ಮಹಾರಾಷ್ಟ್ರದಿಂದ ಬಂದು ಮನೆಯಲ್ಲಿದ್ದವರಿಗೆ ಚಿಕಿತ್ಸೆ.ಕೊಡಿಸಿದ ಗ್ರಾಮಸ್ಥರು !

ಮಂಡ್ಯ,ಮಾ.29 (ನಾಗಯ್ಯ); ಹಲವಾರು ವರ್ಷಗಳಿಂದ ಕಾರ್ಯನಿಮಿತ್ತ ಮಹಾರಾಷ್ಟ್ರದಲ್ಲಿದ್ದು ಇಂದು ಗ್ರಾಮಕ್ಕೆ ಬಂದ ಇಬ್ಬರಿಗೆ ಗ್ರಾಮಸ್ತರೇ ಕರೆದೊಯ್ದು ಚಿಕಿತ್ಸೆಗೆ ದಾಖಲು ಮಾಡಿಸಿದ ಘಟನೆ ಕೆ.ಎಂ.ದೊಡ್ಡಿ ಸಮೀಪದ ಬಿದರಹೊಸಹಳ್ಳಿಯಲ್ಲಿ ಜರುಗಿದೆ.

ಸುಮಾರು 35 ವರ್ಷವಯಸ್ಸಿನವರಾದ ವ್ಯಕ್ತಿಗಳು ಮಹಾರಾಷ್ಟ್ರದಲ್ಲಿ ನೆಲೆಸಿದ್ದು ಗ್ರಾಮಕ್ಕೆ ಆಗಮಿಸಿ ಮನೆಯಲ್ಲಿದ್ದವರನ್ನ ಕರೆದೊಯ್ದು ಆಸ್ಪತ್ರಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಕೆ.ಎಂ.ದೊಡ್ಡಿ ಸಮೀಪದ ಬಿದರಹೊಹಳ್ಳಿ ಗ್ರಾಮದ ಇಬ್ಬರು ವ್ಯಕ್ತಿಗಳು ಮಹಾರಾಷ್ಟ್ರದಲ್ಲಿ ಕೆಲಸಮಾಡಿಕೊಂಡಿದ್ದರು ಎನ್ನಲಾಗಿದ್ದು ಅವರು ಕೊರೊನಾ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಆಗಮಿಸಿದ್ದರು.ವಿಷಯ ತಿಳಿದ ಸ್ಥಳೀಯ ಗ್ರಾಮಪಂಚಾಯಿತಿಯವರು ಬೆಳಿಗ್ಗೆ ಕೆ.ಎಂ ದೊಡ್ಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತಪಾಸಣೆ ನಡೆಸಿದ ವೈದ್ಯರು ಈ ಇಬ್ಬರ ಆರೋಗ್ಯದ ಉಷ್ಣಾಂಶದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಸದ್ಯಕ್ಕೆ ಈ ಇಬ್ಬರೂ ವ್ಯಕ್ತಿಗಳಿಗೆ ಯಾವುದೇ ರೀತಿಯ ಸೀತ,ನೆಗಡಿ,ಕೆಮ್ಮು,ಜ್ವರದಂತಹ ಯಾವುದೇ ಲಕ್ಷಣಗಳಿಲ್ಲ ಎಂದು ಸ್ಪಷ್ಠಪಡಿಸಿರುವ ವೈದ್ಯರು , ಅವರ ಕುಟುಂಬದ ಸದಸ್ಯರನ್ನೂ ಸಹ ಕರೆ ತಂದು ತಪಾಸಣೆ ನಡೆಸುವಂತೆಯೂ ಗ್ರಾಮಪಂಚಾಯಿತಿಯವರಿಗೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.