`ಅಥೆನಾ’ ಶಿಕ್ಷಣ ಸೇವೆಗೆ ಚಾಲನೆ

ಮೈಸೂರು: ಶಿಕ್ಷಣ ಸಂಸ್ಥೆ ನಡೆಸಲು ಹಣದ ಅವಶ್ಯಕತೆ ಇರುವುದು ನಿಜ. ಆದರೆ ಹಣ ಗಳಿ ಕೆಯೇ ಮುಖ್ಯ ಉದ್ದೇಶವಾಗ ಬಾರದು ಎಂದು `ಸ್ಟಾರ್ ಆಫ್ ಮೈಸೂರ್’ ಹಾಗೂ `ಮೈಸೂರು ಮಿತ್ರ’ ವ್ಯವಸ್ಥಾಪಕ ಸಂಪಾ ದಕ ವಿಕ್ರಂ ಮುತ್ತಣ್ಣ ಅಭಿಪ್ರಾಯಪಟ್ಟರು.
ವಿಜಯನಗರ 1ನೇ ಹಂತದಲ್ಲಿರುವ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ ನಡೆದ ಬಿ.ಎಸ್.ಪ್ರಶಾಂತ್ ಮತ್ತು ಗಿರೀಶ್ ಬಾಘಾ ಅವರು ನೂತನ ವಾಗಿ ಆರಂಭಿಸಿರುವ `ಅಥೆನಾ’ ಶಿಕ್ಷಣ ಸೇವೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣವು ಕೇವಲ ವ್ಯಾಪಾರವಾಗಿ ಉಳಿಯಬಾರದು. ಬದ ಲಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಲಾಭ ಗಳಿಕೆ ಮತ್ತು ಸಮಾಜ ಸೇವೆಯ ನಡುವೆ ಸಮತೋ ಲನ ಕಾಪಾಡಿಕೊಂಡು ಶಿಕ್ಷಣ ಸಂಸ್ಥೆ ಯನ್ನು ಮುನ್ನಡೆಸಬೇಕು. ಹೊಸದಾಗಿ ಆರಂಭವಾಗಿರುವ ಅಥೆನಾ ಶಿಕ್ಷಣ ಸೇವೆಗೆ ಒಳ್ಳೆಯ ಯಶಸ್ಸು ಸಿಗಲಿ ಎಂದು ಅವರು ಹಾರೈಸಿದರು.

ಕಳೆದ ಒಂದು ದಶಕದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರ ಹಣ ಗಳಿಕೆಯ ಕ್ಷೇತ್ರವಾಗಿ ಬದಲಾಗಿದೆ. ಹಾಗಾಗಿ ಹೆಚ್ಚಿನವರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಉತ್ಸಾಹ ತೋರಿ ದರು. ಆದರೆ, ಶಿಕ್ಷಣ ಸಂಸ್ಥೆಯನ್ನು ಹೇಗೆ ಮುನ್ನಡೆಸಬೇಕೆಂಬುದೇ ಅವರಿಗೆ ತಿಳಿದಿಲ್ಲ. ಶಿಕ್ಷಣ ಸಂಸ್ಥೆಗಳಿಗೆ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳು ಮಾದರಿಯಾಗಬೇಕು. 17 ಸಾವಿರ ವಿದ್ಯಾರ್ಥಿಗಳಿಗೆ ಶಿಸ್ತಿನ ಶಿಕ್ಷಣ ನೀಡುತ್ತಿರುವ ಸುತ್ತೂರು ಶ್ರೀಗಳ ಕಾರ್ಯ ವೈಖರಿ ಮೆಚ್ಚುವಂತಹದ್ದು ಎಂದರು.

ಮೈಸೂರಿನಲ್ಲಿ ಸಾಕಷ್ಟು ಶಾಲಾ-ಕಾಲೇಜುಗಳಿವೆ. ಆ ಸಂಸ್ಥೆಗಳನ್ನು ನಡೆಸು ತ್ತಿರುವ ಮಾಲೀಕರ ಬಳಿಯೂ ಸಾಕಷ್ಟು ಹಣವಿದೆ. ಆದರೆ ಸಂಸ್ಥೆಯನ್ನು ಯಶ ಸ್ಸಿನ ಹಾದಿಯಲ್ಲಿ ಮುನ್ನಡೆಸಲು ಬೇಕಾದ ಜ್ಞಾನ, ನೈಪುಣ್ಯತೆಯ ಕೊರತೆ ಕಾಡುತ್ತಿದೆ. ಇತರೆ ವ್ಯಾಪಾರದಂತೆ ಶಿಕ್ಷಣ ಕೂಡಾ ಇಂದು ವ್ಯಾಪಾರವಾಗಿ ಬದಲಾಗಿದೆ ಎಂಬುದನ್ನು ನಾವು ಒಪ್ಪಲೇಬೇಕಾಗು ತ್ತದೆ ಎಂದರು.

ಎಕ್ಸೆಲ್ ಸಾಫ್ಟ್ ಟೆಕ್ನಾಲಜೀಸ್‍ನ ವ್ಯವ ಸ್ಥಾಪಕ ನಿರ್ದೇಶಕ ಸುಧನ್ವ ಮಾತನಾಡಿ, ಪ್ರಶಾಂತ್ ಮತ್ತು ಗಿರೀಶ್ ಅವರು ಒಳ್ಳೆಯ ಸಂದರ್ಭದಲ್ಲಿ ಮೈಸೂರಿನಲ್ಲಿ ಶಿಕ್ಷಣ ಸೇವೆ ಆರಂಭಿಸುತ್ತಿರುವುದು ಸಂತೋಷ ತಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ವೈದ್ಯಕೀಯ, ಎಂಜಿ ನಿಯರಿಂಗ್ ಕಾಲೇಜು ಯಾವುದೇ ಇರಲಿ ನಾಯಕತ್ವ ಗುರುತಿಸಿ, ಸಬಲೀ ಕರಣಗೊಳಿಸಬೇಕು. ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕು ಎಂದರು.

ಶಿಕ್ಷಣ ಸಂಸ್ಥೆಗಳು ಪೆÇೀಷಕರ, ಸಮು ದಾಯದ ನಿರೀಕ್ಷೆಗಳನ್ನು ಪೂರೈಸಲು ಪ್ರಯತ್ನಿಸಬೇಕು. ಜತೆಗೆ ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕು. ಪಾಶ್ಚಿಮಾತ್ಯದಲ್ಲಿ ಉನ್ನತ ಶಿಕ್ಷಣ ಚೆನ್ನಾಗಿ ಬೆಳೆದಿದ್ದು, ಗುಣಮಟ್ಟದಿಂದ ಕೂಡಿದೆ. ಹಾಗಾಗಿ ನಾವೂ ಕೂಡ ಯೋಜನಾ, ವಿನ್ಯಾಸ, ಪಠ್ಯಕ್ರಮ ಬೋಧನೆಗೆ ಹೊಂದಿಕೊಳ್ಳಬೇಕು ಎಂದು ಹೇಳಿದರು. ಶಾಸಕ ಎಸ್.ಎ.ರಾಮದಾಸ್, ಶ್ರೀಹರಿ ಮತ್ತಿತರರು ಉಪಸ್ಥಿತರಿದ್ದರು.