ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆಯ ಸುಧಾರಣೆ ಭರವಸೆ: ಡಿ.ಸಿ.ತಮ್ಮಣ್ಣ

ಹಾಸನ: ರಾಜ್ಯ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಜಿಲ್ಲೆಯಲ್ಲಿಂದು ಸಂಚರಿಸಿ, ವಿವಿಧ ಬಸ್ ನಿಲ್ದಾಣ ಹಾಗೂ ಡಿಪೋಗಳಿಗೆ ಭೇಟಿ ನೀಡಿ ಪರಿಶೀಲಿಸಿದರ ಲ್ಲದೆ, ಮೂಲ ಸೌಕರ್ಯ ಅಭಿವೃದ್ಧಿ ಕುರಿತು ಸಂಪೂರ್ಣ ಮಾಹಿತಿ ಪಡೆದು ಕೊಂಡರು.

ಬೆಳಿಗ್ಗೆ ಚನ್ನರಾಯಪಟ್ಟಣಕ್ಕೆ ಆಗಮಿ ಸಿದ ಸಾರಿಗೆ ಸಚಿವರು, ಶಾಸಕ ಸಿ.ಎನ್. ಬಾಲಕೃಷ್ಣ ಅವರೊಂದಿಗೆ ನಗರದ ಬಸ್ ನಿಲ್ದಾಣ ಹಾಗೂ ಡಿಪೋವನ್ನು ವೀಕ್ಷಣೆ ಮಾಡಿ ಅಗತ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಲಹೆ ಸೂಚನೆ ನೀಡಿದರು. ನಂತರ ಹೊಳೆ ನರಸೀಪುರಕ್ಕೆ ಆಗಮಿಸಿ, ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರೊಂದಿಗೆ ಹೊಳೆನರಸೀಪುರ ಬಸ್ ನಿಲ್ದಾಣ ಪರಿಶೀಲಿಸಿದರು. ಹಲವು ಹೊಸ ಅಭಿವೃದ್ಧಿ ಕಾರ್ಯಗಳು ಹಾಗೂ ನವೀಕರಣ ಕಾಮಗಾರಿಗಳಿಗೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿ ದರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಅವರು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಆಗಬೇಕಿರುವ ಅಭಿ ವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು. ಇದೇ ವೇಳೆ ಸಚಿವರಿಬ್ಬರೂ ಹೊಳೆನರಸೀ ಪುರ ಡಿಪೋಗೆ ಭೇಟಿ ಮಾಡಿ ಪರಿಶೀಲಿ ಸಿದರು. ಮಧ್ಯಾಹ್ನ ಸಚಿವ ರಾದ ಹೆಚ್.ಡಿ. ರೇವಣ್ಣ ಅವರೊಂದಿಗೆ ಹಾಸನ ನಗರದ ಹೊಸ ಬಸ್ ನಿಲ್ದಾಣ ಪ್ರದೇಶಕ್ಕೆ ಭೇಟಿ ನೀಡಿ ಸುದೀರ್ಘ ಪರಿಶೀಲನೆ ನಡೆಸಿದರು. ಸಚಿವರಾದ ರೇವಣ್ಣ, ನಗರದಲ್ಲಿ ಸಾರಿಗೆ ಇಲಾಖೆ ವತಿಯಿಂದ ಆಗಬೇಕಾಗಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ನೂತನ ಬಸ್ ನಿಲ್ದಾಣದಿಂದ ಜಿಲ್ಲಾಸ್ಪತ್ರೆ ವರೆಗೆ ಬದಲಿ ರಸ್ತೆ ವ್ಯವಸ್ಥೆ, ಹೆಚ್ಚುವರಿ ಬಸ್‍ಗಳ ಸಂಚಾರದ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ, ಕೆ.ಎಂ.ಶಿವಲಿಂಗೇ ಗೌಡ, ಸಿ.ಎನ್.ಬಾಲಕೃಷ್ಣ, ಸಾರಿಗೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸಾರಿಗೆ ಆಯುಕ್ತ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ರೋಹಿಣ ಸಿಂಧೂರಿ ಕೆಎಸ್ ಆರ್‍ಟಿಸಿ ಮುಖ್ಯ ಅಭಿಯಂತರ ಜಗದೀಶ್ ಚಂದ್ರ, ಕಾರ್ಯನಿರ್ವಾಹಕ ಅಭಿಯಂತರ ಪಾಲನೇತ್ರ ನಾಯಕ್, ಕೆ.ಎಸ್.ಆರ್.ಟಿ.ಸಿ ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ ಯಶ್ವಂತ್ ಮತ್ತಿತರರಿದ್ದರು.