ರಾಜ್ಯ ಬೀದಿನಾಟಕ ಕಲಾತಂಡ ಒಕ್ಕೂಟದಿಂದ ಪ್ರತಿಭಟನೆ

ಹಾಸನ: ಜಾರ್ಖಂಡ್‍ನ ಚೋಚಾಂಗ್ ಜಿಲ್ಲೆಯಲ್ಲಿ ಬೀದಿನಾಟಕ ಕಲಾವಿದೆಯರ ಮೇಲೆ ನಡೆಸಿದ ಅತ್ಯಾ ಚಾರವನ್ನು ವಿರೋಧಿಸಿ ನಗರದಲ್ಲಿ ಗುರು ವಾರ ರಾಜ್ಯ ಬೀದಿನಾಟಕ ಕಲಾ ತಂಡಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಹೇಮಾವತಿ ಪ್ರತಿಮೆ ಬಳಿ ಸಮಾವೇಶ ಗೊಂಡ ಪ್ರತಿಭಟನಾಕಾರರು ಅಲ್ಲಿಂದ ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ಬಳಿಕ, ಆರೋಪಿ ಗಳನ್ನು ಬಂಧಿಸುವಂತೆ ಘೋಷಣೆ ಕೂಗಿದರು.

ಜಾರ್ಖಂಡ್‍ನ ಚೋಚಾಂಗ್ ಜಿಲ್ಲೆಯ ಗ್ರಾಮವೊಂದರಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಕುರಿತು ಬೀದಿನಾಟಕ ಪ್ರದರ್ಶಿಸುತ್ತಿದ್ದ 11 ಜನ ಕಲಾವಿದರಲ್ಲಿ 5 ಜನ ಮಹಿಳಾ ಕಲಾವಿದರನ್ನು ಪಾತಾಳಗರಡಿ ಸಂಘ ಟನೆಯ ಕೆಲವು ದುಷ್ಕರ್ಮಿಗಳು ಅಪಹರಿಸಿ ಅವರನ್ನು ಕಾಡಿಗೆ ಕರೆದೊಯ್ದೂ ಅತ್ಯಾ ಚಾರವೆಸಗಿ ಕ್ರೌರ್ಯ ಮೆರೆದಿದ್ದಾರೆ. ಅವರನ್ನು ತಕ್ಷಣ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಅತ್ಯಾಚಾರಕ್ಕೊಳಗಾದ ಕಲಾವಿದರಿಗೆ ಜಾರ್ಖಂಡ್ ಸರ್ಕಾರ ರಕ್ಷಣೆ ಹಾಗೂ ಪರಿ ಹಾರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲೂ ಬೀದಿನಾಟಕ ಕಲಾವಿದÀರನ್ನು ತುಂಬ ಕೀಳಾಗಿ ನಡೆಸಿಕೊಳ್ಳಾಗುತ್ತಿದೆ. ಇದಕ್ಕೆ ಪೂರಕವಾಗಿ ಮಾರ್ಚ್ ತಿಂಗಳಲ್ಲಿ ಗದಗ ಜಿಲ್ಲೆಯಲ್ಲಿ ಕಸ್ತೂರಿ ಎಂಬ ಕಲಾವಿದೆ ಬಲಿ ಯಾಗಿದ್ದು, ಜೊತೆಗೆ ಇಬ್ಬರೂ ಕಲಾ ವಿದರು ಕೈಕಾಲು ಕಳೆದುಕೊಂಡ ಪ್ರಕರಣ ಸಾಕ್ಷಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಸರ್ಕಾರ ಬೀದಿ ನಾಟಕಗಳ ಗುತ್ತಿಗೆಯನ್ನು ಬೇರೆ ರಾಜ್ಯಗಳಿಗೆ ಕೊಟ್ಟಿದ್ದು, ಅವರ ವಾಹನ ಅಪಘಾತಕ್ಕೀಡಾಗಿ ಅನಾಹುತ ಸಂಭವಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ ಯಾವ ರಕ್ಷಣೆ ಹಾಗೂ ಪರಿಹಾರವನ್ನು ನೀಡಿಲ್ಲ. ಅದಕ್ಕಾಗಿಯೇ ಬೀದಿ ನಾಟಕ ತಂಡಗಳ ಒಕ್ಕೂಟ ಸ್ಥಾಪನೆಯಾಗಿದ್ದು, ಸರ್ಕಾರಕ್ಕೆ ಕಲಾವಿದರ ಸಮಸ್ಯೆಯನ್ನು ತಿಳಿಸುವ ಉದ್ದೇಶದಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪೋಲಿಯೊ, ಏಡ್ಸ್, ಮಲೇರಿಯಾ, ಅಪೌಷ್ಟಿಕತೆ, ಕ್ಯಾನ್ಸರ್, ಸಾಕ್ಷರತೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಅಪರಾಧ ತಡೆ, ರಾಷ್ಟ್ರೀಯ ಭಾವೈಕ್ಯತೆ, ಮಹಿಳಾ ದೌರ್ಜನ್ಯ, ಮಾನವ ಕಳ್ಳಸಾಗಾಣಿಕೆ, ಮತದಾನ ಜಾಗೃತಿ, ವರದಕ್ಷಿಣೆ, ಪರಿಸರ, ನಾಡು, ನುಡಿ ಸೇರಿದಂತೆ ನಾನಾ ವಿಷಯ ಗಳ ಬಗ್ಗೆ ದೇಶ ಹಾಗೂ ರಾಜ್ಯದ ಮೂಲೆ ಮೂಲೆಗಳಲ್ಲಿ ಬೀದಿ ನಾಟಕಗಳನ್ನು ಕಲಾ ವಿದರು 35 ವರ್ಷಗಳಿಂದ ಮಾಡುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಕೆಲವು ಬಾರಿ ಕಲಾವಿದರಿಗೆ ಕನಿಷ್ಠ ಗೌರವಧನವು ಸಹ ದೊರೆಯುತ್ತಿಲ್ಲ ಎಂದು ದೂರಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗÀಳು ತಮ್ಮ ಯೋಜನೆಗಳ ಪ್ರಚಾರಕ್ಕೆ ಮಾತ್ರ ಬೀದಿನಾಟಕ ಕಲಾವಿದÀರನ್ನು ಬಳಸಿ ಕೊಳ್ಳುತ್ತಿದೆ. ಕಲಾವಿದÀರ ಬಗ್ಗೆ ಕಾಳಜಿ, ಭದ್ರತೆ ಹಾಗೂ ರಕ್ಷಣೆ ವಿಚಾರವಾಗಿ ಗಮನಹರಿಸುತ್ತಿಲ್ಲ ಎಂದು ದೂರಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ದೌರ್ಜನ್ಯಕ್ಕೆ ಒಳಗಾದ ಬೀದಿ ನಾಟಕ ಕಲಾವಿದÀರಿಗೆ ರಕ್ಷಣೆ ಮತ್ತು ಪರಿಹಾರ ದೊರಕಿಸಿಕೊಡಬೇಕು. ಇಲ್ಲದಿ ದ್ದರೇ ಹೋರಾಟವನ್ನು ತೀವ್ರಗೊಳಿಸ ಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರಾಜ್ಯ ಬೀದಿನಾಟಕ ಕಲಾತಂಡಗಳ ಒಕ್ಕೂಟದ ಅಧ್ಯಕ್ಷ ಗ್ಯಾರಂಟಿ ರಾಮಣ್ಣ, ಜಿಲ್ಲಾಧ್ಯಕ್ಷ ಬಿ.ಟಿ. ಮಾನವ, ರಾಜ್ಯ ಸಮಿತಿ ಸದಸ್ಯ ಲೋಕೇಶ್, ಕಾರ್ಯದರ್ಶಿ ಪಿ. ಚನ್ನರಾಯಿ, ರೈತ ಸಂಘದ ಮೀಸೆ ಮಂಜಣ್ಣ, ರಾಜಣ್ಣ, ಜಿಲ್ಲಾಧ್ಯಕ್ಷ ಬಾಬು, ಸಣ್ಣಸ್ವಾಮಿ, ಮರೀಗೌಡ ಇದ್ದರು.ಪ್ರತಿಭಟನೆಯಲ್ಲಿ ರಾಜ್ಯ ಬೀದಿನಾಟಕ ಕಲಾತಂಡಗಳ ಒಕ್ಕೂಟದ ಅಧ್ಯಕ್ಷ ಗ್ಯಾರಂಟಿ ರಾಮಣ್ಣ, ಜಿಲ್ಲಾಧ್ಯಕ್ಷ ಬಿ.ಟಿ. ಮಾನವ, ರಾಜ್ಯ ಸಮಿತಿ ಸದಸ್ಯ ಲೋಕೇಶ್, ಕಾರ್ಯದರ್ಶಿ ಪಿ. ಚನ್ನರಾಯಿ, ರೈತ ಸಂಘದ ಮೀಸೆ ಮಂಜಣ್ಣ, ರಾಜಣ್ಣ, ಜಿಲ್ಲಾಧ್ಯಕ್ಷ ಬಾಬು, ಸಣ್ಣಸ್ವಾಮಿ, ಮರೀಗೌಡ ಇದ್ದರು.