ಜೀತ, ಮಲ ಹೊರುವ ಪದ್ಧತಿ ಹೋಗಲಾಡಿಸಿದವರು ಡಿ. ದೇವರಾಜ ಅರಸು

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎ.ಹೆಚ್.ವಿಶ್ವನಾಥ್
ಹುಣಸೂರು: ಜೀತ ಹಾಗೂ ಮಲ ಹೊರುವ ಪದ್ಧತಿ ಹೋಗ ಲಾಡಿಸಿದ ಡಿ. ದೇವರಾಜ ಅರಸು ಅವರನ್ನು ಪೌರ ಕಾರ್ಮಿಕರು ಸ್ಮರಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎ.ಹೆಚ್.ವಿಶ್ವನಾಥ್ ಅಭಿಪ್ರಾಯ ಪಟ್ಟರು.

ನಗರದ ನಗರಸಭಾ ಕಚೇರಿ ಸಭಾಂಗಣ ದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸನ್ಮಾನ ಸಮಾ ರಂಭದಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರು ಮೊದಲು ತಮ್ಮ ಅರೋಗ್ಯ ರಕ್ಷಣೆಗೆ ಮುಂದಾಗಬೇಕು. ಜೊತೆಗೆ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕು ಎಂದರು.

ಅಂದಿನ ಕಾಲದಲ್ಲೇ ಬಸವಲಿಂಗಪ್ಪ ಪೌರಕಾರ್ಮಿಕರ ಅಭಿವೃದ್ಧಿಗೆ ಮಹತ್ವ ನೀಡಿದ್ದರು. ಜೊತೆಗೆ ಅವರ ಉದ್ಧಾರ ಕ್ಕಾಗಿ ಹಲವು ಕಾನೂನು ಮಾರ್ಪಾಡು ಮಾಡಿದರು ಎಂದರು. ಪರಿಸರ ಇಂಜಿನಿಯರ್ ರವಿಕುಮಾರ್ ಮಾತನಾಡಿ, ಪಟ್ಟಣದ 4 ಮಂದಿ ಪೌರ ಕಾರ್ಮಿಕರನ್ನು ಸಿಂಗಾಪೂರ್‍ಗೆ ಕಳುಹಿಸಿದ್ದು, ಅವರು ಅಲ್ಲಿನ ವಾತಾವರಣ ತಿಳಿದು ಬಂದಿದ್ದಾರೆ. ಮುಂದೆ ಇನ್ನೂ 4 ಮಂದಿ ಯನ್ನು ಕಳುಹಿಸಲಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷ ಎಂ.ಶಿವಕುಮಾರ್, ಸದಸ್ಯರಾದ ಶಿವರಾಜು, ಕೃಷ್ಣರಾಜ್ ಗುಪ್ತ, ಯೋಗಾ ನಂದ, ಸುನಿತಾಜಯರಾಮ್, ಲಕ್ಷ್ಮಣ್, ಹಜರತಜಾನ್, ವೆಂಕಟೇಶ್, ನಸುರುಲ್ಲಾ, ಹೆಚ್.ವೈ.ಮಹದೇವು, ಪೌರಾಯುಕ್ತರಾದ ಶಿವಪ್ಪನಾಯಕ, ಇನ್ಸ್‍ಪೆಕ್ಟರ್‍ಗಳಾದ ಕೆ.ಸತೀಶ, ಕೆ.ಜೆ.ಮೋಹನ್, ಇಂಜಿನಿಯರ್ ಗಳಾದ ಪಾರ್ವತಿದೇವಿ ಸದಾಶಿವಪ್ಪ, ಜಯ ಶೀಲಾ, ಅನುಪಮ, ನೌಕರರಾದ ಸೋಮ ಶೇಖರ್, ಕೃಷ್ಣೇಗೌಡ, ಸೊಮಯ್ಯ, ಮಾಜಿ ಸದಸ್ಯರಾದ ಕಣ್ಣಯ್ಯ, ಚಂದ್ರಶೇಖರ್, ಮುಖಂಡರಾದ ಪೆರಮಾಳ್, ರಾಮೇ ಗೌಡ ಮತ್ತಿತರರು ಭಾಗವಹಿಸಿದ್ದರು.