ಯೋಗವನ್ನು ಧಾರ್ಮಿಕ ಚೌಕಟ್ಟಿನಲ್ಲಿ ನೋಡುವುದು ಸರಿಯಲ್ಲ

ಮೈಸೂರು: ಬೌದ್ಧಿಕ ಸಾಮಥ್ರ್ಯ ವೃದ್ಧಿಸಿ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಉನ್ನತ ಬದಲಾ ವಣೆ ತರುವಲ್ಲಿ ಯೋಗ ಒಂದು ಚಮತ್ಕಾರವೇ ಸರಿ. ಇಂತಹ ಮಹತ್ವದ ಯೋಗವನ್ನು ಧರ್ಮದ ಚೌಕಟ್ಟಿನೊಳಗೆ ನೋಡುವುದು ಸರಿಯಲ್ಲ ಎಂದು ಮೈಸೂರಿನ ಪ್ರಾದೇ ಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್ ಅಭಿಪ್ರಾಯಪಟ್ಟರು.

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್) ಸಭಾಂ ಗಣದಲ್ಲಿ ಸಂಸ್ಥೆಯ ವಿಶೇಷ ಶಿಕ್ಷಣ ವಿಭಾಗ, ಇಂಡಿಯನ್ ಕೌನ್ಸಿಲ್ ಆಫ್ ಸೋಷಿ ಯಲ್ ಸೈನ್ಸ್, ರಿಹ್ಯಾಬಿಲಿಟೆಷನ್ ಕೌನ್ಸಿಲ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ `ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣದಲ್ಲಿ ಯೋಗದ ಪ್ರಾಮುಖ್ಯತೆ’ ಕುರಿತಂತೆ ಹಮ್ಮಿಕೊಂಡಿರುವ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಯೋಗ ಮತ್ತು ಧರ್ಮ ಒಂದ ಕ್ಕೊಂದು ಥಳುಕು ಹಾಕಿಕೊಂಡಿದ್ದರೂ ಯೋಗವನ್ನು ಧರ್ಮದ ಚೌಕಟ್ಟಿನೊಳಗೆ ನೋಡುವುದನ್ನು ಬಿಡಬೇಕು. ಯೋಗ ದೈಹಿಕ ಮತ್ತು ಮಾನಸಿಕ ಕ್ಷಮತೆ ವೃದ್ಧಿಗೆ ಅಗತ್ಯವಾದ ಅಭ್ಯಾಸ. ಇದಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದ್ದು, ಇದರ ಮಹತ್ವ ಇದೀಗ ಪ್ರಪಂಚಕ್ಕೇ ಅರ್ಥವಾಗ ತೊಡಗಿದೆ. ಇತರೆ ವ್ಯಾಯಾ ಮಗಳಿಗಿಂತ ಯೋಗ ಉತ್ತಮವಾದುದು ಎಂದು ತಿಳಿಸಿದರು.

ನನ್ನ ಆರೋಗ್ಯದಲ್ಲಿ ಕೆಲವು ಏರುಪೇರು ಕಂಡುಬಂದಾಗ ತೂಕ ಇಳಿಸಿಕೊಳ್ಳಲು ವೈದ್ಯರು ಸೂಚಿಸಿದರು. 95 ಕೆಜಿಯಿದ್ದ ನಾನು ಯೋಗಾಭ್ಯಾಸದ ಮೂಲಕ ತೂಕ ಕಡಿಮೆ ಮಾಡಿಕೊಂಡೆ. ಅಷ್ಟೇ ಅಲ್ಲ ನನ್ನ ವೃತ್ತಿ ಬದುಕಿನಲ್ಲಿ ಎದುರಾಗುವ ಒತ್ತಡವೂ ನಿಯಂತ್ರಣಕ್ಕೆ ಸಿಕ್ಕಿತು. ಸಾಮಾ ಜಿಕ ಬದುಕಿನಲ್ಲೂ ಯೋಗದ ಪ್ರಯೋ ಜನ ಹೆಚ್ಚಿದೆ ಎಂದರು.

ದೇಶದ ಮಕ್ಕಳ ಆರೋಗ್ಯಕ್ಕೆ ಸಂಬಂಧಿ ಸಿದಂತೆ 2002ರಿಂದ 2009ರ ಅವಧಿ ಯಲ್ಲಿ ಸಮೀಕ್ಷೆಯೊಂದು ನಡೆಯಿತು. ಯೋಗಾಭ್ಯಾಸದಿಂದ ಮಕ್ಕಳ ಆರೋಗ್ಯ ವೃದ್ಧಿಸಿರುವ ಅಂಶವನ್ನು ಈ ಸಮೀಕ್ಷೆ ಬೆಳಕಿಗೆ ತಂದಿತು. ಅದರಲ್ಲೂ ವಿಶೇಷ ಮಕ್ಕಳಿಗೆ ಯೋಗ ಹೆಚ್ಚು ಪ್ರಯೋಜ ನಕಾರಿ ಎಂಬುದೂ ತಿಳಿದು ಬಂದಿತು. ಈ ನಿಟ್ಟಿನಲ್ಲಿ ಯೋಗಕ್ಕೆ ಸಂಬಂಧಿಸಿದ ಮೂರು ದಿನಗಳ ಈ ಕಾರ್ಯಾಗಾರ ಏರ್ಪಡಿಸಿ ರುವುದು ಸ್ವಾಗತಾರ್ಹ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಆಯಿಷ್‍ನ ನಿರ್ದೇ ಶಕಿ ಪ್ರೊ.ಎಂ.ಪುಷ್ಪಾವತಿ ಮಾತನಾಡಿ, ಯೋಗಾಭ್ಯಾಸ ಕಷ್ಟಸಾಧ್ಯ ಇರಬಹುದು. ಆದರೆ ಅದರ ಪ್ರಯೋಜನ ಅಪಾರ. ಗರ್ಭಿಣಿಯರು ಮಾಡಬಹುದಾದ ಯೋಗದ ಕೆಲ ಅಭ್ಯಾಸ ಕ್ರಮಗಳಿದ್ದು, ಅದರಲ್ಲಿ ತೊಡಗಿಸಿಕೊಂಡರೆ ಹುಟ್ಟುವ ಮಕ್ಕಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಎದು ರಾಗದು. ವಿಶೇಷ ಮಕ್ಕಳು ಯೋಗಾ ಭ್ಯಾಸ ರೂಢಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ದೇಶದ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ವಿಶೇಷ ಶಿಕ್ಷಕರು, ಶಿಕ್ಷಕರು ಹಾಗೂ ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. ಆಯಿಷ್‍ನ ವಿಶೇಷ ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ.ಪಿ.ಮಂಜುಳಾ, ಉಪನ್ಯಾಸಕ ಡಾ.ಅಲೋಕ್ ಕುಮಾರ್ ಉಪಾಧ್ಯ ಮತ್ತಿತರರು ಹಾಜರಿದ್ದರು.