ತಂಬಾಕು ಉತ್ಪನ್ನಗಳ ಸೇವನೆ, ಮಾರಾಟ ನಿಷೇಧ ಕುರಿತು ಶ್ರೀರಂಗಪಟ್ಟಣ, ಮಳವಳ್ಳಿಯಲ್ಲಿ ಗುಲಾಬಿ ಆಂದೋಲನ

ಶ್ರೀರಂಗಪಟ್ಟಣ/ಮಳವಳ್ಳಿ ಡಿ.10- ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಶಿಕ್ಷಣ, ಪೊಲೀಸ್ ಇಲಾಖೆ ಸಹಯೋಗ ದೊಂದಿಗೆ ತಂಬಾಕು ಉತ್ಪನ್ನಗಳ ಸೇವನೆ ಹಾಗೂ ಮಾರಾಟ ನಿಷೇಧಿಸುವ ಕುರಿತು ಶಾಲಾ ಮಕ್ಕಳಿಂದ ಮಂಗಳವಾರ ಶ್ರೀರಂಗಪಟ್ಟಣ ಹಾಗೂ ಮಳವಳ್ಳಿಯಲ್ಲಿ ಗುಲಾಬಿ ಆಂದೋಲನ ನಡೆಯಿತು.

ಶ್ರೀರಂಗಪಟ್ಟಣ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ನಿಯರು ಗುಲಾಬಿ ಆಂದೋಲನದ ಅಂಗ ವಾಗಿ ಇಲ್ಲಿನ ಪುರಸಭೆ ಬಳಿಯ ವೃತ್ತ ದಲ್ಲಿ ಮಾನವ ಸರಪಳಿ ನಿರ್ಮಿಸಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಸಾರ್ವ ಜನಿಕರಿಗೆ ಜಾಗೃತಿ ಮೂಡಿಸಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕದ ವಿಷಯ. ಭಾರತದಲ್ಲಿ ನಿತ್ಯ ತಂಬಾಕು ಸೇವನೆಯಿಂದ 2500 ಮಂದಿ ಸಾಯುತ್ತಿದ್ದಾರೆ. ಆದ್ದರಿಂದ ಸಾರ್ವಜನಿ ಕರು ಕಷ್ಟಪಟ್ಟು ಗಳಿಸಿದ ಹಣವನ್ನು ತಂಬಾಕು ಉತ್ಪನ್ನಗಳಿಗೆ ವಿನಿಯೋಗಿಸುವ ಬದಲು ಪೌಷ್ಟಿಕ ಆಹಾರಕ್ಕೆ ಉಪಯೋಗಿಸಿ. ಅಲ್ಲದೇ ಈ ತಂಬಾಕು ಸೇವನೆಯಿಂದ ಕ್ಯಾನ್ಸರ್, ಪಾಶ್ರ್ವವಾಯು, ಹೃದಯಾ ಘಾತ, ಶ್ವಾಸಕೋಶದ ಖಾಯಿಲೆ, ಕುರುಡುತನ ಮುಂತಾದ ಕಾಯಿಲೆಗಳು ಬರುತ್ತವೆ. ಆದ್ದರಿಂದ ತಂಬಾಕು ಸೇವನೆ ಬಿಡುವಂತೆ ಸಾರ್ವಜನಿಕರಿಗೆ ಗುಲಾಬಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಎನ್. ಕೆ.ವೆಂಕಟೇಶ್ ಗುಲಾಬಿ ಆಂದೋಲನಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶು ಪಾಲ ಹೆಚ್.ಎಸ್.ಜಯಶಂಕರಪ್ಪ, ಪಟ್ಟಣ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪಿ. ಮಾರುತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್, ಹಿರಿಯ ಆರೋಗ್ಯ ಸಹಾ ಯಕ ಮೋಹನ್, ಸಲೀಂ ಪಾಷ, ಜಿ.ಬಿ. ಹೇಮಣ್ಣ, ರಾಜು, ಕಿರಿಯ ಆರೋಗ್ಯ ಸಹಾ ಯಕ ಎಂ.ಸಿ.ಚಂದನ, ಮಂಗಳ, ಗಾಯಿತ್ರಿ ಹಾಗೂ ಉಪನ್ಯಾಸಕರಾದ ಹೆಚ್.ರಾಜು, ಜ್ಯೋತಿ, ಆಶಾ ಕಾರ್ಯಕರ್ತೆ ಹಾಜರಿದ್ದರು.

ಮಳವಳ್ಳಿ: ಪಟ್ಟಣದ ಸಿದ್ದಾರ್ಥ ಶಾಲಾ ಮಕ್ಕಳು ತಂಬಾಕು ಸೇವನೆ ತ್ಯಜಿಸುವಂತೆ ಜಾಥಾ ನಡೆಸಿ ತಂಬಾಕು ಸೇವಿಸುತ್ತಿದ್ದವರಿಗೆ ಗುಲಾಬಿ ನೀಡಿ ಪ್ರಮಾಣ ಬೋಧಿಸಿದರು.

ಇಲ್ಲಿನ ಸಿದ್ದಾರ್ಥ ಪ್ರೌಢಶಾಲೆ ಆವರಣ ದಿಂದ ಹೊರಟ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಈ ವೇಳೆ ಬೀಡಿ, ಸಿಗರೇಟ್ ಸೇವಿಸುತ್ತಿದ್ದವರಿಗೆ ವಿದ್ಯಾರ್ಥಿ ಗಳು ಹೂ ನೀಡಿ ಜಾಗೃತಿ ಮೂಡಿಸಿದರು.

ಈ ವೇಳೆ ತಾಲೂಕು ಆರೋಗ್ಯಾಧಿ ಕಾರಿ ಡಾ.ವೀರಭದ್ರಪ್ಪ, ಸಿಡಿಪಿಓ ಕುಮಾರ್, ಸಿದ್ದಾರ್ಥ ಪದವಿ ಪೂರ್ವ ಕಾಳೇಜು ಪ್ರಾಂಶುಪಾಲ ಕೆಂಪದಾಸೇಗೌಡ, ಮುಖ್ಯ ಶಿಕ್ಷಕ ರಾಜಶೇಖರ್, ಎಎಸ್‍ಐ ರವಿ ಕುಮಾರ್ ಮತ್ತೀತರರಿದ್ದರು.