ಜನಪರ ಯೋಜನೆಗಳೇ ಕಾಂಗ್ರೆಸ್ ಗೆಲುವಿಗೆ ಸಹಕಾರಿ

ಎಚ್.ಡಿ.ಕೋಟೆ: ಸಿದ್ದರಾಮಯ್ಯನವರ 5 ವರ್ಷದ ಆಡಳಿತ ಅವಧಿಯಲ್ಲಿ ಜನರಿಗೆ ನೀಡಿದ ಜನಪರ ಯೋಜನೆಗಳು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.

ತಾಲೂಕಿನ ಅಣ್ಣೂರು ಜಿಪಂ ಕ್ಷೇತ್ರದ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಭ್ಯರ್ಥಿ ಅನಿಲ್ ಚಿಕ್ಕಮಾದು ಪರ ಮನೆ ಮನೆಗೆ ತೆರಳಿ ಮತಯಾಚಿಸಿ, ಮಾತನಾಡಿದರು. ದಿ. ಶಾಸಕ ಚಿಕ್ಕಮಾದು ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ನಾನು ಅವರಿಗೆ ಸಂಪೂರ್ಣವಾಗಿ ಸಹಕಾರ ಕೊಟ್ಟಿದ್ದೆ. ಈ ಬಾರಿ ಅವರ ಸ್ಥಾನದಲ್ಲಿ ಅವರ ಮಗ ಅನಿಲ್ ಸ್ಪರ್ಧಿಸಿದ್ದಾರೆ. ಅನಿಲ್‍ಗೆ ತಾಲೂಕಿನ ಅಭಿವೃದ್ಧಿ ಮಾಡುವ ಕನಸಿದೆ. ಆ ಮೂಲಕ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿಯನ್ನು ತೆಗೆಯ ಬೇಕೆಂಬುದು ಅವರ ಮನಸ್ಸಿನಲ್ಲಿದೆ. ಈಗಾಗಲೇ 41 ಗ್ರಾಪಂ ಕೇಂದ್ರಗಳಲ್ಲಿ ಪ್ರಚಾರ ನಡೆಸಲಾಗಿದೆ. ಎಲ್ಲೆಡೆಯೂ ಕಾಂಗ್ರೆಸ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತದಾರರು ಅನಿಲ್‍ಗೆ ಮತ ನೀಡಿ ಎಂದು ಮನವಿ ಮಾಡಿದರು.

ಅಭ್ಯರ್ಥಿ ಅನಿಲ್ ಚಿಕ್ಕಮಾದು ಮಾತ ನಾಡಿ, ತಾಲೂಕು ಅಭಿವೃದ್ಧಿಗೆ ಹಾಗೂ ನಿಮ್ಮ ಸೇವೆ ಮಾಡಲು ನನಗೆ ಮತ ನೀಡುವ ಮೂಲಕ ಆಶೀರ್ವಾದ ಮಾಡಿ ಎಂದು ಕೋರಿದರು.

ಶಾಂತಿಪುರ, ಕೆ.ಜಿ.ಹುಂಡಿ ಗಣ ಶೆಡ್ಡು, ಟೈಗರ್ ಬ್ಲಾಕ್, ಕೆ.ಯಡತೊರೆ, ನಂಜ ನಾಯಕನಹಳ್ಳಿ, ಹೊಸಹಳ್ಳಿ, ಅಣ್ಣೂರು, ರಾಜೇಗೌಡನಹುಂಡಿ, ಭೀಮನಹಳ್ಳಿ ಗ್ರಾಮಗಳಲ್ಲಿ ಮತಯಾಚಿಸಿದರು.

ತಾಪಂ ಸದಸ್ಯ ಎಚ್.ಟಿ. ಗಿರಿಗೌಡ, ಅಂಕನಾಯಕ, ಸುಂದರನಾಯಕ, ಬ್ಲಾಕ್ ಅಧ್ಯಕ್ಷ ಏಜಾಜ್ ಪಾಷಾ, ಮನುಗನಹಳ್ಳಿ ಮಾದಪ್ಪ, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣೇಗೌಡ, ಜಿಪಂ ಮಾಜಿ ಸದಸ್ಯ ಎಚ್.ಸಿ.ಶಿವಣ್ಣ, ಬಿ.ವಿ.ಬಸವರಾಜು, ನಂದಿನಿ ಚಂದ್ರಶೇಖರ್, ಎಚ್.ಸಿ.ಮಂಜು ನಾಥ್, ಡಿಸಿಸಿ ಸದಸ್ಯ ಪರಶಿವಮೂರ್ತಿ, ಬಾಲಯ್ಯ, ಶಂಭುಲಿಂಗನಾಯಕ, ಶಿವಪ್ಪಕೋಟೆ, ಸಿದ್ದರಾಮು, ರಾಜೇಗೌಡ, ಮಹದೇವು, ಕಾರ್ತಿಕ್, ದಾಸನಾಯಕ, ಮೂರ್ತಿ, ಚಂದ್ರು, ಕುಮಾರ್, ರಾಮಕೃಷ್ಣ, ಮತ್ತಿತರರು ಹಾಜರಿದ್ದರು.