ಮತ್ತೊಂದು ಬ್ಯಾಂಕ್ ಮುಷ್ಕರಕ್ಕೆ ಸಿದ್ಧರಾಗಿ!

ನವದೆಹಲಿ: ಪ್ರಮುಖ ಬೆಳ ವಣಿಗೆ ಯಲ್ಲಿ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಒಕ್ಕೂಟಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿವೆ.

ಹೊಸ ವರ್ಷಾರಂಭದಲ್ಲೇ ಬ್ಯಾಂಕ್ ಗ್ರಾಹಕರಿಗೆ ಮುಷ್ಕರದ ಬಿಸಿ ಮುಟ್ಟಲಿದ್ದು, 2020ರ ಜ.8ರಂದು ಕೇಂದ್ರ ಕಾರ್ಮಿಕ ಸಂಘಗಳು ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿವೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಮತ್ತು ಉದ್ಯೋಗ ಭದ್ರತೆ, ಉದ್ಯೋಗ ಸೃಷ್ಟಿ, ಕಾರ್ಮಿಕರ ಮೇಲೆ ಪ್ರತಿ ಕೂಲ ತಿದ್ದುಪಡಿ ಕಾನೂನುಗಳು ಮತ್ತು ಇತರ ಬೇಡಿಕೆಗಳನ್ನು ಮುಂದಿಟ್ಟು 10 ಕೇಂದ್ರ ಕಾರ್ಮಿಕ ಸಂಘಗಳು ಜ.8ರಂದು ರಾಷ್ಟ್ರೀಯ ಸಾಮಾನ್ಯ ಮುಷ್ಕ ರಕ್ಕೆ ಕರೆ ನೀಡಿವೆ.

ಬ್ಯಾಂಕಿಂಗ್ ವಲಯದ 5 ಒಕ್ಕೂಟಗಳು ಜಂಟಿಯಾಗಿ ಈ ಮುಷ್ಕ ರಕ್ಕೆ ಕರೆ ನೀಡಿದ್ದು, ಎಐಬಿಇಎ, ಎಐಬಿ ಒಎ, ಬಿಇಎಫ್‍ಐ, ಐಎನ್‍ಬಿ ಇಎಫ್ ಮತ್ತು ಐಎನ್ ಬಿಒಸಿ ರಾಷ್ಟ್ರೀಯ ಸಾಮಾನ್ಯ ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿವೆ. ಇದಲ್ಲದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‍ಬಿಐ), ಸಹಕಾರಿ ಬ್ಯಾಂಕು ಗಳು, ಪ್ರಾದೇ ಶಿಕ ಗ್ರಾಮೀಣ ಬ್ಯಾಂಕುಗಳು (ಆರ್‍ಆರ್‍ಬಿ), ಎಲ್‍ಐಸಿ, ಸಾಮಾನ್ಯ ವಿಮಾ ವಲಯದ ನೌಕರರು ಸಹ ಮುಷ್ಕ ರಕ್ಕೆ ಸೇರುತ್ತಿದ್ದಾರೆ ಎನ್ನಲಾಗಿದೆ.