ಬಂದೂಕು ಕಳವು ಪ್ರಕರಣ: ಪ್ರಮುಖ ಆರೋಪಿ ಬಂಧನ

ಮಡಿಕೇರಿ: ಬಂದೂಕು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಮತ್ತು ಗ್ರಾಮಾಂತರ ಠಾಣಾ ಪೊಲೀಸರು ಓರ್ವ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಯಿಂದ ವಿದೇಶಿ ನಿರ್ಮಿತ 2 ಮತ್ತು ದೇಶಿ ನಿರ್ಮಿತ 1 ಬಂದೂಕು ಗಳನ್ನು ವಶಕ್ಕೆ ಪಡೆಯಲಾಗಿದೆ. ಕಕ್ಕಬ್ಬೆ ನಾಲಾಡಿ ನಿವಾಸಿಯಾದ ಅಶೋಕ.ಕೆ.ಸಿ.(29) ಎಂಬಾತ ಬಂಧಿತ ಆರೋಪಿ.

ಆರೋಪಿ ಅಶೋಕ ಮಾರ್ಚ್ 8ರಂದು ಮಡಿಕೇರಿ ಮೈಸೂರು ರಸ್ತೆ ನಿವಾಸಿ ನಿವೃತ್ತ ಸೇನಾಧಿಕಾರಿ ಕೆ.ಜಿ. ಉತ್ತಯ್ಯ ಎಂಬುವರ ಮನೆಯಿಂದ ವಿದೇಶಿ ನಿರ್ಮಿತ 1 ಒಂಟಿ ನಳಿಗೆ ಮತ್ತು ಜೋಡಿ ನಳಿಗೆಯ 1 ಕೋವಿ ಯನ್ನು ಕಳವು ಮಾಡಿದ್ದ. ಮಾತ್ರವಲ್ಲದೇ ನಾಪೋಕ್ಲು ವಿನಲ್ಲೂ ಒಂದು ಕೋವಿಯನ್ನು ಕಳವು ಮಾಡಿದ್ದ. ಈ 2 ವಿದೇಶಿ ನಿರ್ಮಿತ ಕೋವಿಗಳ ಒಟ್ಟು ಮೊತ್ತ 2.50 ಲಕ್ಷ ರೂ.ಗಳಾಗಿದ್ದು, ಆರೋಪಿ ಅದನ್ನು ವಿವಿಧೆಡೆ ಅಡಗಿಸಿಟ್ಟಿದ್ದ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ ಮಡಿಕೇರಿ ನಗರ, ಗ್ರಾಮಾಂ ತರ ಮತ್ತು ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.

ಆರೋಪಿಗಳ ಬೆನ್ನು ಹತ್ತಿದ್ದ ಪೊಲೀಸರು ಪ್ರಕರಣ ದಲ್ಲಿ ಶಾಮೀಲಾದ ಆರೋಪದಲ್ಲಿ ಈ ಹಿಂದೆ 4 ಮಂದಿಯನ್ನು ಬಂಧಿಸಿದ್ದರು. ಆದರೆ ಪ್ರಮುಖ ಆರೋಪಿ ಅಶೋಕ ತಲೆಮರೆಸಿಕೊಂಡಿದ್ದ. ಏ.1ರಂದು ಆರೋಪಿ ಅಶೋಕ ಬೆಟ್ಟಗೇರಿಯ ಆಟೋ ರಿಕ್ಷಾ ನಿಲ್ದಾಣದಲ್ಲಿರು ವುದನ್ನು ಪತ್ತೆ ಹಚ್ಚಿ ಆತನನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. ಆರೋಪಿಯಿಂದ ಮಡಿಕೇರಿಯಲ್ಲಿ ಕಳವು ಮಾಡಿದ್ದ ಬಂದೂಕು ಮತ್ತು ನಾಪೋಕ್ಲುವಿನಲ್ಲಿ ಕಳವು ಮಾಡಿದ್ದ ಕೋವಿ ಸಹಿತ ಕೃತ್ಯಕ್ಕೆ ಬಳಸಿದ್ದ ಕೆಎ-12-ಎನ್.4295 ಜೀಪನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಅಶೋಕ ಕಳವು ಮಾಡಿದ ಬಂದೂಕನ್ನು ಮಾರಾಟ ಮಾಡಲು ಯತ್ನಿಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಉಪ ಅಧೀಕ್ಷಕ ಸುಂದರ್ ರಾಜ್, ನಗರ ಠಾಣಾ ವೃತ್ತ ನಿರೀಕ್ಷಕ ನಾಗೇಗೌಡ, ನಾಪೋಕ್ಲು ಠಾಣಾ ಉಪ ನಿರೀಕ್ಷಕ ರೇಣುಕಾ ಪ್ರಸಾದ್, ಸಹಯಕ ಉಪ ನಿರೀಕ್ಷಕ ಕುಶಾಲಪ್ಪ, ಸಿಬ್ಬಂದಿಗಳಾದ ಫ್ರಾನ್ಸಿಸ್, ಮಹೇಶ, ನವೀನ, ನಗರ ಠಾಣೆಯ ಕೆ.ಕೆ.ದಿನೇಶ್, ನಾಗರಾಜ್, ಅಪರಾಧ ಪತ್ತೆ ದಳದ ನಿರಂಜನ್, ಯೋಗೇಶ್, ಗಿರೀಶ್, ರಾಜೇಶ್ ಅವರುಗಳಿ ಪಾಲ್ಗೊಂಡಿದ್ದರು.