ಆದಿವಾಸಿಗಳು ಸಂಗ್ರಹಿಸುವ ಅರಣ್ಯ ಉತ್ಪನ್ನಗಳಿಗೆ ಸಬ್ಸಿಡಿ ದ್ವಿಗುಣ ಭರವಸೆ

ಮೈಸೂರು,ನ.21(ವೈಡಿಎಸ್)- ಆದಿ ವಾಸಿಗಳು ಕಾಡಿನಲ್ಲಿ ಸಂಗ್ರಹಿಸುವ ಉತ್ಪನ್ನ ಗಳಿಗೆ ನೀಡುತ್ತಿದ್ದ ಸಹಾಯ ಧನವನ್ನು ದ್ವಿಗುಣಗೊಳಿಸಲು ಕ್ರಮಕೈಗೊಳ್ಳಲಾಗು ವುದು ಎಂದು ಸಹಕಾರ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಆದಿವಾಸಿ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ (ಲ್ಯಾಂಪ್ಸ್) ಮಹಾ ಮಂಡಳ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಹಕಾರ ಇಲಾಖೆ ಆರ್ಥಿಕ ನೆರವಿನಿಂದ ನಿರ್ಮಿಸಿರುವ ಜೇನು ಸಂಸ್ಕರಣಾ ಮತ್ತು ಸೀಗೆಪುಡಿ ಘಟಕ, ಗೋದಾಮು ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆದಿವಾಸಿಗಳು ಸಂಗ್ರಹಿಸಿದ ಉತ್ಪನ್ನ ಗಳನ್ನು ಲ್ಯಾಂಪ್ಸ್ ಮಹಾಮಂಡಳಿಗೆ ನೀಡುತ್ತಾರೆ. ಇವುಗಳಿಗೆ ಎರಡುಪಟ್ಟು ಸಹಾಯಧನ ನೀಡಲು ಕ್ರಮ ಕೈಗೊಳ್ಳ ಲಾಗುವುದು. ಇದರಿಂದ ಮಂಡಳಿಗೆ ಹೆಚ್ಚಿನ ವಸ್ತುಗಳು ಸಿಗುವ ಜತೆಗೆ ಆದಿ ವಾಸಿಗಳಿಗೂ ಆರ್ಥಿಕವಾಗಿ ಸಹಾಯ ವಾಗಲಿದೆ ಎಂದು ಹೇಳಿದರು.

ಆದಿವಾಸಿಗಳು ನೀಡುವ ವಸ್ತುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ದರೆ ಹೆಚ್ಚು ಹಣ ದೊರೆಯುವುದಿಲ್ಲ. ಹಾಗಾಗಿ ಜೇನು, ಸೀಗೆಪುಡಿ ಸಂಸ್ಕರಣ ಘಟಕಗಳನ್ನು ಆರಂಭಿಸುತ್ತಿದ್ದು, ಇದ ರಿಂದ ಕಾಡಿನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಜೊತೆಗೆ ಉತ್ತಮ ಬೆಲೆಯೂ ದೊರೆಯಲಿದೆ ಎಂದು ತಿಳಿಸಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಅನುಕೂಲ ಮಾಡಿಕೊಡುವುದಾಗಿ ಕಾಡಿ ನಲ್ಲಿದ್ದ ಜನರನ್ನು ನಾಡಿಗೆ ಕರೆತಂದಿದ್ದು, ಅವರಿಗೆ ಉತ್ತಮ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಜತೆಗೆ ಸರ್ಕಾರ ದಿಂದಲೂ ಹಲವು ಯೋಜನೆಗಳನ್ನು ನೀಡಲಾಗಿದ್ದು, ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.

ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಮುದ್ದಯ್ಯ, ಸಹಕಾರ ಸಂಘಗಳ ನಿಬಂ ಧಕ ಎನ್.ಎಸ್. ಪ್ರಸನ್ನಕುಮಾರ್, ಜಂಟಿ ನಿಬಂಧಕ ಪ್ರಕಾಶ್‍ರಾವ್, ರಾಜ್ಯ ಲ್ಯಾಂಪ್ಸ್ ಸಹಕಾರ ಸಂಘಗಳ ಉಪಾಧ್ಯಕ್ಷ ಮುತ್ತಪ್ಪ ಮತ್ತಿತರರು ಉಪಸ್ಥಿತರಿದ್ದರು.