ಎಂಎಲ್‍ಸಿ ಸುನೀಲ್ ಸುಬ್ರಮಣಿಯಿಂದ ಮಾಕುಟ್ಟ ರಸ್ತೆ ಪರಿಶೀಲನೆ

ವಿರಾಜಪೇಟೆ:  ಕೊಡಗು- ಕೇರಳ ಅಂತರಾಜ್ಯ ಹೆದ್ದಾರಿ ಬಾರಿ ಮಳೆಯಿಂದ ಮಾಕುಟ್ಟದ ರಸ್ತೆ ಉದ್ದಕ್ಕೂ ಬರೆ ಕುಸಿದು ನುರಾರೂ ಮರಗಳು ರಸ್ತೆಗೆ ಉರುಳಿ ವಾಹನ ಗಳ ಸಂಚಾರಕ್ಕೆ ಅಡಚಣೆ ಹಾಗೂ ಅಪಾರ ನಷ್ಟ ಸಂಭವಿಸಿರುವ ಹಿನ್ನಲೆ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ್ದ ಕೇರಳದ ಇರಿಟಿಯ ಪಟ್ಟಣ ಪಂಚಾಯಿತಿ ಅಧಿಕಾರಿ ಮತ್ತು ಸದಸ್ಯರು ಗಳೊಂದಿಗೆ ಚರ್ಚೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಕಳೆದ 55 ವರ್ಷಗಳ ಹಿಂದೆ ಈರೀತಿ ಮಳೆ ಬಂದಿತ್ತು ಎನ್ನುತ್ತಾರೆ ಹಿರಿಯರು. ನಂತರ ಇದುವರೆಗೂ ಅನಾಹುತ ಮಾಡುವಂತ ಮಳೆ ಬಂದಿರಲಿಲ್ಲ. ಈ ವರ್ಷ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಅಪಾರ ಹಾನಿ ಉಂಟಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿ ಹೆಚ್ಚಿನ ಅನುದಾನ ಕೋರುವುದಾಗಿ ತಿಳಿಸಿದರು. ಈ ರಸ್ತೆಯ ಕಾಮಗಾರಿಗೆ ರೂ.4 ಕೋಟಿ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಎರಡು ರಾಜ್ಯಗಳು ಸೇರಿ ಪರಿಹಾರ ಕಂಡುಕೊಳ್ಳಬೇಕು ಆದಷ್ಟು ಬೇಗನೆ ವಿಶೇಷ ಅನುದಾನವನ್ನು ಕೋರುವುದಾಗಿ ಹೇಳಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಅವರು ಮಾತನಾಡಿ. ಬಾರಿ ಮಳೆಯಿಂದ ಬರೆ. ಮರಗಳು ರಸ್ತೆಗೆ ಉರುಳಿ ಸಂಪರ್ಕ ಕಡಿತಗೊಂಡಿರುವುದರಿಂದ ಅಪಾರ ನಷ್ಟ ಉಂಟಾಗಿದೆ. ಸರಕಾರ ಕೂಡಲೇ ಅನುದಾನ ಬಿಡುಗಡೆಗೊಳಿಸಿ ಮಾಕುಟ್ಟ ಅಂತರಾಜ್ಯ ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವಂತೆ ಒತ್ತಾಯಿಸಿದರಲ್ಲದೆ, ಈ ಹೆದ್ದಾರಿಯಲ್ಲಿ ಅಗಾಗ ದುರ್ಘಟನೆಗಳು ನಡೆಯುತ್ತಿರುವುದರಿಂದ ಮುಂದೆ ಈ ರೀತಿ ಆಗದಂತೆ ಅರಣ್ಯ ಇಲಾಖೆ ರಸ್ತೆ ಬದಿಯಲ್ಲಿರುವ ಮರಗಳ ಕೊಂಬೆಗಳನ್ನು ಕಡಿಯಬೇಕು, ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತಾಗ ಬೇಕು. ಮುಂದಿನ ಮಳೆಗಾಲಕ್ಕೆ ಅಹಿತಕರ ಘಟನೆ ಗಳು ನಡೆಯದಂತೆ ಲೋಕೋಪ ಯೋಗಿ ಇಲಾಖೆ ಎಚ್ಚರ ವಹಿಸುವುದು ಉತ್ತಮ ಎಂದರು.

ಈ ಸಂದರ್ಭ ಬಿಜೆಪಿಯ ಬಿ.ಜಿ. ಸಾಯಿನಾಥ್, ಅಜೀತ್ ಕರುಂಬಯ್ಯ, ಕೇರಳ ಇರಿಟಿಯ ಪಂಚಾಯಿತಿ ಕಾರ್ಯ ದರ್ಶಿ ಎಂ.ಆರ್.ಸುರೇಶ್, ಸದಸ್ಯರಾದ ವಿ.ವಿ.ಚಂದ್ರ, ಸತ್ಯನ್ ಇತರರು ಭಾಗವಹಿ ಸಿದ್ದರು. ಇದಕ್ಕೂ ಮೊದಲು ಕೇರಳ ಸಂಸದರು ಬೇಟಿ ನೀಡಿದ್ದರು.