ಹೆಚ್‍ಡಿಕೆ ಮಾದರಿಯಲ್ಲೇ ಗ್ರಾಮ ವಾಸ್ತವ್ಯ ಹರದನಹಳ್ಳಿಯಲ್ಲಿ ಸಚಿವ ಸಾರಾ ಮಹೇಶ್ ಹೇಳಿಕೆ

ಭೇರ್ಯ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೈಗೊಂಡಿದ್ದ ಗ್ರಾಮವಾಸ್ತವ್ಯ ಮಾದರಿಯಲ್ಲೇ ತಾನೂ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ಕಾರ್ಯ ಕ್ರಮ ಆರಂಭಿಸುವುದಾಗಿ ಪ್ರವಾಸೋ ದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್ ಪ್ರಕಟಿಸಿದರು.
ಅವರು ಕೆ.ಆರ್.ನಗರ ತಾಲೂಕು ಹರದನಹಳ್ಳಿಯಲ್ಲಿ ಭಾನುವಾರ ಗ್ರಾಮಸ್ಥ ರಿಂದ ಅಭಿನಂದನೆ ಸ್ವೀಕರಿಸಿ ಮಾತ ನಾಡಿದರು. ಹರದನಹಳ್ಳಿಯಿಂದಲೇ ಗ್ರಾಮವಾಸ್ತವ್ಯ ಕಾರ್ಯಕ್ರಮ ಪ್ರಾರಂಭ ಗೊಳ್ಳಲಿದ್ದು, ಜುಲೈ 6 ರಂದು ರಾತ್ರಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿದ ಅಧಿಕಾರಿಗಳೊಂದಿಗೆ ವಾಸ್ತವ್ಯ ಹೂಡ ಲಾಗುವುದು. ಜು.7ರಂದು ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ 60 ಕೋಟಿ ರೂ.ವೆಚ್ಚದ ಹಾರಂಗಿ ಎಡದಂಡೆ ನಾಲಾ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರ ಹಲವಾರು ಜನಪರ ಯೋಜನೆಗಳಾದ ವೃದ್ಧಾಪ್ಯ, ಅಂಗವಿ ಕಲರ ವೇತನಗಳ ಅರ್ಜಿಗಳನ್ನು ಸ್ಥಳದಲ್ಲಿ ಮಂಜೂರು ಮಾಡಲು ಕ್ರಮ ಕೈಗೊಳ್ಳ ಲಾಗುವುದು ಎಂದರು, ಅಂದು 1.50 ಕೋಟಿ ರೂ.ವೆಚ್ಚದ ಆಸ್ಪತ್ರೆ ಹೆಚ್ಚುವರಿ ಕಟ್ಟಡ ನಿರ್ಮಾಣ, ಗ್ರಾಮ ಪರಿಮಿತಿ ರಸ್ತೆ ಅಭಿವೃದ್ದಿ ಕಾಮಗಾರಿ ಹಾಗು ವ್ಯವಸ್ಥಿತವಾದ ಜಿಮ್ ಸೆಂಟರ್‍ಗೆ ಚಾಲನೆ ಅಲ್ಲದೆ ವಸತಿ ಯೋಜನೆಯಡಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗು ವುದು ಎಂದರು.

ತಾನು ಸಾಲಿಗ್ರಾಮದಲ್ಲಿ ಹುಟ್ಟಿದರೂ ಹರದನಹಳ್ಳಿಯಲ್ಲಿ ಆಡಿ ಬೆಳೆದಿದ್ದೇನೆ. ನಿಮ್ಮೂರಿನ ಮಗನೆಂಬ ಭಾವನೆಯಿಂದ ನನಗೆ ಈ ಬಾರಿಯ ಚುನಾವಣೆಯಲ್ಲೂ ಹೆಚ್ಚು ಮತನೀಡಿ ಆಶೀರ್ವದಿಸಿದ್ದೀರಿ ಎಂದು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಯಲ್ಲಿ ಅದ್ಧೂರಿ ಮೆರವಣ ಗೆಯ ಮೂಲಕ ಸಚಿವರನ್ನು ವೇದಿಕೆಗೆ ಕರೆತರ ಲಾಯಿತು. ಜಿಪಂ ಮಾಜಿ ಸದಸ್ಯ ಹರದನ ಹಳ್ಳಿ ವಿಜಯ್, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ಟಿ.ಸೋಮ ಶೇಖರ್, ಪಿಎಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಮೇ ಗೌಡ, ಮುಖಂಡರಾದ ಗೋಪಾಲ್, ರಮೇಶ್, ನಿಂಗಪ್ಪ, ಅನಂತ್, ಮಹಿಳಾ ಸಂಘದ ಸದಸ್ಯರು ಸೇರಿದಂತೆ ನೂರಾರು ಮಂದಿ ಇದ್ದರು.