖಾದ್ಯ ಸವಿದರು.

ಸಿದ್ದರಾಮಯ್ಯರವರು ಊಟ ಬಡಿಸಿದ ನಂತರ ಕನ್ವೆನ್‍ಷನ್ ಹಾಲ್‍ನಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಆಸೀನರಾದರು. ಈ ವೇಳೆ ಮುಸ್ಲಿಂ ಬಾಂಧವರು ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿದರು. ಈ ವೇಳೆ ದೃಶ್ಯ ಮಾಧ್ಯಮದವರು ಮಾತನಾಡಿಸಲು ಮುಂದಾದಾಗ ಮಾತನಾಡದೆ ಸಾರಾ ಸಗಟಾಗಿ ಮೈಕ್‍ಗಳನ್ನು ತಳ್ಳಿದರು.
ಸೆಲ್ಫಿಗೆ ಮುಗಿಬಿದ್ದ ಯುವಕರು: ಮುಸ್ಲಿಂ ಬಾಂಧವರು ವೇದಿಯಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿ ತೆಗೆದು ಕೊಳ್ಳಲು ನಾಮುಂದು-ತಾಮುಂದು ಎಂದು ಮುಗಿಬಿದ್ದರು.

ತನ್ವೀರ್ ಬೆಂಬಲಿಗರ ಜೈಕಾರ: ತನ್ವೀರ್ ಸೇಠ್ ಅಭಿಮಾನಿ ಕೆಸರೆಯ ಮಂಟೆ ಲಿಂಗಯ್ಯ ಹಾಗೂ ಮತ್ತಿತರೆ ಬೆಂಬಲಿ ಗರು ಮೈಸೂರಲ್ಲಿ ಕಾಂಗ್ರೆಸ್ ಉಳಿಯ ಬೇಕಾದರೆ ತನ್ವೀರ್‍ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. ಈ ವೇಳೆ ತನ್ವೀರ್‍ಸೇಠ್‍ರವರು ಸಮಾಧಾನಪಡಿ ಸಲು ಯತ್ನಿಸಿದರೂ ಕಿವಿಗೊಡದೆ ಜೈಕಾರ ಮೊಳಗಿಸಿದರು. ಸಿದ್ದರಾಮಯ್ಯ ಅವರು ಊಟ ಮುಗಿಸಿ ಕಾರು ಹತ್ತುವಾಗಲೂ ಕಾರು ಸುತ್ತುವರೆದು ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.
ಪೊಲೀಸರ ಹರಸಾಹಸ: ಸಿದ್ದರಾಮಯ್ಯ ಅವರು ಭೋಜನ ಮಾಡುತ್ತಿದ್ದ ಸ್ಥಳದತ್ತ ನೂರಾರು ಮಂದಿ ಒಮ್ಮೆಲೆ ನುಗ್ಗಿದ್ದರಿಂದ ಅವರನ್ನು ತಡೆಯಲು ಪೊಲೀಸರು ಹರಸಾಹಸಪಡಬೇಕಾಯಿತು. ಸಚಿವ ಯು.ಟಿ.ಖಾದರ್, ಶಾಸಕರಾದ ತನ್ವೀರ್‍ಸೇಠ್, ಡಾ.ಯತೀಂದ್ರ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ ಮತ್ತಿತರರು ಉಪಸ್ಥಿತರಿದ್ದರು.