ಫೆ.15ರಿಂದ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ರುಚಿಕರ ಖಾದ್ಯ ಸವಿಯುವ ಅವಕಾಶ

ಮೈಸೂರು:ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಆಯೋಜಿಸಿರುವ ಕರಕುಶಲ ವಸ್ತು ಪ್ರದರ್ಶನದಲ್ಲಿ ಫೆ.15 ರಿಂದ 3 ದಿನ ಉತ್ತರ-ದಕ್ಷಿಣ ಭಾರತದ ಬಗೆ-ಬಗೆಯ ರುಚಿಕರ ಖಾದ್ಯಗಳನ್ನು ಸವಿಯಲು ಅವಕಾಶವಿದೆ.

ಜೆಎಸ್‍ಎಸ್ ಅರ್ಬನ್ ಹಾತ್, ಜವಳಿ ಮಂತ್ರಾಲಯ(ಕರಕುಶಲ ಇಲಾಖೆ) ಸಹಯೋಗದ `ಕರಕುಶಲ ವಸ್ತು ಪ್ರದ ರ್ಶನ’ ಫೆ.8ರಂದೇ ಆರಂಭಗೊಂಡಿದ್ದು, 17ರಂದು ಕೊನೆಗೊಳ್ಳಲಿದೆ.

ಕರಕುಶಲ ವಸ್ತುಗಳನ್ನು ಖರೀದಿಸಲು ಬರುವ ಗ್ರಾಹಕರಿಗೆ ಬಗೆ ಬಗೆಯ ಖಾದ್ಯ ಗಳನ್ನು ಊಣಬಡಿಸಲು ಆಹಾರ ಮೇಳ ವನ್ನು ಆಯೋಜಿಸಿದ್ದು, ಬಗೆ-ಬಗೆಯ ದೋಸೆಗಳು, ದಕ್ಷಿಣ ಭಾರತದ ತಿಂಡಿ ತಿನಿಸುಗಳು, ಉತ್ತರ ಭಾರತದ ಖಾದ್ಯ ಗಳು, ಚಾಟ್ಸ್, ಐಸ್‍ಕ್ರೀಂ ಮತ್ತಿತರೆ ಖಾದ್ಯಗಳನ್ನು ಸವಿಯಬಹುದಾಗಿದೆ.

ಫೆ.15ರಂದು ಸಂಜೆ 5 ಗಂಟೆಗೆ ಜಿಲ್ಲಾ ಧಿಕಾರಿ ಅಭಿರಾಂ ಜಿ.ಶಂಕರ್ `ಆಹಾರ ಮೇಳ’ ಉದ್ಘಾಟಿಸಲಿದ್ದು, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ರಂಗನಾಥಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕರಕುಶಲ ವಸ್ತು ಪ್ರದರ್ಶನ: ಈ ಮೇಳ ದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಕಾಶ್ಮೀರ, ದೆಹಲಿ, ಗುಜರಾತ್, ಒರಿಸ್ಸಾ, ಆಂಧ್ರಪ್ರದೇಶ, ತಮಿಳುನಾಡು, ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ ಮತ್ತಿತರೆ ಭಾಗಗಳಿಂದ ಸುಮಾರು 50ಕ್ಕೂ ಹೆಚ್ಚು ಕುಶಲಕರ್ಮಿಗಳು ಆಗಮಿಸಿದ್ದು, ತಮ್ಮ ಉತ್ಕøಷ್ಟ ಕಲಾ ವಸ್ತುಗಳನ್ನು ಪ್ರದರ್ಶಿಸಿ, ಮಾರಾಟ ಮಾಡಲಿದ್ದಾರೆ. ಅದಕ್ಕಾಗಿ 50ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ.
ಜಮ್ಮು ಕಾಶ್ಮೀರದ ಮೃದುವಾದ ಶಾಲು, ಖಶೀದಕರಿ ಎಂಬ್ರಾಯಿಡರಿ ಡ್ರೆಸ್ ಗಳು, ಆಭರಣಗಳು. ಒರಿಸ್ಸಾದ ದೋಗ್ರಾ ಶಿಲ್ಪ, ಪಟ್ಟ ಚಿತ್ರಕಲೆಗಳು. ಮಹಾರಾಷ್ಟ್ರದ ಟಸ್ಸರ್ ರೇಷ್ಮೆ ಸೀರೆಗಳು ಮತ್ತು ಕೊಲ್ಲಾ ಪುರ್ ಚಪ್ಪಲಿಗಳು. ದೆಹಲಿ ಕಲಾವಿದರು ಮಣ್ಣಿನಿಂದ ತಯಾರಿಸಿದ ಗೃಹಲಾಂ ಕಾರಿಕ ಹೂಜಿಗಳು, ಪೀಠೋಪಕರಣ ಗಳು, ಡ್ರೆಸ್‍ಗಳು.

ಗುಜರಾತ್‍ನ ಬಣ್ಣ ಬಣ್ಣದ ಹೂ ಕುಂದಗಳು, ಕುಚ್ ವೊಲ್ಲನ್ ಶಾಲು ಮತ್ತು ಪ್ಯಾಚ್‍ವರ್ಕ್. ಬಿಹಾರದ ಮೈಥಿಲಿ ಚಿತ್ರಕಲೆಗಳು ಮತ್ತು ಮಧುಬನಿ ಚಿತ್ರಕಲೆ, ರತ್ನಗಂಬಳಿ, ಬುಡಕಟ್ಟು ಜನಾಂಗದ ಆಭರಣ. ಪಶ್ಚಿಮ ಬಂಗಾಳದ ಸೆಣಬಿನ ವಸ್ತುಗಳು, ಬಾಟಿಕ್ ಸೀರೆಗಳು, ಸಾಂಪ್ರದಾಯಿಕ ಗೊಂಬೆಗಳು ಮತ್ತು ಕೋಟಾ ಸೀರೆಗಳು. ರಾಜಸ್ಥಾನದ ಕುಶಲಕರ್ಮಿಗಳು ಚರ್ಮದಿಂದ ತಯಾರಿಸಿ ರುವ ಕ್ಯಾಪ್, ಬ್ಯಾಗ್, ಪರ್ಸ್, ವಾಲೆಟ್‍ಗಳು.

ಕೇರಳದ ಕಲಾವಿದರು ತಯಾರಿಸಿರುವ ಆಲಂಕಾರಿಕ ವಸ್ತುಗಳು. ತೆಂಗಿನ ನಾರಿನಿಂದ ತಯಾರಿಸಿದ ಮ್ಯಾಟ್‍ಗಳು. ತಮಿಳುನಾಡು ಕಲಾವಿದರ ಮರದ ಕೆತ್ತನೆ, ಕೋರಾಗ್ರಾಸ್, ಕೈಮಗ್ಗ ವಸ್ತುಗಳು. ಮಧ್ಯಪ್ರದೇಶದ ಚಂದೇರಿ ರೇಷ್ಮೆ ಸೀರೆಗಳು, ಚರ್ಮದಿಂದ ತಯಾರಿಸಿದ ವಿವಿಧ ವಿನ್ಯಾಸದ ಪ್ರಾಣಿ ಗಳು, ಬಾಟಿಕ್ ಉಡುಗೆ-ತೊಡುಗೆಗಳು, ಕಂಚಿನ ವಿಗ್ರಹ ಗಳು, ನೆಲಹಾಸುಗಳು, ಫುಟ್ ಮ್ಯಾಟ್ ಗಳು, ಚಿಕನ್ ಎಬ್ರಾಯಿ ಡರಿ ಜವಳಿ ವಸ್ತ್ರಗಳು, ಬೆಡ್ ಶೀಟ್‍ಗಳು. ಕರ್ನಾ ಟಕದ ಕುಂದಣಕಲೆ, ರೇಷ್ಮೇ ಸೀರೆಗಳು, ಚನ್ನಪಟ್ಟಣದ ಬೊಂಬೆಗಳು, ಮಣ್ಣಿನಿಂದ ತಯಾರಿಸಿದ ಹೂಜಿಗಳು, ಹೂ. ಕುಂದ ಗಳು ಸೇರಿದಂತೆ ಮತ್ತಿತರೆ ಅಲಂಕಾರಿಕ ವಸ್ತುಗಳು ಲಭ್ಯವಿವೆ.