ಇಂದು ಶ್ರೀರಂಗಪಟ್ಟಣದಲ್ಲಿ ಶೋಭಾಯಾತ್ರೆ

  • ಪೆÇಲೀಸ್ ಬಿಗಿ ಭದ್ರತೆ 20ಕ್ಕೂ ಹೆಚ್ಚು ಕಡೆ ಸಿಸಿಟಿವಿ ಕಣ್ಗಾವಲು
  • 5 ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳಿಂದ ಜಾಥಾ

ಮಂಡ್ಯ, ಡಿ.10(ನಾಗಯ್ಯ)- ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ.

ಗಂಜಾಂನ ಆಂಜನೇಯಸ್ವಾಮಿ ದೇವಸ್ಥಾನದಿಂದ ಶ್ರೀರಂಗ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಬಳಿಯ ಬಯಲು ಕ್ರೀಡಾಂಗಣದವರೆಗೆ ಈ ಶೋಭಾಯಾತ್ರೆ ನಡೆಯಲಿದ್ದು, ಕರ್ನಾಟಕ, ಕೇರಳ ಸೇರಿದಂತೆ ವಿವಿಧೆಡೆಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಭಾಗವಹಿಸಲಿದ್ದಾರೆ.

ಪಟ್ಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದ ಬಳಿಕ ಶ್ರೀರಂಗ ನಾಥಸ್ವಾಮಿ ದೇವಸ್ಥಾನದ ಬಯಲು ಕ್ರೀಡಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ಬಹಿರಂಗ ಧಾರ್ಮಿಕ ಸಭೆ ನಡೆಯಲಿದೆ. ಮಧ್ಯಾಹ್ನ 3 ಗಂಟೆ ಬಳಿಕ ಪಟ್ಟಣದ ಮೂಡಲ ಆಂಜನೇಯ ದೇವಸ್ಥಾನ ದಲ್ಲಿ ಮಾಲೆ ವಿಸರ್ಜನೆ ನಡೆಯಲಿದೆ.

ಈ ಧಾರ್ಮಿಕ ಸಭೆಯಲ್ಲಿ ದಕ್ಷಿಣ ಪ್ರಾಂತ್ಯದ ಸಂಚಾಲಕ ಕೆ.ಪಿ.ಉಲ್ಲಾಸ್, ಕೇರಳ ಪ್ರಾಂತ್ಯದ ಹಿಂದೂ ಭಾವೈಕ್ಯತಾ ಸಮಿತಿ ಮುಖಂಡ ರವಿಶಾಸ್ತ್ರಿ ಶಂಕ್ರಿ, ಚಂದ್ರವನದ ತ್ರಿನೇತ್ರ ಸ್ವಾಮೀಜಿ, ಗಂಜಾಂನ ಗಣೇಶ ಸ್ವಾಮೀಜಿ, ತೆಂಡೆಕೆರೆ ಸ್ವಾಮೀಜಿ ಸೇರಿದಂತೆ ಸ್ಥಳೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಪೆÇಲೀಸ್ ಬಿಗಿ ಬಂದೋಬಸ್ತ್: ಶೋಭಾಯಾತ್ರೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಾದ್ಯಂತ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡ ಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೆ.ಪರಶು ರಾಮ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಶ್ರೀರಂಗಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನದಿಂದ 5ರಿಂದ 6 ಸಾವಿರದಷ್ಟು ಹನುಮಮಾಲಾಧಾರಿಗಳು ಈ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಳೇ ಕೋಟೆ ಬೀದಿ ಮಾರ್ಗವಾಗಿ ಶ್ರೀರಂಗಪಟ್ಟಣದ ಪ್ರಮುಖ ರಸ್ತೆಯಲ್ಲಿ ಜಾಥಾ ಸಾಗಿ ಬರಲಿದೆ. ಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಆವರಣದ ಮುಂದೆ ಮುಕ್ತಾಯವಾಗಲಿದ್ದು, ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಭದ್ರತೆ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಶ್ರೀರಂಗಪಟ್ಟಣದ ಸೂಕ್ಷ್ಮ ಪ್ರದೇಶಗಳು ಸೇರಿದಂತೆ 20 ಕ್ಕೂ ಹೆಚ್ಚು ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳ ನಿರ್ವಹಣೆಗಾಗಿ ನಿರ್ವಹಣಾ ಕೇಂದ್ರ ತೆರೆಯಲಾಗಿದ್ದು ಇದಕ್ಕಾಗಿ ಸುಮಾರು 20 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಕೂಡಲೇ ಅದು ಪೆÇಲೀಸರ ಗಮನಕ್ಕೆ ಬರಲೆಂದು ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ತಮ್ಮ ನೇತೃತ್ವದಲ್ಲಿ(ಮಂಡ್ಯ ಜಿಲ್ಲಾಪೆÇಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ) ಎಎಸ್ಪಿ ಸೇರಿದಂತೆ 4 ಡಿವೈಎಸ್ಪಿ, 6 ಇನ್ಸ್‍ಪೆಕ್ಟರ್, 18 ಎಸ್‍ಐ, 20 ಎಎಸ್‍ಐ, 250 ಪೇದೆಗಳು, 150 ಮಂದಿ ಗೃಹರಕ್ಷಕ ದಳ, 3 ಕೆಎಸ್‍ಆರ್‍ಪಿ ತುಕಡಿಗಳು ಸೇರಿದಂತೆ ಅಂದಾಜು 500 ಪೆÇಲೀಸರನ್ನು ನಿಯೋಜಿಸಲಾಗಿದೆ ಎಂದರು. ಯಾತ್ರೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯ ದಂತೆ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.