ಹೆಬ್ಬಾಳದಲ್ಲಿ ನಾಳೆ ಕನಕದಾಸ ಜಯಂತಿ ಕಾರ್ಯಕ್ರಮ

ಮೈಸೂರು, ಡಿ.27(ಆರ್‍ಕೆಬಿ)- ಮೈಸೂರಿನ ಹೆಬ್ಬಾಳ ಕನಕದಾಸ ಹಿತರಕ್ಷಣಾ ಸಮಿತಿ ವತಿಯಿಂದ ಡಿ.29ರಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರಿನ ವಿಜಯನಗರದ ವಿದ್ಯಾವರ್ಧಕ ಕಾಲೇಜು ರಸ್ತೆ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಕನಕದಾಸರ 532ನೇ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಮಂಜೇಗೌಡ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಮಾಜಿ ಸಚಿವ ಎನ್.ಚಲುವ ರಾಯಸ್ವಾಮಿ ಕನಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವರು. ಶಾಸಕ ಯತೀಂದ್ರ ಸಿದ್ದರಾಮಯ್ಯ ಕ್ಯಾಲೆಂಡರ್ ಬಿಡುಗಡೆ ಮಾಡು ವರು. ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಎಸ್‍ಎಸ್‍ಎಲ್‍ಸಿ, ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪುರಸ್ಕಾರ ನೀಡುವರು. ಕಾಡಾ ಸಹಾಯಕ ಆಡಳಿತಾಧಿಕಾರಿ ಡಾ.ನಂಜುಂಡೇ ಗೌಡ ಕನಕದಾಸರ ವಿಚಾರಧಾರೆ ತಿಳಿಸುವರು. ಜಿಪಂ ವಿಪಕ್ಷ ನಾಯಕ ರವಿಶಂಕರ್ ವಧು-ವರರ ಮಾಹಿತಿ ಕೇಂದ್ರ ಉದ್ಘಾಟಿಸುವರು. ಸಮಿತಿಯ ಅಧ್ಯಕ್ಷ ಡಾ.ಎಸ್.ಬಸವ ರಾಜು ಅಧ್ಯಕ್ಷತೆ ವಹಿಸುವರು ಎಂದರು. ಹಿರಿಯ ನಟ ಕಲಾತಪಸ್ವಿ ಡಾ.ರಾಜೇಶ್, ನಾಯಕ ನಟ ಯೋಗೇಶ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಗುವುದು ಎಂದರು. ಗೋಷ್ಠಿಯಲ್ಲಿ ರಾಜೇಗೌಡ, ಬಸವೇಗೌಡ, ಚಿನ್ನಪ್ಪ ಎಸ್.ಬಸವರಾಜು ಉಪಸ್ಥಿತರಿದ್ದರು.