ಖದೀಮನ ಬಂಧನ: ಲಕ್ಷಾಂತರ ರೂ. ಚಿನ್ನಾಭರಣ ವಶ

ಮೈಸೂರು:  ಮೈಸೂರು ಹಾಗೂ ಹಾಸನದಲ್ಲಿ ಒಟ್ಟು 3 ಮನೆಗಳ ಬೀಗ ಮುರಿದು ಚಿನ್ನಾಭರಣ ದೋಚಿದ್ದ ಖದೀಮನನ್ನು ಮೈಸೂರಿನ ಮಂಡಿ ಠಾಣೆ ಪೊಲೀ ಸರು ಬಂಧಿಸಿದ್ದಾರೆ. ನಂಜನಗೂಡು ಪಟ್ಟ ಣದ ರಾಜಾಜಿ ಕಾಲೋನಿ ನಿವಾಸಿ ನಂಜುಂಡ ಅಲಿ ಯಾಸ್ ಕರಿಯ(30) ಬಂಧಿತ ಆರೋಪಿ ಯಾಗಿದ್ದು, ಈತ ದೋಚಿದ್ದ ಸುಮಾರು 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರಿನ ಅಶೋಕ ರಸ್ತೆಯ ಗಿರವಿ ಅಂಗಡಿಯೊಂದರ ಮುಂದೆ ಬುಧವಾರ ಮಧ್ಯಾಹ್ನ 3.30ರ ವೇಳೆಯಲ್ಲಿ ಆರೋಪಿ ನಂಜುಂಡ ಚಿನ್ನದ ಸರವೊಂದನ್ನು ಹಿಡಿದು ನಿಂತಿದ್ದ. ಈ ಬಗ್ಗೆ ಮಾಹಿತಿ ತಿಳಿದ ಮಂಡಿ ಪೊಲೀಸರು, ಸ್ಥಳಕ್ಕೆ ದೌಡಾಯಿಸಿ, ಅನುಮಾನಾ ಸ್ಪದವಾಗಿ ನಿಂತಿದ್ದ ನಂಜುಂಡನನ್ನು ವಶಕ್ಕೆ ಪಡೆದರು. ಬಳಿಕ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಮಂಡಿ ಠಾಣಾ ವ್ಯಾಪ್ತಿ ತಿಲಕ್‍ನಗರ ಭಾವನಾ ಅಪಾರ್ಟ್ ಮೆಂಟ್ ನಿವಾಸಿ ವಿ.ಮಿಥುನ್ ಅವರ ಮನೆ ಹಾಗೂ ಹಾಸನ ನಗರದಲ್ಲಿ 2 ಮನೆಗಳ ಬೀಗ ಮುರಿದು, ಚಿನ್ನಾಭರಣ ದೋಚಿದ್ದನ್ನು ಒಪ್ಪಿಕೊಂಡಿದ್ದಾನೆ. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನರಸಿಂಹರಾಜ ವಿಭಾಗದ ಎಸಿಪಿ ಸಿ.ಗೋಪಾಲ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಮಂಡಿ ಠಾಣೆ ಇನ್‍ಸ್ಪೆಕ್ಟರ್ ಎಲ್.ಅರುಣ್, ಎಎಸ್‍ಐ ಗಳಾದ ಕೆ.ಎಸ್.ಗುರು ಸ್ವಾಮಿ, ಎಂ.ಬಸವರಾಜು, ಸಿಬ್ಬಂದಿ ಎಸ್.ಜಯಕುಮಾರ್, ಜಯಪಾಲ, ಎಂ.ಎಲಿಯಾಸ್, ರವಿಗೌಡ, ಶಂಕರ್ ಟಿ.ಬಂಡಿವಡ್ಡರ್ ಹಾಗೂ ಹರೀಶ್ ಪಾಲ್ಗೊಂಡಿದ್ದರು.