ಮೈಸೂರಲ್ಲಿ ಗಾಳಿಪಟ ಸ್ಪರ್ಧೆ ಆಗಸದಲ್ಲಿ ಹಾರಾಡಿದ ಕಾಗದದ ಹಕ್ಕಿಗಳು

ಮೈಸೂರು: ಒಂದೆಡೆ ಮುಗಿಲು ಮುಟ್ಟಬೇಕೆಂಬ ಹಂಬಲದಲ್ಲಿ ಮುನ್ನುಗ್ಗುತ್ತಿದ್ದ ಮೀನು, ಮತ್ತೊಂದೆಡೆ ಕ್ಷಣ ಮಾತ್ರದಲ್ಲಿ ಸರ್ರನೇ ಆಗಸಕ್ಕೆ ಜಿಗಿದ ಹನುಮ. ಒಂದಕ್ಕಿಂಥ, ಒಂದು ನಾ ಮುಂದು, ತಾ ಮುಂದು ಎಂದು ಗಾಳಿಯ ಸೀಳಿ ಹಕ್ಕಿಗಳಂತೆ ಹಾರುತ್ತಿದ್ದವು…

ಲಲಿತಮಹಲ್ ಹೆಲಿಪ್ಯಾಡ್ ಮೈದಾನ ದಲ್ಲಿ ಮೈಸೂರು ವೀರಶೈವ ಸಜ್ಜನ ಸಂಘ ಭಾನುವಾರ ಆಯೋಜಿಸಿದ್ದ 22ನೇ ವರ್ಷದ ಗಾಳಿಪಟ ಸ್ಪರ್ಧೆಯಲ್ಲಿ ಹಿರಿಯರು- ಕಿರಿಯರು ಎಂಬ ಭೇದ-ಭಾವವಿಲ್ಲದೆ ನೂರಕ್ಕೂ ಹೆಚ್ಚು ಮಂದಿ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಗಾಳಿಪಟ ಸ್ಪರ್ಧೆ ಆರಂಭವಾಗುತ್ತಿ ದ್ದಂತೆ ಸ್ಪರ್ಧಿಗಳು ಮೀನು, ಜೋಕರ್, ಹನುಮ, ಭೂಮಿ ಹೀಗೆ ವಿವಿಧ ಹೆಸರು ಗಳನ್ನು ಹೊಂದಿದ್ದ ಗಾಳಿಪಟಗಳನ್ನು ಆಗಸಕ್ಕೆ ಹಾರಿಸಿದರು. ಆದರೆ, ಕೆಲವರು ಎಷ್ಟೇ ಪ್ರಯತ್ನಿಸಿದರೂ ಗಾಳಿಪಟ ಮೇಲೆ ಹಾರಾಟ ನಡೆಸದೆ ನೆಲಕ್ಕೆ ವಾಪಸ್ಸಾ ಗುತ್ತಿತ್ತು. ಆದರೂ ಛಲಬಿಡದ ಸ್ಪರ್ಧಿಗಳು ಮತ್ತೆ-ಮತ್ತೆ ಪಟವನ್ನು ಹಾರಿಸಲು ಪ್ರಯತ್ನಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಈ ಎಲ್ಲದರ ನಡುವೆ ಬಸವಣ್ಣ ಅವರ ಭಾವಚಿತ್ರವಿದ್ದ ದೊಡ್ಡ ಗಾಳಿಪಟ ಎಲ್ಲರನ್ನು ಹೆಚ್ಚು ಆಕರ್ಷಿಸಿತು. ಸ್ವಚ್ಛ ಭಾರತ್ ಯೋಜನೆ ಕುರಿತು ಮಾಹಿತಿ ನೀಡುವ ಗಾಳಿಪಟವೂ ಗಾಳಿಯಲ್ಲಿ ತೇಲಾಡಿತು. ಪೈಲೇಟ್ ಸೂತ್ರಧಾರನ ಹಿಡಿತದಲ್ಲಿ ಆಕಾಶದಲ್ಲಿ ಹಾರಾಟ ನಡೆಸಿದ್ದ. ಹೀಗೆ ದೇಶಿಯ ಮತ್ತು ವಿದೇಶಿ ಸೇರಿದಂತೆ ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ವಿಜೇತರ ಪಟ್ಟಿ ಇಂತಿದೆ: ಸ್ವದೇಶಿ ವಿಭಾಗ: ಚರಣ್(ಪ್ರ), ಸಿದ್ದಾಂತ್ (ದ್ವಿ), ಎಂ.ಸಿ.ಪ್ರಭು(ತೃ), ಪ್ರೀತೇಶ್, ಭವಾನಿ (ಸ). ವಿದೇಶಿ ವಿಭಾಗ: ಮಾನ್ವಿ(ಪ್ರ), ಪ್ರೀತೇಶ್(ದ್ವಿ), ಜ್ಞಾನವಿ(ತೃ), ದೀಕ್ಷಿತ್, ಸುಜೇಶ್(ಸ). ದೊಡ್ಡದಾದ ಪಟಗಳ ವಿಭಾಗ: ಶರವಣ್(ಪ್ರ), ವಿಶ್ವಾಸ್(ದ್ವಿ), ಮಲ್ಲಿಕಾರ್ಜುನ ಪ್ರಕಾಶ್(ಸ). ಬಾಲಂಗೋಚಿ ಇರುವ ಪಟಗಳ ವಿಭಾಗ: ಎಂ.ಎನ್. ವೈಭವ್(ಪ್ರ), ಅಮೋಘ್(ದ್ವಿ), ವಿದ್ಯಾ(ತೃ). ಮನ್ನಾನ್ ಆರ್ಯ, ಪ್ರೀತೇಶ್(ಸ). ಬಾಲಂಗೋಚಿ ಇಲ್ಲದ ಪಟಗಳ ವಿಭಾಗ: ಚರಣ್(ಪ್ರ), ಕಿರಣ್ ಕುಮಾರ್(ದ್ವಿ), ಎಂ.ಸಿ.ಲಿಯಾ(ತೃ), ಮೈತ್ರೀಯಾ, ಹರ್ಷಿತಾ(ಸ). ಮಲ್ಲಿಕಾರ್ಜುನ ಪ್ರಕಾಶ್ ಸಮಗ್ರ ಪ್ರಶಸ್ತಿ ಪಡೆದುಕೊಂಡರು
ಇದೇ ಸಂದರ್ಭದಲ್ಲಿ ಮುಡಾ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಕೆ.ಭಾಸ್ಕರ್ ರವರು ವಿಜೇತರಿಗೆ ಬಹುಮಾನ ವಿತರಿಸಿ ದರು. ಶಾರದಾ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ವಸಂತಿ ಪಾಲಾಕ್ಷ, ಕಾರ್ಯದರ್ಶಿ ಶೋಭಾ ಜಯಪ್ರಕಾಶ್, ವೇದಾ ಮಲ್ಲಿ ಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.