ಶಿಕ್ಷಣದ ಮೂಲಕ ಪ್ರತಿಯೊಂದು ಸಮಸ್ಯೆಗೂ ಪರಿಹಾರ

ಮದ್ದೂರು, ಜ.10- ಪ್ರತಿಯೊಂದು ಸಮಸ್ಯೆಗೂ ಶಿಕ್ಷಣದ ಮೂಲಕ ಪರಿಹಾರ ಸಿಗಲಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದಿಲ್ಲಿ ಅಭಿಪ್ರಾಯಪಟ್ಟರು.

ತಾಲೂಕಿನ ಕಬ್ಬಾರೆ ಗ್ರಾಮದಲ್ಲಿ ಬೆಂಗ ಳೂರಿನ ಎಮ್‍ಟೆಕ್ ಸಾಫ್ಟ್‍ವೇರ್ ಕಂಪನಿ ವತಿಯಿಂದ ಆಯೋಜಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಯನ್ನು ಗುರುತಿಸಿ ಇಲ್ಲಿಗೆ ಮೂಲ ಸೌಕರ್ಯ ನೀಡಲು ಮುಂದಾಗಿರುವ ಎಮ್‍ಟೆಕ್ ಸಾಫ್ಟ್‍ವೇರ್ ಕಂಪನಿ ಕ್ರಮ ಶ್ಲಾಘಿಸಿದರು. ಅಲ್ಲದೇ ಇಂತಹ ಕಂಪನಿಗಳು ಸರ್ಕಾರಿ ಶಾಲೆಗಳನ್ನು ಉಳಿಸಲು ಹೆಚ್ಚಿನ ಮಟ್ಟ ದಲ್ಲಿ ಮುಂದೆ ಬರಬೇಕು ಎಂದರು.

ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಮತ್ತು ಇನ್ನು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆ ಯಿಂದ ವಾತಾವರಣದಲ್ಲಿ ಏರುಪೇರು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಯೊಬ್ಬರು ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು. ಕಷ್ಟವಾದರೂ ಪರವಾಗಿಲ್ಲ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಮರದ ಬುಟ್ಟಿ, ಬಟ್ಟೆ ಚೀಲಗಳನ್ನು ಬಳಸಬೇಕು ಮತ್ತು ಶಾಲಾ ಆವರಣದಲ್ಲಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೆಕು ಎಂದು ಮನವಿ ಮಾಡಿದರು.

ಸಾಫ್ಟ್‍ವೇರ್ ಕಂಪನಿ ಮುಖ್ಯಸ್ಥ ರಾಹುಲ್ ಜೈನ್ ಮಾತನಾಡಿ, ಸರ್ಕಾರಿ ಶಾಲೆ ಅಭಿ ವೃದ್ಧಿ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಿಂತ ಯಾವುದೇ ರೀತಿಯಲ್ಲಿ ಸರ್ಕಾರಿ ಶಾಲೆ ಕಡಿಮೆ ಇರದಂತೆ ಲ್ಯಾಪ್ ಟಾಪ್, ಕಂಪ್ಯೂ ಟರ್‍ಗಳು, ಪ್ರೊಜೆಕ್ಟರ್, ಕ್ರೀಡಾ ಸಾಮಗ್ರಿ ಗಳು, ನುರಿತ ಶಿಕ್ಷಕರು ಸೇರಿದಂತೆ ಎಲ್ಲ ರೀತಿಯ ಸಲವತ್ತುಗಳನ್ನು ನೀಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎಎಸ್ಪಿ ಶೋಭಾ, ಎಮ್‍ಟೆಕ್, ಕಾಎಮ್‍ಟೆಕ್ ಸಾಫ್ಟ್ ವೇರ್ ಕಂಪನಿ ವ್ಯವಸ್ಥಾಪಕಿ ಮೇರಿಯನ್ ಜೋಸೆಫ್, ಹಣಕಾಸು ವ್ಯವಸ್ಥಾಪಕ ರವಿಕುಮಾರ್, ತಾಪಂ ಸದಸ್ಯ ಚಲುವ ರಾಜು, ಬಿಇಓ ಮಹಾದೇವು, ರಾಘವೇಂದ್ರ, ಪ್ರಭಾಕರ್, ಶಾಲೆಯ ಹಿರಿಯ ವಿದ್ಯಾರ್ಥಿ ಗಳು, ಗ್ರಾಮಸ್ಥರು ಹಾಜರಿದರು.