ಹೆಚ್‍ಟಿ, ಇಹೆಚ್‍ಟಿ ಕೈಗಾರಿಕಾ ಗ್ರಾಹಕರಿಗೆ ವಿಶೇಷ ಪ್ರೋತ್ಸಾಹ

ಮೈಸೂರು, ಜ. 22(ಆರ್‍ಕೆ)- ಕರ್ನಾ ಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‍ಸಿ) ಜಾರಿಗೆ ತಂದಿರುವ ವಿಶೇಷ ಪ್ರೋತ್ಸಾಹ ಯೋಜನೆ(Special Incentive Scheme to EHT/HT Industrial Consumers)ಗೆ ಕೈಗಾರಿಕೋದ್ಯಮಿ ಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಲಿಮಿಟೆಡ್(ಸೆಸ್ಕ್)ನಿಂದ ಮೈಸೂ ರಿನ ವಿಜಯನಗರ 1ನೇ ಹಂತದಲ್ಲಿರುವ ನಿಗಮದ ಕಾರ್ಪೊರೇಟ್ ಕಚೇರಿ ಸಭಾಂ ಗಣದಲ್ಲಿ ಇಂದು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮೈಸೂರು, ಚಾಮರಾಜ ನಗರ, ಕೊಡಗು, ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಕೈಗಾರಿಕೋದ್ಯಮಿಗಳು, ಕೈಗಾರಿಕಾ ಸಂಘಗಳ ಪದಾಧಿಕಾರಿಗಳು ಮತ್ತು ವಿವಿಧ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಡಾ.ಹೆಚ್.ಎನ್. ಗೋಪಾಲಕೃಷ್ಣ ಅವರು ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಪಾತ್ರ ಮುಖ್ಯ ವಾಗಿದ್ದು, ಅವುಗಳ ಬೆಳವಣಿಗೆಗೆ ಉತ್ತೇ ಜನ ನೀಡುವ ಸಲುವಾಗಿ ಸರ್ಕಾರ ಹಲವು ರೀತಿಯಲ್ಲಿ ನೆರವು ನೀಡುತ್ತಿದ್ದು, ಆ ಪೈಕಿ ಅಧಿಕ ಪ್ರಮಾಣದ ವಿದ್ಯುತ್ ಬಳಸುವ ಹೆಚ್‍ಟಿ(ಹೈಟೆನ್‍ಷನ್) ಮತ್ತು ಇಹೆಚ್‍ಟಿ( ಎಕ್ಸ್ಟ್ರಾ ಹೈಟೆನ್‍ಷನ್) ಕೈಗಾರಿಕಾ ಗ್ರಾಹಕ ರಿಗೆ ವಿಶೇಷ ಪ್ರೋತ್ಸಾಹ ಯೋಜನೆ ಅತೀ ಪ್ರಮುಖವಾದುದು ಎಂದರು.

ನಂತರ ಸೆಸ್ಕ್ ಅಧಿಕಾರಿಗಳು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಕೈಗಾರಿಕೋದ್ಯಮಿಗಳಿಗೆ ಯೋಜನೆಯ ಸ್ವರೂಪ, ಅನುಕೂಲಗಳನ್ನು ಪ್ರಸ್ತುತಪಡಿಸಿ ದರು. ಹೆಚ್‍ಟಿ, ಹೆಚ್‍ಟಿ-2(ಎ), ಹೆಚ್‍ಟಿ -2(ಬಿ), ಹೆಚ್‍ಟಿ-2(ಸಿ) ವಿದ್ಯುತ್ ಪಡೆ ಯುತ್ತಿರುವ `ಟೈಮ್ ಆಫ್ ದ ಡೇ’ (ಖಿಔಆ) ಮೀಟರ್ ಹೊಂದಿರುವ ಕೈಗಾರಿಕೆಗಳು ಈ ಯೋಜನೆ ವ್ಯಾಪ್ತಿಗೆ ಬರುತ್ತವೆ.

ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಗೆ ನಾನ್ ಪೀಕ್ ಅವಧಿಯಲ್ಲಿ ಬಳಸುವ ವಿದ್ಯುತ್ ಬಿಲ್ ಮೇಲೆ ಪ್ರತೀ ಯೂನಿಟ್‍ಗೆ 1 ರೂ. ರಿಬೇಟ್ ಹಾಗೂ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆವರೆಗೆ ಬಳಸುವ ಪ್ರತೀ ಯೂನಿಟ್ ವಿದ್ಯುತ್‍ಗೆ 2 ರೂ. ಇನ್‍ಸೆಂಟಿವ್ ಅನ್ನು 500 ಕೆವಿಎ ಮತ್ತು ಅದಕ್ಕೂ ಮೇಲ್ಪಟ್ಟು ಕಾಂಟ್ರಾಕ್ಟ್ ಡಿಮಾಂಡ್ ಹೊಂದಿರುವ ಕೈಗಾರಿಕಾ ಗ್ರಾಹಕರಿಗೆ ಕೊಡಲಾಗುವುದು ಎಂದು ಸೆಸ್ಕ್ ಅಧಿಕಾರಿಗಳು ವಿವರಿಸಿದರು.

ನಿಗಮದ ವ್ಯಾಪ್ತಿಯ 5 ಜಿಲ್ಲೆಗಳಲ್ಲಿ 19 ಓಪನ್ ಆಕ್ಸಿಸ್ ಗ್ರಾಹಕರು ಹಾಗೂ 56 ವೀಲಿಂಗ್ ಕನ್‍ಸ್ಯೂಮರ್‍ಗಳಿದ್ದು, 2019- 20ನೇ ಸಾಲಿನಲ್ಲಿ 44 ಮೆಗಾವ್ಯಾಟ್ ಕೈಗಾ ರಿಕಾ ಲೋಡ್ ದಾಖಲಾಗಿದೆ. ನಾನ್‍ಪೀಕ್ (ಬೇಡಿಕೆ ಕಡಿಮೆ ಇರುವ) ಅವಧಿಯಲ್ಲಿ ಕೈಗಾರಿಕೆಗಳನ್ನು ಚಾಲನೆಯಲ್ಲಿರಿಸಿ ಹೆಚ್ಚು ವಿದ್ಯುತ್ ಬಳಕೆ ಮಾಡಿದವರಿಗೆ ರಿಬೇಟ್ ಸಿಗುವುದರಿಂದ ಕೈಗಾರಿಕೋದ್ಯಮಿಗಳಿಗೆ ವಿದ್ಯುತ್ ಶುಲ್ಕದ ಪ್ರಮಾಣ ಕಡಿಮೆ ಯಾಗಲಿದೆ ಎಂಬುದನ್ನು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.

ಬಳಿಕ ನಡೆದ ಸಂವಾದದಲ್ಲಿ ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯ ದರ್ಶಿ ಸುರೇಶ್ ಕುಮಾರ್‍ಜೈನ್ ಅವರು, ಇನ್‍ಸೆಂಟಿವ್ ಸೌಲಭ್ಯವನ್ನು ಸಣ್ಣ ಕೈಗಾ ರಿಕೆಗಳಿಗೂ ಒದಗಿಸಬೇಕು ಹಾಗೂ ಎಂಎಸ್‍ಎಂಇ ಕೈಗಾರಿಕೆಗಳಿಗೆ ಪ್ರತ್ಯೇಕ ವಿದ್ಯುತ್ ದರ ನಿಗದಿಗೊಳಿಸಿ ಗ್ರಾಸ್ ಸಬ್ಸಿಡಿ ನೀಡಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

100 ಹೆಚ್‍ಪಿ ಮತ್ತು ಎಲ್‍ಟಿ ಸಾಮ ಥ್ರ್ಯದ ವಿದ್ಯುತ್ ಪಡೆದಿರುವವರಿಗೂ ಪ್ರೋತ್ಸಾಹ ನೀಡಿ ಎಂದು ರಘುರಾಂ ಕೋರಿ ದರೆ, ವಿದ್ಯುತ್ ನಿಲುಗಡೆಗೆ ವೇಳಾಪಟ್ಟಿ ನಿಗದಿ ಪಡಿಸಿ ಮತ್ತು ಕಡಕೊಳ ಸೇವಾ ಕೇಂದ್ರದಲ್ಲಿ ದೂರುಗಳನ್ನು ಸ್ವೀಕರಿಸಲು ಸಿಬ್ಬಂದಿ ನೇಮಿಸಿ ಎಂದು ಮೈಸೂರು ಕೈಗಾರಿಕಾ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕ ಹೆಚ್.ರಾಮ ಕೃಷ್ಣೇಗೌಡ ಸಲಹೆ ನೀಡಿದರು.

ಎಲ್ಲೆಡೆ ಮೊಬೈಲ್ ಟವರ್ ಅಳವಡಿ ಸಲು ಬೇಕಾಬಿಟ್ಟಿ ಅನುಮತಿ ನೀಡಬೇಡಿ, ವಿದ್ಯುತ್ ನಿಲುಗಡೆ ಮಾಡುವ ಮುನ್ನ ಜನ ರಿಗೆ ಮಾಹಿತಿ ನೀಡಬೇಕು ಎಂದು ವಿಜಯ ನಗರ 3ನೇ ಹಂತ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ಕುಮಾರ್ ಸಲಹೆ ನೀಡಿದರು.

ಕೃಷ್ಣಕುಮಾರ್, ಕೇಶವಮೂರ್ತಿ, ಓ.ಎಸ್. ಸುಂದರರಾಜ, ಶಿವಕುಮಾರ್ ಸೇರಿದಂತೆ ಹಲವು ಕೈಗಾರಿಕೋದ್ಯಮಿಗಳು ಸಂವಾದ ದಲ್ಲಿ ಪಾಲ್ಗೊಂಡಿದ್ದರು.

ಸೆಸ್ಕ್ ನಿರ್ದೇಶಕ(ತಾಂತ್ರಿಕ) ಮಂಜು ನಾಥ, ಚೀಫ್ ಇಂಜಿನಿಯರ್‍ಗಳಾದ ಚಂದ್ರಶೇಖರ್, ಸ್ವಾಮೀಗೌಡ, ಸೂಪ ರಿಂಟೆಂಡಿಂಗ್ ಇಂಜಿನಿಯರ್‍ಗಳಾದ ಮುನಿಗೋಪಾಲರಾಜು, ಶ್ರೀನಿವಾಸ, ನರಸಿಂಹಮೂರ್ತಿ, ಜನರಲ್ ಮ್ಯಾನೇ ಜರ್ ಶಿವಣ್ಣ ಸೇರಿದಂತೆ ಹಲವರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.