ಶಿಕ್ಷಣದ ಜತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆ ಅಗತ್ಯ

ಹುಣಸೂರು: ಪ್ರತಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟು ವಟಿಕೆಗಳ ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ತಮ್ಮ ಜೀವನವನ್ನು ಶಕ್ತಿಯುತವಾಗಿ ಮತ್ತು ಮೌಲ್ಯಯುತವಾಗಿ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಮೈಸೂರು ವಿವಿಯ ಮನೋವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜಿ.ವೆಂಕಟೇಶ್ ಕುಮಾರ್ ತಿಳಿಸಿದರು.

ನಗರದ ದೇವರಾಜ ಅರಸ್ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಎನ್‍ಎಸ್‍ಎಸ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾ ರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಸ್ಥ್ಯ ಸಮಾಜದ ನಿರ್ಮಾಣ ಕ್ಕಾಗಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು ಎಂದರು.
ಶಾಸಕ ಎ.ಹೆಚ್.ವಿಶ್ವನಾಥ್ ಮಾತನಾಡಿ, ದೇವರಾಜ ಅರಸು ಪದವಿ ಕಾಲೇಜಿನ ಅಭಿ ವೃದ್ಧಿಗೆ ಉನ್ನತ ಶಿಕ್ಷಣ ಸಚಿವ ಜಿ.ಟಿದೇ ವೇಗೌಡರು 5.20 ಕೋಟಿ ರೂ. ಅನುದಾನ ನೀಡಿದ್ದಾರೆ. ಇದರಿಂದ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದರು.

ಕೈಕೊಟ್ಟ ಮೈಕಾಸುರ: ಕಾರ್ಯ ಕ್ರಮಕ್ಕಾಗಿ ವೇದಿಕೆಯಲ್ಲಿ ವ್ಯವಸ್ಥೆಯಾಗಿದ್ದ ಧ್ವನಿವರ್ಧಕ ಕೆಟ್ಟು, ಕಾರ್ಯಕ್ರಮ ಆರಂಭಿಸಲು 25 ನಿಮಿಷ ಕಾದು ಕುಳಿತರೂ ಸರಿಯಾಗಲಿಲ್ಲ. ಇದರಿಂದ ಸಿಡಿಮಿಡಿಗೊಂಡ ಶಾಸಕ ವಿಶ್ವನಾಥ್, ಪ್ರಾಂಶುಪಾಲ ವೆಂಕಟೇಶಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಬಕಾರಿ ಉಪ ಅಯುಕ್ತ ಬಿ.ಮಾದೇಶ್ ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿ ನಲ್ಲಿ ಶೈಕ್ಷಣಿಕ ಅರ್ಹತೆಗಳಿದ್ದರೆ ಸಾಲದು. ಜೊತೆಗೆ ಕ್ರೀಡೆ, ಸಾಂಸ್ಕøತಿಕ ಚಟುವಟಿಕೆ ಗಳಿಂದ ಸದೃಢರಾಗಿದ್ದರೆ ಅನುಕೂಲ ವಾಗಲಿದೆ ಎಂದರು.

ಜಿ.ಪಂ ಸದಸ್ಯರಾದ ಸುರೇಂದ್ರ, ಧರ್ಮಾಪುರ ನಾರಾಯಣ್, ಮಹೇಶ್ ಆರಾಧ್ಯ, ಪ್ರಾಂಶುಪಾಲ ವೆಂಕಟೇಶಯ್ಯ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರಾದ ಪುಟ್ಟರಾಜು, ವಸಂತಮ್ಮ, ಪ್ರಜ್ವಲ್, ಪ್ರೊ. ಸಿದ್ದೇಗೌಡ, ಕೃಷ್ಣೇಗೌಡ, ಕಾಲೇಜು ಸಾಂಸ್ಕøತಿಕ ಸಮಿತಿ ಸಂಚಾಲಕ ಉಮಾ ಕಾಂತ್, ಸಿ.ಆರ್. ಕಿರಣ್ ಕುಮಾರ್, ವಿಜಯಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.