ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಡಿಸಿಟಿ ಚಾಲನೆ

ಮದ್ದೂರು: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾ ಗುವುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಭರವಸೆ ನೀಡಿದರು.

ತಾಲೂಕಿನ ಮಾಲಗಾರನಹಳ್ಳಿಯಲ್ಲಿ ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ತಿಂಗಳ ಅಂತ್ಯದಲ್ಲಿ ತಾಲೂಕಿನಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳ ಲಾಗುವುದು. ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ನಾನು ಹಿಂದೆ ಬೀಳುವುದಿಲ್ಲ ಎಂದು ತಿಳಿಸಿದರು.

ನಾನು ಸಚಿವನಾದ ನಂತರ ತಾಲೂಕಿ ನಲ್ಲಿ ಮೊದಲಿನಂತೆ ಸಿಗುವುದಿಲ್ಲ ಎಂಬ ಆತಂಕ ಜನರಿಗೆ ಬೇಡ. ನನ್ನ ಮಗ ಟಿ.ಡಿ. ಸಂತೋಷ್ ನಿಮ್ಮ ಸಂಪರ್ಕದಲ್ಲಿ ಇರುತ್ತಾರೆ. ನೀವು ಯಾವಾಗ ಬೇಕಾದರೂ ನನಗೆ ದೂರವಾಣಿಕರೆ ಮಾಡಿ ಮಾತನಾಡಬಹುದು ಎಂದರು.

ತಾಲೂಕಿಗೆ ಅವಶ್ಯಕವಾಗಿ ಬೇಕಾದ ಸುಮಾರು 500 ಟನ್ ರಸಗೊಬ್ಬರ ಮತ್ತು ಬಿತ್ತನೆ ಬೀಜ ಗೋದಾಮಿನಲ್ಲಿ ದಾಸ್ತಾನಿದೆ. ಇನ್ನು ಹೆಚ್ಚು ಬೇಕಾದರೆ ಕೊಡಿಸುವುದಾಗಿ ಭರವಸೆ ನೀಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರ ಆಯ್ಕೆ ಬಗ್ಗೆ ನನಗೇನೂ ಗೊತ್ತಿಲ್ಲ ಅದು ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು. ಮುಖಂಡರಾದ ರಾಮ ಲಿಂಗಯ್ಯ, ಸುಧೀರ್, ದೊರೆಸ್ವಾಮಿ, ಮಹದೇವು, ಶಿವಣ್ಣ, ತಿಮ್ಮೇಶ್ ಇನ್ನಿತರರಿದ್ದರು.