ಕಾಂಗ್ರೆಸ್ ಆಡಳಿತದಲ್ಲಿ ಅನುದಾನ ಕೊರತೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ

ವಿರಾಜಪೇಟೆ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಕೊಡಗಿನ ಜಮ್ಮ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಕೊಡಗಿನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಗೊಳಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ ಕಾರ ಐದು ವರ್ಷದ ಅವಧಿಯಲ್ಲಿ ಅನು ದಾನದ ಕೊರತೆಯಿಂದ ಯಾವುದೇ ಅಭಿ ವೃದ್ಧಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ ಹೇಳಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಸ್ಥಳೀಯ ತಾಲೂಕು ಮೈದಾನ ದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆ ಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗಲಭೆ, ಹತ್ಯೆಗಳು ಹೆಚ್ಚಾಗಿದ್ದು, ಸಿದ್ದರಾಮಯ್ಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲರಾಗಿದ್ದಾರೆ ಎಂದರು.

ಕೊಡವ ಕುಟುಂಬಗಳ ಹಾಕಿ ಕ್ರೀಡೆಗೆ ಅನುದಾನ ನೀಡುವುದಾಗಿ ಹೇಳಿ ಕೊನೆಯಲ್ಲಿ ಅನುದಾನ ನೀಡದೆ ಮೌನ ವಹಿಸಿದ್ದಾರೆ. ಗಣ ಲೂಟಿ ಮಾಡಿರುವವರೆಲ್ಲ ಕಾಂಗ್ರೆಸ್ಸಿ ಗರೆ. ಅದರಿಂದ ಕಾಂಗ್ರೆಸ್ ಮುಕ್ತ ಮಾಡಲು ಮತದಾರರು ಸವಾಲಾಗಿ ಸ್ವೀಕರಿಸ ಬೇಕಾಗಿದೆ ಎಂದರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಬಿ.ಭಾರತೀಶ್ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಐದು ವರ್ಷ ಗಳಿಂದ ಧರೋಡೆಕೋರರಿಗೆ ಬೆಂಬಲ ನೀಡುತ್ತಾ ಹತ್ಯೆಗಳು ಹೆಚ್ಚಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಅದರಿಂದ ಜಿಲ್ಲೆ ಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದೆ ಎಂದರು.

ಪಕ್ಷದ ಮುಖಂಡರಾದ ಮುಕೊಂಡ ಬೋಸ್ ದೇವಯ್ಯ ಮಾತನಾಡಿ, ಹಿಂದೆ ಕೊಡಗಿನಲ್ಲಿ ಹಲವಾರು ದೇವಾಲಯ ಗಳನ್ನು ದ್ವಂಸ ಮಾಡಿರುವಂತಹ ಟಿಪ್ಪುವಿನ ಜಯಂತಿಯನ್ನು ಕಾಂಗ್ರೆಸ್ ಸರಕಾರ ಮಾಡಲು ಮುಂದಾಗಿ ರಾಜ್ಯದ ಜನತೆಯಲ್ಲಿ ಗೊಂದಲ ಸೃಷ್ಠಿಸಿರುವುದಾಗಿ ಹೇಳಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಪ್ಪಚ್ಚು ರಂಜನ್ ಅವರು ಮಾತನಾಡಿ, ಬಿಜೆಪಿ ಕಾರ್ಯಕರ್ತರು ಕೇಂದ್ರದ ನರೇಂದ್ರ ಮೋದಿ ಸರಕಾರ ಮಾಡಿರುವಂತ ಸಾಧ ನೆಗಳನ್ನು ಮತದಾರರಿಗೆ ತಲುಪಿಸುವಂತಾಗ ಬೇಕು. ಕೇಂದದ್ರ ಉಜ್ವಲ ಯೋಜನೆಯಲ್ಲಿ 38 ಸಾವಿರ ಗ್ಯಾಸ್ ಕಿಟ್‍ನ್ನು ಕಡು ಬಡ ಜನರಿಗೆ ಉಚಿತವಾಗಿ ನೀಡಲಾಗಿದೆ. ನಮ್ಮ ಪಕ್ಷ ಶಿಕ್ಷಣಕ್ಕೆ ಒತ್ತು ನೀಡಿರುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರ ಮಣ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕೊಡಗಿನ ಕಾಂಗ್ರೆಸ್ಸಿಗರು ಸೋಲುತ್ತೇವೆಂದು ಭಯಗೊಂಡು ಜಾತಿಯ ಹಣೆಪಟ್ಟಿ ಕಟ್ಟು ತ್ತಿದ್ದಾರೆ. ಆದರೆ ನಮ್ಮಲ್ಲಿ ಜಾತಿ ಭÉೀದವಿಲ್ಲ ಬಿಜೆಪಿಯವರೆಲ್ಲ ಒಂದೆ ಜಾತಿ ಎಂದರು.

ಬಿಜೆಪಿಯ ರಾಜ್ಯ ಕಾರ್ಯದರ್ಶೀ ಮನು ಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ಮುಖಂಡರುಗಳಾದ ರೀನಾ ಪ್ರಕಾಶ್, ಬಿಜೆಪಿ ತಾಲೂಕು ಅಧ್ಯಕ್ಷ ಅರುಣ್ ಬಿಮಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತ, ಪಕ್ಷದ ವಕ್ತಾರ ಟಿ.ಪಿ.ಕೃಷ್ಣ ಹಾಗೂ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ವಿರಾಜಪೇಟೆ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ ಅವರ ಗೆಲು ವಿಗಾಗಿ ಪರ ಪಟ್ಟಣದ ತೆಲುಗರ ಬೀದಿಯಲ್ಲಿ ರುವ ಮಾರಿಯಮ್ಮ ದೇವಾಲಯದಲ್ಲಿ ಹಾಗೂ ಗಡಿಯಾರ ಕಂಬದ ಬಳಿಯಿರುವ ಮಹಾ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತೆಲುಗರ ಬೀದಿಯಿಂದ ಹೊರಟು ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾಗಿ ತಾಲೂಕು ಮೈದಾನದವರೆಗೆ ಮೆರವಣ ಗೆ ನಡೆಸಿ ನಂತರ ಬಹಿರಂಗ ಸಭೆ ನಡೆಯಿತು.