ಭವಿಷ್ಯವಿಲ್ಲದ ಮೈತ್ರಿ ಸರ್ಕಾರಕ್ಕೆ `ನಿಫಾ’ ವೈರಸ್ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯ

ಹಾಸನ:  ರಾಜ್ಯದಲ್ಲಿ ಆಡಳಿತ ದಲ್ಲಿರುವ ಜೆಡಿಎಸ್, ಕಾಂಗ್ರೆಸ್ ಎರಡು ಪಕ್ಷಗಳೂ ಮಾಗಿದ ಮಾವಿನಹಣ ್ಣನಂತಾ ಗಿದ್ದು, ಕೇರಳದ `ನಿಫಾ’ ವೈರಸ್ ತಾಕಿದೆ. ಭವಿಷ್ಯವಿಲ್ಲದ ಮೈತ್ರಿ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದರು.

ನಗರದ ಖಾಸಗಿ ಹೊಟೇಲೊಂದರಲ್ಲಿ ಕೇಂದ್ರದ 4 ವರ್ಷಗಳ ಸಾಧನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರಕ್ಕೆ ಭವಿಷ್ಯವಿಲ್ಲ. ಇಬ್ಬರ ಮೈತ್ರಿ ಬಗ್ಗೆ ನಮಗೆ ಯಾವುದೇ ಆತಂಕ ವಿಲ್ಲ. ಕೆಲ ದಿನಗಳಲ್ಲೇ ಮೈತ್ರಿ ಮುರಿಯ ಲಿದೆ ಎಂದು ಕುಟುಕಿದರು.

ಕೇಂದ್ರದಲ್ಲಿ ಬಿಜೆಪಿ ಯಶಸ್ವಿಯಾಗಿ 4 ವರ್ಷ ಪೂರೈಸಿದೆ. ಚುನಾವಣೆ ಸಮಯ ದಲ್ಲಿ ಜನತೆಗೆ ನೀಡಿದ ಭರವಸೆಯನ್ನು ಯಾವ ಭ್ರಷ್ಟಾಚಾರವಿಲ್ಲದೆ ಈಡೇರಿಸಿದೆ. ಅಧಿಕಾರ ಕೊಟ್ಟ ಜನತೆಗೆ ಕೆಲಸ ಮಾಡಿದ ವರದಿ ಕೊಟ್ಟು ಮೌಲ್ಯಮಾಪನ ಮಾಡಿ ಸುವ ಅಪೇಕ್ಷೆಯನ್ನು ಪ್ರಧಾನಿ ಹೊಂದಿದ್ದು, ಸಾರ್ವಜನಿಕರಿಂದ ಫೀಡ್‍ಬ್ಯಾಕ್ ಪಡೆವ ಮೂಲಕ ಮುಂದಿನ ಬಜೆಟ್‍ನಲ್ಲಿ ಅಭಿವೃದ್ಧಿ ಆದ್ಯತೆ ನೀಡಲು ಪ್ರಯತ್ನಿಸುತ್ತೇವೆ ಎಂದರು.

ದೇಶದ ಘನತೆಯನ್ನು ಜಾಗತಿಕ ಮಟ್ಟ ದಲ್ಲಿ ಹೆಚ್ಚಿಸುವ ಪ್ರಯತ್ನದಲ್ಲಿ ಕೇಂದ್ರ ಯಶಸ್ವಿಯಾಗಿದೆ. ಅಲ್ಲದೆ ನಮ್ಮ ದೇಶ ಅತ್ಯಂತ ವೇಗವಾಗಿ ಆರ್ಥಿಕವಾಗಿ ಬೆಳವಣ ಗೆ ಕಂಡಿದೆ. ತ್ರೈಮಾಸಿಕ ವರದಿಯಲ್ಲಿ ಜಿಡಿಪಿ ಶೇ.7.7ರಷ್ಟು ಅಭಿವೃದ್ಧಿಯಾಗಿದೆ ಎಂದರು.

10 ಲಕ್ಷ ಕೋಟಿ ದಾಟಿದ ತೆರಿಗೆ ಸಂಗ್ರಹ: ಈ ಹಿಂದೆ ದೇಶದಲ್ಲಿ 6.38 ಲಕ್ಷ ಕೋಟಿ ತೆರಿಗೆ ಮಾತ್ರ ಸಂಗ್ರಹವಾಗುತ್ತಿತ್ತು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಈ ಮೊತ್ತ 10 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಪಾರದರ್ಶಕ ಆಡಳಿತದೊಂದಿಗೆ ಅಭಿವೃದ್ಧಿಗೆ ಪೂರಕವಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತ ನೀಡುತ್ತಿದೆ ಎಂದು ತಿಳಿಸಿದರು.

ಅಭಿವೃದ್ಧಿಗೆ ಒತ್ತು: ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕ ಶಿಸ್ತು ಹೆಚ್ಚಿದ್ದು, ಹತ್ತು ಹಲವು ಅಂಶಗಳ ಯೋಜನೆಗಳು ಇದಕ್ಕೆ ಸಾಕ್ಷಿಯಾಗಿದೆ. ರಸ್ತೆ, ವಿಮಾನ, ರೈಲ್ವೆ ಅಭಿವೃದ್ಧಿ ಸೇರಿ ದಂತೆ ಅನೇಕ ಮಹತ್ತರ ಅಭಿವೃದ್ಧಿಗೆ ಕೇಂದ್ರ ಒತ್ತು ನೀಡಿದೆ. 2013-2014ರಲ್ಲಿ ಪ್ರತಿನಿತ್ಯ 69 ಕಿ.ಮೀ ಮಾತ್ರ ರಸ್ತೆ ಅಭಿವೃದ್ಧಿಯಾ ಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ನಿತ್ಯ 134 ಕಿ.ಮೀ ರಸ್ತೆಗಳು ಅಭಿವೃದ್ಧಿಗೊಳ್ಳುತ್ತಿರುವ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದ ಸದಾನಂದಗೌಡರು, ಬಡವರ ಶ್ರೇಯೋ ಭಿವೃದ್ಧಿ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದು, ಮಹಿಳೆಯರು ಸೇರಿದಂತೆ ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ದೇಶದ 5 ಕೋಟಿ ಬಡವರಿಗೆ ಅನಿಲ ಯೋಜನೆ ವಿತರಿಸುವ ಗುರಿ ಹೊಂದಿದ್ದು ಈಗಾಗಲೇ 3.98 ಕೋಟಿ ಜನರಿಗೆ ಅಡುಗೆ ಅನಿಲ್ ಸಂಪರ್ಕ ವಿತರಿಸಲಾಗಿದೆ. ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ. 3,000ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದೆ ಎಂದರು.

ರಾಜ್ಯ ಸರ್ಕಾರ ವೀಫಲ: ಕೇಂದ್ರ ಸರ್ಕಾರ ರಾಜ್ಯಕ್ಕೆ ಸಾಕಷ್ಟು ಅನುದಾನ ನೀಡಿದ್ದು, ಇದನ್ನು ಬಳಸಿಕೊಳ್ಳುವಲ್ಲಿ ಇಲ್ಲಿನ ಸರ್ಕಾರ ವಿಫಲವಾಗಿದೆ. ಮಹಾದಾಯಿ ಇತ್ಯರ್ಥಕ್ಕೆ ಬಿಜೆಪಿ ಪ್ರಾಮಾಣ ಕ ಪ್ರಯತ್ನ ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷವೇ ಇದಕ್ಕೆ ಅಡ್ಡಿಪಡಿ ಸುತ್ತಿದೆ ಎಂದು ದೂರಿದರು. ಕಾವೇರಿ ನಿರ್ವ ಹಣಾ ಮಂಡಳಿ ರಚನೆಯಲ್ಲೂ ಕೇಂದ್ರ ಸರ್ಕಾರ ಸುಪ್ರೀಂ ಆದೇಶದಂತೆ ಹೆಜ್ಜೆ ಇಟ್ಟಿದ್ದು, ರಾಜ್ಯದ ಒಳಿತಿಗೆ ಬದ್ಧವಾಗಿದೆ ಎಂದರು.

ಜಿಲ್ಲೆಯ ಬಹುಬೇಡಿಕೆಯಾಗಿರುವ ವಿಮಾನ ನಿಲ್ದಾಣದ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ನಗರದಿಂದ ಹೊಸ ಬಸ್‍ನಿಲ್ದಾಣ ಬಳಿ ಮೇಲ್ಸೇತುವೆ ನಿರ್ಮಾಣ ಶೀಘ್ರವೇ ಆರಂಭ ವಾಗಲಿದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಪ್ರೀತಮ್ ಜೆ.ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್, ಮುಖಂಡರಾದ ಹುಲ್ಲಹಳ್ಳಿ ಸುರೇಶ್, ಶಿವನಂಜೇಗೌಡ, ಕಮಲ್ ಕುಮಾರ್, ನಗರಸಭೆ ಸದಸ್ಯ ಹೆಚ್.ಎಂ. ಸುರೇಶ್ ಕುಮಾರ್, ಮಾಧÀ್ಯಮ ವಕ್ತಾರ ವೇಣುಗೋಪಾಲ್ ಇತರರಿದ್ದರು.