ಜಿಪಂ ಉಪಾಧ್ಯಕ್ಷರಾಗಿ ಸುಪ್ರದೀಪ್ ಯಜಮಾನ ಅವಿರೋಧ ಆಯ್ಕೆ

ಹಾಸನ:  ಜಿಲ್ಲಾ ಪಂಚಾಯ್ತಿ ನೂತನ ಉಪಾಧ್ಯಕ್ಷರಾಗಿ ಸಕಲೇಶಪುರ ತಾಲೂಕಿನ ಹಾನುಬಾಳು ಕ್ಷೇತ್ರದ ಸುಪ್ರದೀಪ್ ಯಜಮಾನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಶ್ರೀನಿವಾಸ್ ಅವರು ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್‍ನ ಸುಪ್ರದೀಪ್ ಯಜಮಾನ ಆಯ್ಕೆಯಾದರು.

ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಜೆಡಿಎಸ್‍ನ ಸುಪ್ರದೀಪ್ ಯಜಮಾನ ಅವರು ಮೂರು ನಾಮ ಪುತ್ರ ಸಲ್ಲಿಸಿ ದರು. ಕಾಂಗ್ರೆಸ್‍ನ ಶ್ರೇಯಸ್ ಪಟೇಲ್ ಹಾಗೂ ಎಸ್.ಡಿ.ರೇವಣ್ಣ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದರು. 12.30ಕ್ಕೆ ನಾಮಪತ್ರಗಳನ್ನು ಪರಿಶೀಲಿಸಿದ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು, ಎಲ್ಲಾ 5 ನಾಮ ಪತ್ರಗಳು ಸಿಂಧುವಾಗಿರುವುದಾಗಿ ಘೋಷಿಸಿದರು. ನಾಮಪತ್ರ ಹಿಂಪಡೆಯಲು 5 ನಿಮಿಷಗಳ ಕಾಲಾವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಶ್ರೇಯಸ್‍ಪಟೇಲ್ ಹಾಗೂ ಎಸ್.ಡಿ. ರೇವಣ್ಣ ನಾಮಪತ್ರ ಹಿಂಪಡೆದರು. ಜೆಡಿಎಸ್‍ನ ಸುಪ್ರದೀಪ್‍ಯಜಮಾನ ಅವರು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಘೋಷಿಸಿದರು.

ನಲವತ್ತು ಸದಸ್ಯರನ್ನು ಹೊಂದಿರುವ ಜಿಲ್ಲಾ ಪಂಚಾಯಿತಿ ಯಲ್ಲಿ ಇಂದಿನ ಚುನಾವಣೆಯಲ್ಲಿ 39 ಸದಸ್ಯರು ಹಾಜರಿ ದ್ದರು. ಸುಪ್ರದೀಪ್ ಯಜಮಾನ ಅವರ ಉಪಾಧ್ಯಕ್ಷರ ಅವಧಿ 2-06-2021ಕ್ಕೆ ಕೊನೆಗೊಳ್ಳಲಿದೆ. ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಅವರು ಬೆಳಿಗ್ಗೆ 8ಗಂಟೆಯಿಂದ 10ರವರೆಗೆ ನಾಮ ಪತ್ರ ಸ್ವೀಕರಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಜಗದೀಶ್ ಅವರು ಉಪಸ್ಥಿತರಿದ್ದರು. ಚುನಾವಣೆಯ ನಂತರ ಶಾಸಕ ಹೆಚ್.ಕೆ. ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾದೇವರಾಜ್ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯರು ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು.