ಮೇಲುಕೋಟೆಯಲ್ಲಿ ಸಂಭ್ರಮದ ಕಲ್ಯಾಣೋತ್ಸವ

ಮೇಲುಕೋಟೆ: ವಿಳಂಬಿ ನಾಮ ಸಂವತ್ಸರದ ರೋಹಿಣಿ ನಕ್ಷತ್ರದ ಶುಭದಿನವಾದ ಬುಧವಾರ ಸಂಜೆ ಆರಾದ್ಯ ದೈವ ಶ್ರೀ ಚೆಲುವನಾರಾಯಣ ಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಕಲ್ಯಾಣೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು.

ಲೋಕ ಕಲ್ಯಾಣಾರ್ಥವಾಗಿ ಕಲ್ಯಾಣಿಯ ದಾರಾಮಂಟಪದಲ್ಲಿ ಮಹಾಲಕ್ಷ್ಮಿ ಕಲ್ಯಾಣ ನಾಯಕಿ ಅಮ್ಮನವರೊಂದಿಗೆ ಸಂಜೆ ನಡೆದ ಕಲ್ಯಾಣೋತ್ಸವ ವೈಭವ ವನ್ನು ಸಾವಿರಾರು ಭಕ್ತರು ದರ್ಶನ ಮಾಡಿ ಪುನೀತ ಭಾವನೆ ಹೊಂದಿದರು. ವೇದ ಘೋಷ ಮಂಗಳವಾದ್ಯದೊಂದಿಗೆ ಸಮನ್ಮಾಲೆ, ಲಾಜಹೋಮ ಮುಂತಾದ ಶಾಸ್ತ್ರೋಕ್ತ ವಿಧಿ ವಿಧಾನಗಳು ನೆರವೇರಿದವು.

ಇದಕ್ಕೂ ಮುನ್ನ ದೇವಾಲಯದಲ್ಲಿ ದೇವಸೇನ ವಿಶ್ವಕ್ಷೇನರಿಗೆ ಉತ್ಸವ ನೆರ ವೇರಿತು, ನಂತರ ಮದುವಣಗಿತ್ತಿಯಾಗಿ ಅಲಂಕಾರಗೊಂಡ ಮಹಾಲಕ್ಷ್ಮಿ ಕಲ್ಯಾಣ ನಾಯಕಿಯ ಉತ್ಸವ ಕಲ್ಯಾಣಿಗೆ ನೆರವೇರಿತು. ಭಗವದ್ರಾಮಾನುಜರೊಂದಿಗೆ ಚೆಲುವ ನಾರಾಯಣನ ಉತ್ಸವ ಸಾಲುಮಂಟಪ ಗಳ ಮದ್ಯೆಸಾಗಿ ಧಾರಮಂಟಪ ತಲುಪಿದಾಗ ಭಕ್ತರ ಜಯಘೋಷ ಮುಗಿಲುಮುಟ್ಟಿತ್ತು. ಪ್ರಾರಂಭದಲ್ಲಿ ಸಮನ್ಮಾಲೆ ನಡೆದು ಕಲ್ಯಾಣ ನಾಯಕಿ ಸಮೇತನಾದ ಚೆಲುವನಾರಾಯಣ ಸ್ವಾಮಿಯ ಉಯ್ಯಾಲೋತ್ಸವ ನೆರವೇ ರಿತು. ಈ ವೇಳೆ ದೇವಾಲಯದ ಸ್ಥಾನೀಕರು ಅರ್ಚಕರು, ಕೈಂಕರ್ಯಪರರ ವೇದ ಘೋಷದ ಮಂತ್ರಗಳು ಸಾಕ್ಷಾತ್ ವೈಕುಂಠದ ದೈವೀಕ ವಾತಾವರಣ ಸೃಷ್ಟಿಸಿ ಭಕ್ತರನ್ನು ಮುದಗೊಳಿಸಿದವು. ದೇವಾಲಯದಲ್ಲಿ ಅಧಿವಾಸರ, ರಕ್ಷಾಬಂಧನ, ದ್ವಜಪ್ರತಿಷ್ಠೆ ಸಹ ವೈಭವದಿಂದ ನೆರವೇರಿದವು.

ಕಲ್ಯಾಣೋತ್ಸವ ಮುಗಿದ ರಾತ್ರಿ 9 ಗಂಟೆಯ ವೇಳೆ ಚೆಲುವನಾರಾಯಣ ಸ್ವಾಮಿ ಮತ್ತು ಮಹಾಲಕ್ಷ್ಮಿಯ ಉತ್ಸವ, ಕನ್ನಡ ಸಂಸ್ಕøತಿ ಇಲಾಖೆಯ ಪ್ರಾಯೋಜನೆಯ ವಿದ್ವಾನ್ ಗಣೇಶ್ ಮತ್ತು ಎಂ.ಜಿಶ್ರೀಧರ್ ತಂಡದ ವಿಶೇಷ ನಾದಸ್ವರ ವಾದ್ಯ ದೊಂದಿಗೆ ದೇವಾ ಲಯ ತಲುಪಿತು. ದೇವಾಲಯದಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಪಾಂಡವ ಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್‍ಗೆ ಪಾರಂಪರಿಕ ಶೈಲಿಯ ವಿಶೇಷ ಗೌರವ ಸಮರ್ಪಿಸಿ ಕಛೇರಿಗೆ ಬಿಡಲಾಯಿತು.

ಡಿ.ಸಿ.ಯಿಂದ ಪೂರ್ವಸಿದ್ಧತೆ ಪರಿಶೀಲನೆ: ಸಂಜೆ ಮೇಲುಕೋಟೆಗೆ ಭೇಟಿ ನೀಡಿದ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ವೈರ ಮುಡಿ ಉತ್ಸವಕ್ಕೆ ಕೈಗೊಂಡಿರುವ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು. ಯೋಗಾ ನರಸಿಂಹಸ್ವಾಮಿ ಬೆಟ್ಟಕ್ಕೆ ಮಾಡುತ್ತಿರುವ ವಿಶೇಷ ದೀಪಾಲಂಕಾರ, ಭದ್ರತೆಗೆ ಅಳವಡಿಸಿದ ಸಿ.ಸಿ.ಕ್ಯಾಮರಾ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದು. ಹಾಜರಿದ್ದ ಅಧಿಕಾರಿ ಗಳಿಗೆ ಮತ್ತುಷ್ಟು ಉತ್ತಮ ವ್ಯವಸ್ಥೆಗಳಿಗೆ ಸಲಹೆ ನೀಡಿದರು. ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.