ಕೆ.ಆರ್.ನಗರ:1.93 ಕೋಟಿ ವಿವಿಧ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ

ಕೆ.ಆರ್.ನಗರ: ಪಟ್ಟಣದ ಮಹಿಳಾ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜುಗಳ 1.93 ಕೋಟಿಯ ವಿವಿಧ ಕಟ್ಟಡ ಕಾಮಗಾರಿಗಳಿಗೆ ಪ್ರವಾಸೋದ್ಯಮ ಸಚಿವರಾದ ಸಾ.ರಾ.ಮಹೇಶ್‍ರವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕಿಗೆ ಶಾಸಕನಾಗಿ ಬಂದ ನಂತರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಹೊಸ ಕಾಲೇಜು ಕಟ್ಟಡಗಳೆಲ್ಲವನ್ನು ನನ್ನ ಅವಧಿಯಲ್ಲಿ ಮಾಡಿದ್ದೇನೆ ಎಂದರು.

ಸರ್ಕಾರಿ ಮಹಿಳಾ ಕಾಲೇಜುನ ಸಿಡಿಸಿ ಕಾರ್ಯಧರ್ಶಿ ಕೆ.ಟಿ.ರಮೇಶ್ ಮತ್ತು ಪದವಿ ಪೂರ್ವ ಕಾಲೇಜಿನ ಸಿಡಿಸಿ ಕಾರ್ಯದರ್ಶಿಯಾದ ವೈ.ಆರ್.ಪ್ರಕಾಶ್‍ರವರ ಒತ್ತಾಯದಂತೆ ಮಹಿಳಾ ಕಾಲೇಜಿಗೆ 1 ಕೋಟಿ ರೂ ಅನುದಾನವನ್ನು ಪಿಯು ಕಾಲೇಜಿಗೆ 93 ಲಕ್ಷ ಅನುದಾನವನ್ನು ಮಂಜೂರಾತಿ ಕೊಡಿಸಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದೇನೆ ಎಂದರು.

ಅದೇ ರೀತಿಯಲ್ಲಿ ಸರ್ಕಾರಿ ಡಿಗ್ರಿ ಕಾಲೇಜಿನ ಸಿಡಿಸಿ ಕಾರ್ಯದರ್ಶಿ ಚಂದ್ರಶೇಖರ್ ಮತ್ತು ಪಾಂಶುಪಾಲರ ಮನವಿಯಂತೆ ಹೆಚ್ಚುವರಿ ಕಟ್ಟಡಕ್ಕೆ 2 ಕೋಟಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.
ವಿದ್ಯಾರ್ಥಿ ದೆಶೆಯಲ್ಲಿ ತುಂಟಾಟ ನೆಪದಲ್ಲಿ ಬದಕನ್ನು ಹಾಳು ಮಾಡಿಕೊಳ್ಳದೆ ಉತ್ತಮ ಶಿಕ್ಷಣವನ್ನು ಪಡೆದು ಬದುಕನ್ನು ರೂಪಿಸಿಕೊಳ್ಳುವ ಮೂಲಕ ಪೋಷಕರಿಗೆ, ತಾಲೂಕಿಗೆ ಕೀರ್ತಿ ತರಬೇಕೆಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರುಗಳಾದ ಪ್ರೊ ಕೆ.ಸಿ.ವೀರಭದ್ರಯ್ಯ, ಡಿ.ಜಿ.ಗೋಪಾಲ್, ದಿಕ್ಷೀತ್, ಪುರಸಭೆ ಅಧ್ಯಕ್ಷೆ ಹರ್ಷ¯ತಾ, ಸಿಡಿಸಿ ಸದಸ್ಯರುಗಳಾದ ಪ್ರೀತುಗಣೇಶ್, ರಾಮಕೃಷ್ಣನ್, ಧನಂಜಯ, ಕೆ.ಎಲ್.ರಮೇಶ್, ತಹಸೀಲ್ದಾರ್ ನಿಖಿತಾ, ಬಿಇಓ ರಾಜು, ಮುಖ್ಯಾಧಿಕಾರಿ ನಾಗಶೆಟ್ಟಿ, ಗುತ್ತಿಗೆದಾರ ಎಚ್.ಪಿ.ಶಿವಪ್ಪ, ಹನಸೋಗೆ ನಾಗರಾಜು, ಬಲೂರು ನಂಜುಂಡೇಗೌಡ ಮತ್ತಿತರರು ಪಾಲ್ಗೊಂಡಿದ್ದರು.