ಲೋಕಸಭಾ ಚುನಾವಣೆಗೆ ಅಗತ್ಯ ಸಿದ್ಧತೆ

ಮಡಿಕೇರಿ: ಏ.18 ರಂದು ನಡೆ ಯುವ ಲೋಕಸಭಾ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ಜತೆ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 4,41,041 ಮತ ದಾರರಿದ್ದು, ಇವರಲ್ಲಿ 2,18,994 ಪುರು ಷರು ಮತ್ತು 2,22,025 ಮಹಿಳಾ ಮತ ದಾರರು ಹಾಗೂ 22 ಇತರೆ ಮತದಾರರು ಇದ್ದಾರೆ. ಹಾಗೆಯೇ 1,361 ಸೇವಾ ಮತ ದಾರರು ಇದ್ದು, ಇವರಲ್ಲಿ 1312 ಪುರುಷ ಸೇವಾ ಮತದಾರರು ಮತ್ತು 49 ಮಹಿಳಾ ಸೇವಾ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 543 ಮತಗಟ್ಟೆಗಳನ್ನು ಸ್ಥಾಪಿ ಸಲಾಗಿದ್ದು, ಇದರಲ್ಲಿ 61 ನಗರ ಪ್ರದೇಶ ಹಾಗೂ 482 ಗ್ರಾಮಾಂತರ ಪ್ರದೇಶದ ಮತಗಟ್ಟೆಗಳನ್ನು ಒಳಗೊಂಡಿದೆ ಎಂದು ತಿಳಿಸಿದರು. ಕೊಡಗು-ಮೈಸೂರು ಕ್ಷೇತ್ರ ದಲ್ಲಿ 22 ಮಂದಿ ಕಣದಲ್ಲಿದ್ದಾರೆ. ಆದ್ದ ರಿಂದ ಈ ಬಾರಿ ಪ್ರತಿ ಮತಗಟ್ಟೆಯಲ್ಲಿ 2 ಬ್ಯಾಲೆಟ್ ಯುನಿಟ್ ಬಳಸಲಾಗುತ್ತದೆ ಎಂದರು. ಈಗಾಗಲೇ ವಿದ್ಯುನ್ಮಾನ ಮತ ಯಂತ್ರಗಳ ಮೊದಲ ಹಂತದ ಪರಿಶೀ ಲನಾ ಕಾರ್ಯ ನಡೆದಿದೆ. ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1,251 ಬ್ಯಾಲೆಟ್ ಯುನಿಟ್, 721 ಕಂಟ್ರೋಲ್ ಯುನಿಟ್ ಮತ್ತು 667 ವಿವಿಪ್ಯಾಟ್ ಬಳ ಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದರು. ಮತದಾರರ ಸಹಾಯಕ್ಕಾಗಿ ಚುನಾವಣಾ ಆಯೋಗವು ವೋಟರ್ ಹೆಲ್ಫ್ ಲೈನ್ ಆಪ್, ಚುನಾವಣಾ ಆಪ್ ಮತ್ತು ಸಿ-ವಿಜಿಲ್ ಆಪ್‍ಗಳನ್ನು ಬಿಡುಗಡೆ ಮಾಡಿದ್ದು, ಇದನ್ನು ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಭಾರತ ಚುನಾವಣಾ ಆಯೋಗದ ನಿರ್ದೇ ಶನದಂತೆ ಹೊಸದಾಗಿ ಸೇರ್ಪಡೆಗೊಂಡ ಮತ್ತು ತಿದ್ದುಪಡಿ ಮಾಡಲಾದ ಒಟ್ಟು 11,261 ಮತದಾರರಿಗೆ ಭಾವಚಿತ್ರವಿರುವ ಮತ ದಾರರ ಗುರುತಿನ ಚೀಟಿಯನ್ನು ಬೂತ್ ಮಟ್ಟದ ಅಧಿಕಾರಿಗಳ ಮೂಲಕ ವಿತರಿಸ ಲಾಗಿದೆ. ಹಾಗೆಯೇ ಜಿಲ್ಲೆಯ ಎಲ್ಲಾ ಒಟ್ಟು 4,41,041 ಮತದಾರರಿಗೆ ವೋಟರ್ ಸ್ಲಿಪ್‍ನ್ನು ಬೂತ್ ಮಟ್ಟದ ಅಧಿಕಾರಿಗಳ ಮೂಲಕ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 1,42,716 ಕುಟುಂಬ ಗಳಿಗೆ ಪ್ರತಿ ಕುಟುಂಬಕ್ಕೆ ಒಂದರಂತೆ ಮತ ದಾರರ ಗೈಡ್‍ನ್ನು ಬೂತ್ ಮಟ್ಟದ ಅಧಿ ಕಾರಿಗಳ ಮೂಲಕ ವಿತರಿಸಲು ಸಹ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮತದಾರರ ಗೈಡ್ ನಲ್ಲಿ ಮತದಾನ ಕೇಂದ್ರದಲ್ಲಿ ಇರುವ ಸೌಲ ಭ್ಯಗಳ ವಿವರ, ಮತದಾರರು ಯಾವ ಮತ ಗಟ್ಟೆಯಲ್ಲಿ ಮತದಾನ ಮಾಡಬೇಕು ಎಂಬ ಬಗ್ಗೆ ವಿವರಗಳು, ವಿವಿಪ್ಯಾಟ್ ಉಪಯೋಗಿ ಸುವ ರೀತಿ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಸಿ-ವಿಜಿಲ್ ಆಪ್ ಮೂಲಕ ದೂರು ಸಲ್ಲಿಕೆಯ ಬಗ್ಗೆ ವಿವರ, ಸಹಾಯವಾಣಿಯ ವಿವರ ಮತ್ತು ಎಪಿಕ್ ಸಂಖ್ಯೆಯನ್ನು ಉಪಯೋಗಿಸಿ ಮತದಾ ರರ ವಿಧಾನಸಭಾ ಕ್ಷೇತ್ರ, ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆಯನ್ನು ಅತೀ ಸುಲಭ ವಾಗಿ ಎಸ್‍ಎಂಎಸ್ ಮೂಲಕ ಕಂಡು ಕೊಳ್ಳಲು ದೂರವಾಣಿ ವಿವರ ಮತ್ತು ಮತ ದಾರರ ಗುರುತಿನ ಚೀಟಿ ಹೊಂದಿಲ್ಲದೇ ಇದ್ದರೆ ಮತದಾನಕ್ಕೆ ಹಾಜರುಪಡಿಸ ಬೇಕಾದ ದಾಖಲೆಗಳ ವಿವರ ಹಾಗೂ ಚುನಾವಣೆ ಮತ್ತು ಚುನಾವಣಾ ಆಯೋಗದ ಮಹತ್ತರ ವಿಷಯಗಳ ಕೈಪಿಡಿಯನ್ನು ಮತ ದಾರರ ಮನೆ ಬಾಗಿಲಿಗೆ ತಲುಪಿಸಲಾಗು ತ್ತಿದೆ ಎಂದು ಕಣ್ಮಣಿ ಜಾಯ್ ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 543 ಮತಗಟ್ಟೆಗ ಳಿದ್ದು, ಇವುಗಳಲ್ಲಿ 123 ಸೂಕ್ಷ್ಮ(ಕ್ರಿಟಿಕಲ್) ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮಡಿ ಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 91 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ 53 ಮತಗಟ್ಟೆಗಳನ್ನು ಕಾಡಾನೆ ಸಂಘರ್ಷ ಇರುವ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು ಸುರಕ್ಷಿತವಾಗಿ ಮತಗಟ್ಟೆ ತಲುಪಲು ಮತ್ತು ಮತದಾನ ಪೂರ್ಣ ಗೊಂಡ ನಂತರ ಸುರಕ್ಷಿತವಾಗಿ ಡಿ-ಮಸ್ಟರಿಂಗ್ ಕೇಂದ್ರಕ್ಕೆ ತಲುಪುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅರಣ್ಯ ಇಲಾಖೆ ಕಚೇರಿಯಲ್ಲಿ 24×7 ನಿಯಂ ತ್ರಣ ಕೊಠಡಿ ತೆರೆಯಲಾಗಿದೆ. (ದೂ.ಸಂ: 08272-298161). ಚುನಾವಣೆ ಅಧಿಸೂ ಚನೆ ಪ್ರಕಟ ವಾದ ನಂತರ ಇಲ್ಲಿಯವರೆಗೆ 1,97,000 ನಗದು ಹಣ ಮುಟ್ಟುಗೋಲು ಮಾಡಲಾಗಿದೆ. ರೂ. 78,20,829 ಮೌಲ್ಯದ 11,562 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಲೋಕಸಭಾ ಚುನಾ ವಣೆಯನ್ನು ಸುಸೂತ್ರವಾಗಿ ನಡೆಸಲು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಏ.16ರ ಸಂಜೆ 6 ಗಂಟೆಯಿಂದ ಏ.18ರ ಮಧ್ಯರಾತ್ರಿವರೆಗೆ ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ಮದ್ಯ ಮಾರಾಟ, ಸಾಗಾಣಿಕೆ, ಶೇಖ ರಣೆ, ಎಲ್ಲಾ ರೀತಿಯ ಬಾರ್, ರೆಸ್ಟೋ ರೆಂಟ್, ಕ್ಲಬ್, ಸ್ಟಾರ್ ಹೋಟೆಲ್ ಮುಂತಾ ದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟ ವನ್ನು ನಿಷೇಧಿಸಲಾಗಿದೆ.

ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವುದು. ಮತದಾರರು ಅವರ ಹಕ್ಕಿನಂತೆ ಮುಕ್ತವಾಗಿ ಮತದಾನ ಮಾಡಬೇಕು ಎಂಬ ಉದ್ದೇಶದಿಂದ ಪ್ರಜಾಪ್ರತಿನಿಧಿ ಕಾಯ್ದೆಯಂತೆ ಎಲ್ಲಾ ಖಾಸಗಿ ರಂಗದ ಉದ್ಯಮಿದಾರರು, ಪ್ಲಾಂಟೇಶನ್ ಮಾಲಿಕರು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಮಾಲೀಕರು, ಕಾರ್ಖಾನೆ ಮಾಲೀಕರು, ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಮಾಲಿಕರು ಹಾಗೂ ಇನ್ನಿತರೆ ಸಂಸ್ಥೆಗಳ ಮಾಲಿಕರು, ಉದ್ಯೋಗದಾತರು, ಅವರ ಬಳಿ ಕೆಲಸ ಮಾಡುತ್ತಿರುವ ಕಾರ್ಮಿಕ ಮತದಾರರಿಗೆ ಏಪ್ರಿಲ್ 18 ರಂದು ವೇತನ ಸಹಿತ ರಜೆ ನೀಡಲು ಆದೇಶ ಹೊರಡಿಸಲಾಗಿದೆ.

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಆದಾಯ ತೆರಿಗೆ ಇಲಾಖೆಯ ನೋಡಲ್ ಅಧಿಕಾರಿ ಶ್ರೇಯಾ, ಉಪ ಪೊಲೀಸ್ ವರಿ ಷ್ಠಾಧಿಕಾರಿ ಸುಂದರರಾಜ್, ಅಬಕಾರಿ ಇಲಾ ಖೆಯ ಅಧಿಕಾರಿ ವೀರಣ್ಣ, ಲೀಡ್ ಬ್ಯಾಂಕ್ ಅಧಿಕಾರಿ ಗುಪ್ತಾಜಿ ಇತರರು ಇದ್ದರು.