ಸೆ.29ರಂದು ವಿಕಲಚೇತನರ ವ್ಹೀಲ್‍ಚೇರ್ ಕ್ರಿಕೆಟ್ ಪಂದ್ಯಾವಳಿ

ಮೈಸೂರು, ಸೆ.26(ಪಿಎಂ)- ಕರ್ನಾ ಟಕ ವ್ಹೀಲ್‍ಚೇರ್ ಕ್ರಿಕೆಟ್ ಅಸೋಸಿ ಯೇಷನ್ (ಕೆಡಬ್ಲ್ಯೂಸಿಎ), ವಿಕಲಚೇತ ನರ ಅಭ್ಯುದಯ ಸೇವಾಸಂಸ್ಥೆ, ಸುರಕ್ಷಾ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಸೆ.29 ರಂದು `ದಸರಾ ಕಪ್-2019’ ಶೀರ್ಷಿಕೆ ಯಡಿ ವಿಕಲಚೇತನರ ವ್ಹೀಲ್‍ಚೇರ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕೆಡಬ್ಲ್ಯೂಸಿಎ ಕಾರ್ಯದರ್ಶಿ ವಿಜಯ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಮೈಸೂರಿನ ವಿಜಯನಗರದ 1ನೇ ಹಂತದಲ್ಲಿರುವ ಮುಡಾ ಕ್ರೀಡಾ ಮೈದಾನದಲ್ಲಿ ವಿಕಲಚೇ ತನರ ವ್ಹೀಲ್‍ಚೇರ್ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಮೈಸೂರು, ಬಾಗಲ ಕೋಟೆ ಹಾಗೂ ಬೆಂಗಳೂರು ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ ಎಂದು ಹೇಳಿದರು.

10 ಓವರ್‍ಗಳ ಪಂದ್ಯ ಇದಾಗಿದ್ದು, ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ಉತ್ತಮ ಬೌಲರ್, ಉತ್ತಮ ಬ್ಯಾಟ್ಸ್‍ಮನ್, ಉತ್ತಮ ಫೀಲ್ಡರ್‍ಗೆ ಪ್ರಶಸ್ತಿ ನೀಡಲಾಗು ವುದು. ವಿಭೂತಿಪುರ ಮಠದ ಡಾ.ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆ ಮಠದ ಶ್ರೀ ಪಟ್ಟದ ಮಲ ಯಾಳ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಅಂದು ಬೆಳಿಗ್ಗೆ 9ಕ್ಕೆ ನಡೆ ಯುವ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಲಿದ್ದಾರೆ ಎಂದರು.

ಅತಿಥಿಗಳಾಗಿ ಚಲನಚಿತ್ರ ನಾಯಕ ನಟರಾದ ದರ್ಶನ್, ಅಭಿಷೇಕ್ ಅಂಬ ರೀಷ್, ಹಿರಿಯ ನಟ ದೊಡ್ಡಣ್ಣ ಆಗಮಿ ಸಲಿದ್ದಾರೆ. ಇದೇ ಮೈದಾನದಲ್ಲಿ ಪ್ಲಾಸ್ಟಿಕ್ ಬದಲಿಯಾಗಿ ಬಟ್ಟೆ ಬ್ಯಾಗ್ ಬಳಕೆ, ಅಂಗ ದಾನ ಅರಿವು, ಉದ್ಯೋಗಾವಕಾಶದ ಮಾಹಿತಿ ಕುರಿತ ಮಳಿಗೆಗಳನ್ನು ತೆರೆಯ ಲಾಗುತ್ತಿದೆ. ಜೊತೆಗೆ `ಗಾಂಧೀಜಿ ಕನಸು 150ಕ್ಕೆ ನನಸು’ ಕುರಿತು ಆಡಿಯೋ ಪ್ಲೇ ಕಾರ್ಯಕ್ರಮ ಇರಲಿದೆ. ಸೆ.30ರಂದು ಬೆಳಿಗ್ಗೆ 11ಕ್ಕೆ ಪ್ಲಾಸ್ಟಿಕ್ ನಿಷೇಧ ಕುರಿತು ಮೇಟಗಳ್ಳಿ ಯಿಂದ ಹೆಬ್ಬಾಳದವರೆಗೆ ಜಾಗೃತಿ ಜಾಥಾ ನಡೆಸಲಾಗುವುದು ಎಂದರು. ಕೆಡಬ್ಲ್ಯೂ ಸಿಎ ನಿರ್ದೇಶಕ ಪ್ರದೀಪ್, ವಿಕಲಚೇತ ನರ ಅಭ್ಯುದಯ ಸೇವಾಸಂಸ್ಥೆ ಸಂಸ್ಥಾಪಕ ಎಂ.ಪ್ರಭುಸ್ವಾಮಿ, ಸುರಕ್ಷಾ ಫೌಂಡೇಶನ್ ಅಧ್ಯಕ್ಷ ಆನಂದ್, ಕ್ರೀಡಾಪಟು ಆರ್. ರಾಮಚಂದ್ರ ಸುದ್ದಿಗೋಷ್ಠಿಯಲ್ಲಿದ್ದರು.