ಅಪಘಾತ ಗಾಯಾಳುಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರಕದೇ ಅಧಿಕ ಮಂದಿ ಸಾವು

ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ವಿಷಾದ
ಮೈಸೂರು, ಜ.13(ಎಸ್‍ಪಿಎನ್)- ರಾಷ್ಟ್ರೀಯ ಹೆದ್ದಾರಿ ಅಥವಾ ಗ್ರಾಮೀಣ ಪ್ರದೇಶದ ಹೈವೇಗಳಲ್ಲಿ ಸಂಭವಿಸುವ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕುತ್ತಿಲ್ಲ. ವಿಳಂಬದಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅಭಿಪ್ರಾಯಪಟ್ಟರು.

ಮೈಸೂರು ಜೆ.ಕೆ.ಮೈದಾನದ ಎಂಎಂಸಿ ಮತ್ತು ಆರ್‍ಐನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ- 2020 ಅಂಗವಾಗಿ ರಸ್ತೆ ಸುರಕ್ಷತೆ, ಜೀವರಕ್ಷಕ, ಅಮೂಲ್ಯ ಸಮಯ ಮತ್ತು ಆಪತ್ಬಾಂಧವ ಕಾನೂನು ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಪಘಾತದಲ್ಲಿ ಪ್ರತಿವರ್ಷ 1.50 ಲಕ್ಷ ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ 18ರಿಂದ 45 ವಯಸ್ಸಿನವರೇ ಹೆಚ್ಚಾಗಿದ್ದು, ಇದು ದೇಶದ ಪ್ರಗತಿಗೂ ಮಾರಕವಾಗುತ್ತಿದೆ. ಅದರಲ್ಲಿ ದ್ವಿ ಚಕ್ರವಾಹನ ಸವಾರರು ಶೇ.70 ರಷ್ಟು ಹೆಲ್ಮೆಟ್ ಧರಿಸದೇ ಇರುವವರು ಹೆಚ್ಚು ಸಾವನ್ನಪ್ಪುತ್ತಿರು ವುದು ಬೇಸರ ಸಂಗತಿ ಎಂದರು.

ಮನುಷ್ಯನ ಪ್ರಾಣ ಅಮೂಲ್ಯವಾದದ್ದು, ಹಾಗಾಗಿ, ಅಪಘಾತ ದಿಂದ ಗಾಯಗೊಂಡವರ ಪ್ರಾಣ ಸಂರಕ್ಷಣೆಗೆ ವಾಹನ ಚಾಲಕರು, ಸಾರ್ವಜನಿಕರು ಹಾಗೂ ವೈದ್ಯಕೀಯ ಸಿಬ್ಬಂದಿ ಮಾನವೀಯ ದೃಷ್ಟಿಯಿಂದ ಮುಂದಾಗಬೇಕು. ಜೊತೆಗೆ ಚಾಲಕರು ಮತ್ತು ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ನೀಡಿದರು.

ಅಪಘಾತ ನಿಯಂತ್ರಿಸಬೇಕು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಗುರಿಗಳನ್ನು ಇಟ್ಟುಕೊಂಡು ನಗರ ಸಂಚಾರ ಪೆÇಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಸಾರ್ವ ಜನಿಕರು, ವಾಹನ ಚಾಲಕರು ಹಾಗೂ ಸವಾರರ ಸಹಕಾರ ಅತ್ಯಗತ್ಯ. ಹಾಗಾಗಿ, ಪ್ರತಿಯೊಬ್ಬರ ಜೀವ ರಕ್ಷಣೆಗೆ ಸಂಚಾರಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದರು.

ಮೈಸೂರು ಮೆಡಿಕಲ್ ಕಾಲೇಜಿನ ನಿರ್ದೇಶಕ ಮತ್ತು ಡಿನ್ ಡಾ.ಸಿ.ಪಿ.ನಂಜರಾಜ್, ಸಂಚಾರ ವಿಭಾಗದ ಎಸಿಪಿ ಎಸ್.ಎನ್.ಸಂದೇಶಕುಮಾರ್ ಪ್ರಾತ್ಯಕ್ಷಿಕೆ ಮೂಲಕ ಮೈಸೂರಿನ ವಿವಿಧ ಸ್ಥಳಗಳಲ್ಲಿ ಸಂಭವಿಸಿರುವ ಅಪಘಾತದ ಸಿಸಿಟಿವಿ ಫುಟೇಜಸ್ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಮೈಸೂರಿನ ವಿವಿಧ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿ ಗಳು ಹಾಗೂ ಆಟೋ ಚಾಲಕರು ಭಾಗವಹಿಸಿದ್ದರು. ವೇದಿಕೆ ಯಲ್ಲಿ ನಗರ ಸಂಚಾರ ಮತ್ತು ಅಪರಾಧ ವಿಭಾ ಗದ ಡಿಸಿಪಿ ಬಿ.ಟಿ.ಕವಿತಾ, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾ ಧಿಕಾರಿ ನಾಗರಾಜು ಇದ್ದರು.