ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಚಾಮರಾಜನಗರ, ಡಿ. 9- ನಾನಾ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಧ್ವನಿ ಕೊಳಚೆ ಪ್ರದೇಶಗಳ ಮಹಿಳಾ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಶ್ರೀಚಾಮರಾಜೇಶ್ವರ ದೇವಾ ಲಯದಲ್ಲಿ ಆವರಣದಲ್ಲಿ ಸಮಾವೇಶ ಗೊಂಡ ಪ್ರತಿಭಟನಾನಿತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾ ಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹೆಣ್ಣು ಮಕ್ಕಳ ರಕ್ಷಣೆಗಾಗಿ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ನಿಷೇಧಿಸಿ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾ ಯಿಸಿದರು. ಎಲ್ಲಾ ಸಮಗ್ರ ಶಾಸನ ಅಥವಾ ಗೃಹ ಕಾರ್ಮಿಕನಿಗೆ ಐಎಲ್‍ಒ ಸಮಾವೇಶ 189 ಮತ್ತು ಶಿಫಾರಸ್ಸು -201ನ್ನು ಅನುಸರಿ ಸಬೇಕು. ಗೃಹ ಕಾರ್ಮಿಕರು, ಉದ್ಯೋಗ ದಾತರು ಮತ್ತು ಸೇವೆ ಪೂರೈಕೆದಾರರ ನೋಂದಣೆ ಮತ್ತು ದೇಶಿಯ ಕೆಲಸದ ವಲಯ ದಲ್ಲಿರುವ ವಲಸೆ ಕಾರ್ಮಿಕರ ನೋಂದಣಿ ಯನ್ನು ಮಾಡಬೇಕು. ಗೃಹ ಕಾರ್ಮಿಕರ ಕೆಲಸಕ್ಕೆ ಸಂಬಂಧಿಸಿದಂತೆ ಕಾರ್ಡ್‍ಗಳು, ದಾಖಲೆಗಳನ್ನು ನಿರ್ವಹಣೆ ಮಾಡಬೇಕು ಎಂದು ಪ್ರತಿಭಟನಾನಿತರರು ಆಗ್ರಹಿಸಿದರು.

ಗೃಹ ಕಾರ್ಮಿಕರು ವಲಸೆ ಹೋದ ಸಂದರ್ಭದಲ್ಲಿ ಏಜೆನ್ಸಿಗಳು ಯಾವುದೇ ರೀತಿಯ ಶೋಷಣೆ ಮಾಡಬಾರದು. ನಿಯಂತ್ರಿಸಬಾರದು. ರಾಜ್ಯ ಸರ್ಕಾರ ಗೃಹ ಕಾರ್ಮಿಕರ ಕೆಲಸವನ್ನು ನಿಯಂತ್ರಣ, ನಿರ್ವಹಣೆ ಮಾಡಬೇಕು. ಗೃಹ ಕಾರ್ಮಿಕ ರಿಗೆ ಕನಿಷ್ಟ ವೇತನ, ವಾರದ ರಜೆ, ಆಸ್ಪತ್ರೆ ರಜೆ, ವರ್ಷ ರಜೆಗಳನ್ನು ಗೃಹ ಕಾರ್ಮಿಕರು ಮತ್ತು ಕೆಲಸ ಕೊಡುವರ ಮಧ್ಯ ಒಪ್ಪಂದ ಇರಬೇಕು. ಗೃಹ ಕಾರ್ಮಿಕರಿಗೆ ಕಾರ್ಮಿಕರ ರಾಜ್ಯ ವಿಮಾ ಸೌಲಭ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಅಲ್ಲದೆ ಹೆರಿಕೆ ರಜೆಯನ್ನು ಕೊಡುವಂತೆ ನೋಂದಣೆ ಮಾಡಬೇಕು. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಲ್ಯಾಣ ಸಮಿತಿಯ ವೇತನ ಮತ್ತು ಇತರೆ ವಿಷಯ ಗಳನ್ನು ನೋಂದಣೆ ಮಾಡಿಕೊಳ್ಳಬೇಕು. ಸಾಮಾಜಿಕ ಭದ್ರತೆ ಮತ್ತು ಹೆರಿಗೆ ಭತ್ಯ ವಿಚಾರದಲ್ಲಿ ಮಹಿಳೆಯರಿಗೆ ಕಲ್ಯಾಣ ಸಮಿತಿಯಿಂದ ಸಾಲ ಹಾಗೂ ಸಹಾಯ ಧನಗಳನ್ನು ನೀಡುವುದು ಮಹಿಳಾ ಕಾರ್ಮಿಕರ ಚಾರ್ಟರ್ ಅನೌಪಚಾರಿಕ ಆರ್ಥಿಕತೆಯಲ್ಲಿ ಸಾಲ ಹಾಗೂ ಸಹಾಯಧನಗಳನ್ನು ನೀಡ ಬೇಕು. ಮಹಿಳಾ ಕಾರ್ಮಿಕರ ಚಾರ್ಟರ್ ಅನೌಪಚಾರಿಕ ಆರ್ಥಿಕತೆಯಲ್ಲಿ ಮಹಿಳೆ ಯರಿಗಾಗಿ ಬದಲಾವಣೆಯ ಕಾರ್ಯಸೂಚಿ 21ರಲ್ಲಿ ತರಬೇಕು ಎಂದು ಒತ್ತಾಯಿಸಿದರು.

ಕಲ್ಯಾಣ ನಿಧಿಯ ರಚನೆ ದೇಶಿಯ ಕಾರ್ಮಿಕರ ಕಲ್ಯಾಣ ನಿಧಿಗೆ ಕೊಡುಗೆ ಗಾಗಿ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಿದ ಮನೆ ತೆರಿಗೆಯ ಶೇ1 ರಷ್ಠು ಪ್ರತಿ ತಿಂಗಳು ದೇಶಿಯ ಕಾರ್ಮಿಕರ ಕಲ್ಯಾಣ ನಿಧಿಗೆ ಸಲ್ಲು ತ್ತದೆ. ಯಾವುದೇ ರೂಪದಲ್ಲಿ ಪಾವತಿಸಿದ ವೇತನ ಮತ್ತು  ಕಡಿಮೆ ಪಾವತಿ ವೇತನ ಮತ್ತು ಶೋಷಣೆಯ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾ ಮಟ್ಟದಲ್ಲಿ ಫಾಸ್ಟ್‍ಟ್ರ್ಯಾಕ್ ಕಾರ್ಮಿಕರ ನ್ಯಾಯಾಲಯ ಸ್ಥಾಪಿಸ ಬೇಕು. ಕೆಲಸ ಮಾಡುವ ಮಹಿಳೆಯರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು. ಗೃಹ ಕಾರ್ಮಿಕರಿಗೆ ವಸತಿ ಯೋಜನೆಯಡಿಯಲ್ಲಿ ಬಾಡಿಗೆ ಮನೆ ವ್ಯವಸ್ಥೆ ಮಾಡಬೇಕು. ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಗೃಹಗಳು, ಮಕ್ಕಳಿಗೆ ವಿಶೇಷ ಕೊಠಡಿಗಳು, ಮಕ್ಕಳನ್ನು ನೋಡಿಕೊಳ್ಳಲು ಮಹಿಳೆಯರೊಬ್ಬರನ್ನು ನೇಮಿಸಬೇಕು. ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯಿದೆ ಪರಿಣಾಮಕಾರಿ ಅನುಷ್ಠಾನ ಮಾಡಬೇಕು. ಕಾಯಿದೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಧ್ವನಿ ಮಹಿಳಾ ಒಕ್ಕೂಟ ಅಧ್ಯಕ್ಷ ವಸಂತ, ಮೈಸೂರು ಗೃಹ ಕಾರ್ಮಿಕರ ಟ್ರೇಡ್ ಯೂನಿಯನ್ ಅಧ್ಯಕ್ಷೆ ಮಂಗಳಗೌರಿ, ಗೌರವ ಅಧ್ಯಕ್ಷೆ ನಳಿನಕುಮಾರಿ, ದೇವಿ, ಪದ್ಮ, ಚಂದ್ರಮ್ಮ, ಗೌರಮ್ಮ, ಮಹದೇವಮ್ಮ, ಶಾಂತಮ್ಮ ಇತರರು ಭಾಗವಹಿಸಿದ್ದರು.