ವೀರನಹೊಸಳ್ಳಿ ಆಶ್ರಮ ಶಾಲೆಯಲ್ಲಿ ಪೋಷಣ್ ಅಭಿಯಾನ

ಹನಗೋಡು, ಮಾ.17(ಮಹೇಶ)-ದೇಶದಲ್ಲಿ ಆಹಾರೋತ್ಪಾದನೆ ಜನ ಸಂಖ್ಯೆಯ ಆಧಾರದಲ್ಲಿ ದುಪ್ಪಟ್ಟಾಗಿದ್ದರೂ, ಆಹಾರ ವ್ಯರ್ಥ ಮಾಡುವ ಹಾಗೂ ಆಹಾರಕ್ಕಾಗಿ ಪರದಾಡುವ ಜನರನ್ನು ಕಾಣುತ್ತಿದ್ದೇವೆ. ಈ ಅಸಮಾನತೆ ತೊಲಗ ಬೇಕಿದೆ ಎಂದು ಉಪವಿಭಾಗಾಧಿಕಾರಿ ಬಿ.ಎನ್.ವೀಣಾ ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಾಲೂಕಿನ ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಳ್ಳಿ ಆಶ್ರಮಶಾಲೆಯಲ್ಲಿ ಪೋಷಣ್ ಅಭಿಯಾನ ಯೋಜನೆ ಯಡಿ ಆಯೋಜಿಸಿದ್ದ ಪೋಷಣ್ ಪಕ್ವಾಡ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯ ರಕ್ಷಣೆ ಕುರಿತಂತೆ ಮನೆ ಗಳಲ್ಲಿ ಅಮ್ಮ, ಅಜ್ಜಿಯರು ನೀಡುತ್ತಿದ್ದ ಸಲಹೆಗಳನ್ನು ನಾವು ನಿರ್ಲಕ್ಷಿಸುತ್ತಿ ದ್ದೇವೆ. ಹಾಗಾಗಿ ಸರ್ಕಾರಗಳೇ ಇದೀಗ ಅವೆಲ್ಲವನ್ನೂ ಯೋಜನೆಗಳಾಗಿ ಜಾರಿ ಗೊಳಿಸಿವೆ. ದೇಶದ ಮುಂದಿನ ಪೀಳಿಗೆ ಸದೃಢವಾಗಿರಲು ತಾಯಂದಿರಿಗೆ ಹಲವು ಯೋಜನೆ ಜಾರಿಗೊಂಡಿದೆ. ಪೌಷ್ಟಿಕ ಆಹಾರ ಸೇವನೆ ನಮ್ಮ ಗುರಿಯಾಗಲಿ ಎಂದರು.

ತಹಸೀಲ್ದಾರ್ ಐ.ಇ.ಬಸವರಾಜು ಮಾತನಾಡಿ, ನಾಲಿಗೆ ರುಚಿಗೆ ದಾಸರಾಗಿ ರುವ ಕಾರಣ ಅನಾರೋಗ್ಯಕ್ಕೆ ಕಾರಣ ವಾಗುವ ಆಹಾರ ಸೇವನೆ ಮಾಡುತ್ತಿ ದ್ದೇವೆ ಎಂದು ವಿಷಾದಿಸಿದರು.

ಇಓ ಹೆಚ್.ಡಿ.ಗಿರೀಶ್ ಮಾತನಾಡಿ, ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾ ಧಿಕಾರಿ ಡಾ.ಅನಂತಶಯನ ಮಾತನಾಡಿ ದರು. ದೊಡ್ಡಹೆಜ್ಜೂರು ಗ್ರಾಪಂ ಅಧ್ಯಕ್ಷ ಶಿವಶಂಕರ್, ತಾಲೂಕು ಆರೋಗ್ಯ ಶಿಕ್ಷಣಾ ಧಿಕಾರಿ ರಾಜೇಶ್ವರಿ, ಸಿಡಿಪಿಓ ರಶ್ಮಿ, ಹಿರಿಯ ಮೇಲ್ವಿಚಾರಕಿ ಸಂಗೀತಾ, ಮೇಲ್ವಿಚಾರಕಿ ಅಕ್ಕಮಹಾದೇವಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿದ್ದರು.