ಐಎಎಸ್ ಅಧಿಕಾರಿ ವಿರುದ್ಧ ಮತಾಂತರ ಆರೋಪ ವಿಹೆಚ್‍ಪಿ, ಭಜರಂಗದಳ ಪ್ರತಿಭಟನೆ

ಮಡಿಕೇರಿ: ಕಲ್ಬುರ್ಗಿ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಆತನ ಪತ್ನಿ ಹಿಂದೂ ಹೆಣ್ಣು ಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಸಂಘಟನೆಗಳು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದವು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘ ಟನೆಗಳ ಕಾರ್ಯಕರ್ತರು ಲವ್ ಜಿಹಾದ್ ನಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸ ಬೇಕೆಂದು ಪ್ರತಿಭಟನಾಕಾರರು ಒತ್ತಾಯಿ ಸಿದರು.

ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಕಾರ್ಯದರ್ಶಿ ಡಿ.ನರಸಿಂಹ ಮಾತ ನಾಡಿ, ಮತಾಂತರದಲ್ಲಿ ತೊಡಗಿರುವ ಹಿರಿಯ ಅಧಿಕಾರಿಯನ್ನು ಅಮಾನತು ಗೊಳಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿ ಸಿದರು. ಮುಗ್ಧ ಹಿಂದೂ ಹೆಣ್ಣುಮಕ್ಕಳ ಮನ ಪರಿವರ್ತಿಸಿ ನಿರಂತರ ದೌರ್ಜನ್ಯ ನಡೆಸಿ ಮತಾಂತರ ಮಾಡುವ ಮೂಲಕ ಹೊರ ದೇಶಗಳಿಗೆ ಮಾರಾಟ ಮಾಡುವ ವ್ಯವಸ್ಥಿತ ದಂಧೆ ನಡೆಯುತ್ತಿದೆ ಆರೋಪಿ ಸಿದ ಅವರು, ಅಧಿಕಾರಿಯ ಪತ್ನಿ ಬಳಿಯಿಂದ ವಶಪಡಿಸಿಕೊಂಡಿರುವ 8 ಲ್ಯಾಪ್‍ಟಾಪ್ ಹಾಗೂ 12 ಮೊಬೈಲ್‍ಗಳ ಆಂತರಿಕ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಬೇಕು ಮತ್ತು ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಬೇ ಕೆಂದು ನರಸಿಂಹ ಒತ್ತಾಯಿಸಿದರು.

ವಿಶ್ವ ಹಿಂದೂ ಪರಿಷತ್‍ನ ಉಪಾಧ್ಯಕ್ಷ ಮೇದಪ್ಪ, ಕಾರ್ಯಾಧ್ಯಕ್ಷ ಐ.ಎಂ.ಅಪ್ಪಯ್ಯ, ಭಜರಂಗ ದಳದ ಪ್ರಮುಖರಾದ ಚೇತನ್, ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ವಿನಯ್, ಭಜರಂಗದಳದ ಸುರಕ್ಷ ಪ್ರಮುಖ್ ವಿನೋದ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.