`ಕೋವಿಡ್ ದೃಢಪಟ್ಟರೆ ಆಸ್ಪತ್ರೆಗೆ ಹೋಗಲು ಅಂಜದಿರಿ’

ಮೈಸೂರು, ಜು.27(ವೈಡಿಎಸ್)- `ಕೋವಿಡ್-19 ಭಯಪಡ ಬೇಕಾದ ರೋಗವಲ್ಲ. ಇದಕ್ಕೆ ಇನ್ನೂ ಔಷಧ ಕಂಡು ಹಿಡಿದಿಲ್ಲ. ಹಾಗಾಗಿ ಮುನ್ನೆಚ್ಚರಿಕೆಯಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸ ಬೇಕು. ನಾನು ಬಹುಬೇಗ ಗುಣಮುಖವಾಗಲು ನನ್ನಲ್ಲಿನ ಧೈರ್ಯ, ವಿಶ್ವಾಸವೇ ಮದ್ದಾಗಿತ್ತು’…

ಇದು ಮಂಡಿಮೊಹಲ್ಲಾ ನಿವಾಸಿ ಶಹಾಬುದ್ದೀನ್ ಅವರ ಭರವಸೆಯ ನುಡಿಗಳು. `ನಾನು ದುಬೈನಲ್ಲಿ ಕೆಲಸ ಮಾಡುತ್ತಿದ್ದೆ. ಕೊರೊನಾ ವಿಶ್ವದೆಲ್ಲೆಡೆ ಹರಡುತ್ತಿದ್ದುದರಿಂದ ಮೈಸೂರಿಗೆ ಬಂದೆ. ನಂತರದಲ್ಲಿ ಸ್ವತಃ ಕ್ವಾರಂಟೈನ್‍ಗೆ ಒಳಗಾದೆ. ಕೆಲ ದಿನಗಳ ನಂತರ ವಿಪರೀತ ಕೆಮ್ಮು ಕಾಣಿಸಿಕೊಂಡಿತು. ಜ್ವರ ಇರಲಿಲ್ಲ. ಆದರೂ ಆಸ್ಪತ್ರೆಗೆ ಹೋಗಿ ಗಂಟಲು ದ್ರವದ ಮಾದರಿ ಪರೀಕ್ಷೆ ಮಾಡಿಸಿ ದಾಗ ಪಾಸಿಟಿವ್ ಬಂತು. ವೈದ್ಯರು ಆಂಬ್ಯುಲೆನ್ಸ್‍ನಲ್ಲಿ ಮನೆಗೆ ಬಂದು ಆಸ್ಪತ್ರೆಗೆ ಕರೆದೊಯ್ದರು. ಕೋವಿಡ್ ದೃಢಪಟ್ಟಾಗಲೂ ನನಗೆ ಸ್ವಲ್ಪವೂ ಭಯವಾಗಲಿಲ್ಲ. ಆದರೆ, ಮನೆಯವರು ತುಂಬಾ ಹೆದರಿದ್ದರು. ನಾನೇ ಅವರೆಲ್ಲರಿಗೂ ಧೈರ್ಯ ತುಂಬಿದೆ’. `ಆಸ್ಪತ್ರೆಯಲ್ಲಿ 14 ದಿನಗಳ ಕಾಲ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ಬಂದೆ. ಆದರೆ, ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದಿದ್ದ ರಿಂದ ಬೇರೆ ಮನೆಯಲ್ಲಿ 14 ದಿನ ಕ್ವಾರಂಟೈನ್‍ನಲ್ಲಿದ್ದೆ. ಆ ಮೂಲಕ ನನ್ನ ಕುಟುಂಬದ ಕಾಳಜಿ ಮಾಡಿದೆ’. `ಆಸ್ಪತ್ರೆಯಲ್ಲಿ ಊಟದ ವ್ಯವಸ್ಥೆ ಚೆನ್ನಾಗಿತ್ತು. ವೈದ್ಯರು, ಸಿಬ್ಬಂದಿ ಧೈರ್ಯ ತುಂಬುತ್ತಿದ್ದರು. ಆ ಧೈರ್ಯ, ವಿಶ್ವಾಸವೇ ನಾನು ಬಹುಬೇಗ ಗುಣಮುಖವಾಗಲು ಮದ್ದಾಗಿತ್ತು. ಕೋವಿಡ್ ದೃಢಪಟ್ಟರೆ ಆಸ್ಪತ್ರೆಗೆ ಹೋಗಲು ಅಂಜ ಬಾರದು. ನಮ್ಮಿಂದ ಬೇರೆಯವರಿಗೆ ಸೋಂಕು ಹರಡಬಾರ ದೆಂಬ ಕಾರಣಕ್ಕೇ ನಮ್ಮನ್ನು ಆಸ್ಪತ್ರೆಯಲ್ಲಿಡಲಾಗುತ್ತದೆ’ ಎಂದರು.