ಯಳಂದೂರಿನಲ್ಲಿ ಉಪಹಾರ ಸೇವಿಸಿದ ಮಕ್ಕಳು ಅಸ್ವಸ್ಥ ಪ್ರಕರಣ: ವಸತಿ ಶಾಲೆಗೆ ಗಿರಿಜನ ಕಲ್ಯಾಣಾಧಿಕಾರಿ ಭೇಟಿ, ಪರಿಶೀಲನೆ

ಯಳಂದೂರು: ಮೆಲ್ಲಹಳ್ಳಿ ಗೇಟ್ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಹೆಣ್ಣು ಮಕ್ಕಳ ವಸತಿ ಶಾಲೆಗೆ ಜಿಲ್ಲಾ ಗಿರಿಜನ ಕಲ್ಯಾಣಾಧಿಕಾರಿ ಕೃಷ್ಣಪ್ಪ ಬೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಬಳಿಕ ವಿದ್ಯಾರ್ಥಿಗಳ ಜತೆಯಲ್ಲಿ ಭಾನುವಾರ ಉಪಹಾರ ಸೇವಿಸಿದರು.

ಶನಿವಾರವಷ್ಟೇ ಸುಮಾರು 42 ವಿದ್ಯಾರ್ಥಿಗಳು ಬೆಳಿಗ್ಗೆ ತಿಂಡಿ ತಿಂದು ಮಕ್ಕಳು ಅಸ್ವಸ್ಥರಾಗಿ ಯಳಂದೂರು ಸಾರ್ವಜನಿಕರ ಆಸ್ಪತ್ರೆ ಮತ್ತು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ಹಿನ್ನಲೆಯಲಿ ವಸತಿ ಶಾಲೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಬೇಟಿ ನೀಡಿ ಉಪಹಾರವನ್ನು ಸುಚಿತ್ವವಾಗಿ ನೀಡುವಂತೆ ಸೂಚನೆ ನೀಡಿದರಿಂದ ಜಿಲ್ಲಾ ಗಿರಿಜನ ಅಭಿವೃಧ್ದಿ ಅಧಿಕಾರಿ ದಿಢೀರ್ ಭೇಟಿ ನೀಡಿ ವಸತಿ ನಿಲಯದಲ್ಲಿ ಮಾಡಿದ ಉಪಹಾರ ವಿದ್ಯಾರ್ಥಿಗಳ ಜತೆಯಲ್ಲಿ ಕುಳಿತ್ತು ತಿಂಡಿಸೇವಿಸಿದರು.

ನಂತರ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಆತಂಕ ಬೇಡಾ ಇನ್ನೂ ಮುಂದೆ ಇಂತಹ ಕಹಿ ಘಟನೆಗಳು ನಡೆಯದಂತೆ ಈಗಾಗಲ್ಲೆ ವಸತಿ ಶಾಲೆ ಅಡುಗೆ ಸಹಾ ಯಕೀಯರು, ಶಿಕ್ಷಕರು ಮತ್ತು ಪ್ರಾಂಶು ಪಾಲರು, ನಿಯಲ ಪಾಲಕರಿಗೆ ತಾಕ್ಕೀತ್ತು ಮಾಡಿದ್ದೇನೆ ಎಂದು ಮಕ್ಕಳಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರಿಗೆ ದೂರವಾಣಿ ಕೆರೆ ಮಾಡಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.