ಶಾಲೆಗಳಿಗೆ ಪಠ್ಯ ಪುಸ್ತಕ ಸರಬರಾಜು

ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಎಲ್ಲಾ ಸರಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ಹಾಗೂ ಅನುದಾನ ರಹಿತ ಶಾಲೆಗಳಿಗೆ ಮಾರಾಟ ಪಠ್ಯಪುಸ್ತಕ ಗಳನ್ನು ಶಾಲೆಗಳ ಆರಂಭದಲ್ಲಿಯೇ ಶೇ,91ರಷ್ಟು ವಿತರಿಸ ಲಾಗಿದ್ದು ಉಳಿದ ಪಠ್ಯಪುಸ್ತಕಗಳು ಈಗಾಗಲೇ ದಾಸ್ತಾನು ಮಳಿಗೆಗೆ ಸರಬರಾಜು ಆಗಿದ್ದು ಶಾಲೆಗಳಿಗೆ ವಿತರಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ಮಾರಾಟ ಪಠ್ಯಪುಸ್ತಕಗಳನ್ನು ಕೂಡ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯವರು ಶಾಲಾ ಪ್ರಾರಂಭಕ್ಕೂ ಮೊದಲು ಪಡೆದುಕೊಂಡಿರುತ್ತಾರೆ. ಈವರೆಗೆ ಶೇ,98 ರಷ್ಟು ಪಠ್ಯಪುಸ್ತಕಗಳು ಎಲ್ಲಾ ಶಾಲೆಗಳಿಗೆ ವಿತರಣೆಯಾಗಿದ್ದು ಇನ್ನುಳಿದ ಶೇ,2 ರಷ್ಟು ಪುಸ್ತಕಗಳು ಶೀಘ್ರವಾಗಿ ಸರಬರಾಜು ಆಗಲಿದ್ದು ಕೂಡಲೇ ವಿತರಣೆ ಮಾಡಲಾಗುವುದು ಅಲ್ಲಿಯವರೆಗೆ ಶಾಲಾ ಬುಕ್ ಬ್ಯಾಂಕ್‍ನಿಂದ ಕಳೆದ ಸಾಲಿನ ಪಠ್ಯಪುಸ್ತಕಗಳನ್ನು ಉಪಯೋಗಿಸಿ ಪಾಠಬೋಧನೆ ಮಾಡಲು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚನೆ ನೀಡಿರುತ್ತಾರೆ.

2018-19ನೇ ಸಾಲಿಗೆ ಪಠ್ಯ ಪುಸ್ತಕದ ನೋಡಲ್ ಅಧಿಕಾರಿ ಶಿಕ್ಷಣ ಸಂಯೋಜಕರಾದ ಅನ್ರಿತಾ ಫುರ್ಟಾಡೊ ಅವರು ವಿರಾಜಪೇಟೆ ತಾಲೂಕಿನ ಶಾಲೆಗಳಿಗೆ ಪಠ್ಯಪುಸ್ತಕಗಳ ವಿತರಣೆಯನ್ನು ನಿರ್ವಹಿಸುತ್ತಿದ್ದಾರೆ. ಹಾಗೂ ಸರ್ಕಾರಿ ಪ್ರಾಥಮಿಕ ಮತ್ತು ಪೌಢಶಾಲೆಗಳಿಗೆ ಉಚಿತ ಸಮವಸ್ತ್ರವನ್ನು ಕೆಲವೇ ದಿನಗಳಲ್ಲಿ ಸರಬರಾಜು ಆಗಲಿದ್ದು ಕೂಡಲೇ ವಿದ್ಯಾರ್ಥಿಗಳಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.