ಸ್ವಯಂಕೃತ ಅಪರಾಧದಿಂದ ಬಿಜೆಪಿಗೆ ಬಹುಮತ ಬರಲಿಲ್ಲ

  •  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಷಾದ
  • ರಾಜ್ಯಪಾಲರು ನೀಡಿದ ಸಮಯಾವಕಾಶದಲ್ಲಿ ಬಹುಮತ ಸಾಬೀತುಪಡಿಸಬಹುದಿತ್ತು ಆದರೆ ಕೋರ್ಟ್ ಆದೇಶದಿಂದ ಕೈತಪ್ಪಿತು
  • ಪಕ್ಷದ ಕಾರ್ಯಕಾರಣ ಯಲ್ಲಿ ವಿಚಾರ ಪ್ರಸ್ತಾಪ

ಬೆಂಗಳೂರು: ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕೆ ಬೇಕಾದ ಅಗತ್ಯ ಸಂಖ್ಯೆಯನ್ನು ಪಡೆಯ ದಿರಲು ಪಕ್ಷದ ಸ್ವಯಂಕೃತ ಅಪರಾಧವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ವಿಷಾದ ವ್ಯಕ್ತಪಡಿಸಿದ್ದಾರೆ.

ಇಂದು ಬಿಜೆಪಿ ರಾಜ್ಯ ಕಾರ್ಯಕಾರಣ ಉದ್ಘಾಟಿಸಿ ಮಾತನಾಡಿದ ಬಿಎಸ್‍ವೈ, ವಿಧಾನಸಭೆ ಚುವಾವಣೆ ವೇಳೆ ಮೋದಿ ಅಲೆ ಇದ್ದರೂ ನಾವು ಕನಿಷ್ಠ 135 ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಮಿತ್ ಶಾ, ಬೇರೆ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ರಾಜ್ಯ ಪ್ರಚಾರ ಮಾಡಿದರು. ಆದರೂ ನಾವು 104 ಸ್ಥಾನ ಗೆದ್ದು ಪ್ರತಿಪಕ್ಷದಲ್ಲಿ ಕೂತುಕೊಳ್ಳುವ ಪರಿ ಸ್ಥಿತಿ ಬಂದಿದೆ. ಈಗಲೂ ಕಾಲ ಮಿಂಚಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬಹುದು. ನಮ್ಮ 104 ಶಾಸಕರು ಮತ್ತು ಎಂಟು ಜನ ಪರಿಷತ್ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು. ನಾವು ನಲ್ವತ್ತು ಸ್ಥಾನಗಳಿಂದ 104 ಸ್ಥಾನ ತಲುಪಿದ್ದೇವೆ. ಕಾಂಗ್ರೆಸ್ 123 ರಿಂದ 80ಕ್ಕೆ ಕುಸಿದಿದೆ.

ಅಲ್ಲದೆ 17 ಸಚಿವರು ಹೀನಾಯ ಸೋಲು ಅನುಭವಿಸಿದ್ದಾರೆ ಎಂದರು. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕೇವಲ 1600 ಮತ ಗಳಿಂದ ಮಾತ್ರ ಗೆದ್ದಿದ್ದಾರೆ. ಆದರೆ ನಾವು 113 ಸ್ಥಾನ ಗೆಲ್ಲಲಿಕ್ಕಾಗಲಿಲ್ಲ ಎಂಬ ನೋವಿದೆ ಎಂದರು. ಈ ದೇಶದಲ್ಲಿ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದಿದ್ದಾಗ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಗೆ ಅವಕಾಶ ಕೊಡು ವುದು ನಮಗೆಲ್ಲ ಗೊತ್ತು. ಸುಪ್ರೀಂಕೋರ್ಟ್ ನಲ್ಲಿ ಮಧ್ಯರಾತ್ರಿ ಈ ಕುರಿತು ಚರ್ಚೆ ಆಯಿತು. ದೇಶದ ಇತಿಹಾಸದಲ್ಲಿ 15 ದಿನ ಬಹುಮತ ಸಾಬೀತಿಗೆ ಅವಕಾಶ ಇದ್ದರೂ 24 ಗಂಟೆ ಅವಕಾಶ ಕೊಡುವ ರೀತಿ ಮಾಡಿದ್ದನ್ನು ನಾನು ಈವರೆಗೂ ಕಂಡಿರಲಿಲ್ಲ ಎಂದು ಪರೋಕ್ಷವಾಗಿ ಸರ್ವೋಚ್ಚ ನ್ಯಾಯಾಲಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಇತಿಹಾಸದಲ್ಲಿ ರಾಜ್ಯಪಾಲರು ನೀಡಿದ ಸಮಯ ಬಿಟ್ಟು 24 ಗಂಟೆಯಲ್ಲಿ ಬಹುಮತ ಸಾಬೀತುಪಡಿಸಿ ಎಂದ ಮೊದಲ ಘಟನೆ ಇದು. ಅಗ್ನಿ ಪರೀಕ್ಷೆ ರೀತಿ ಎದುರಿಸಿದೆವು. ಬಿಜೆಪಿಗೆ ಬರಲು ಬೇರೆ ಶಾಸಕರು ಸಿದ್ಧವಿದ್ದರೂ ಸಮಯದ ಅಭಾವದಿಂದ ಹಿನ್ನಡೆಯಾಯಿತು ಎಂದರು. ರಾಜ್ಯದ, ದೇಶದ ಯಾವುದೇ ಭಾಗಕ್ಕೆ ಹೋದರೂ ಕೇಳುವ ಪ್ರಶ್ನೆ ಬಿಜೆಪಿ ಹಿನ್ನಡೆಗೆ ಏನು ಕಾರಣ? ಏನಾದರೂ ಪ್ರಯತ್ನ ಮಾಡಿ ಇನ್ನೂ ಕಾಲ ಮಿಂಚಿಲ್ಲ. ಹೇಗಾದರೂ ಮಾಡಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ ಎಂದರು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ 40 ರಿಂದ 104 ಸ್ಥಾನಕ್ಕೆ ಬಂದು ಮುಟ್ಟಿದರೆ, ಕಾಂಗ್ರೆಸ್ 122 ರಿಂದ79 ಕ್ಕೆ ಕುಸಿದಿದೆ. ಜೆಡಿಎಸ್ 40 ರಿಂದ 37 ಕ್ಕೆ ಕುಸಿದಿದೆ. ಹಿಂದಿನ ಸರ್ಕಾರದ 17 ಸಚಿವರು ಸೋತಿದ್ದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ದಯನೀಯ ವಾಗಿ ಸೋತಿದ್ದು, ಬಾದಾಮಿಯಲ್ಲಿ 1696 ಮತಗಳ ಅಂತರದ ಪ್ರಯಾಸದ ಗೆಲುವು ಕಂಡಿದ್ದಾರೆ. ಶ್ರೀರಾಮುಲುಗೆ ಇನ್ನು ಒಂದು ದಿನ ಸಮಯ ಹೆಚ್ಚು ನೀಡಿದ್ದರೂ ಅಲ್ಲಿ ಅವರು ಗೆಲುವು ಸಾಧ್ಯವಿತ್ತು ಎಂದರು.

ನಮ್ಮದೇ ಲೋಪದೋಷದಿಂದ ನಾವು ನಿರೀಕ್ಷಿತ ಸ್ಥಾನ ಗೆಲ್ಲಲಿಲ್ಲ ಎನ್ನುವುದು ನೋವು ತರುವ ಸಂಗತಿ. ಜೆಡಿಎಸ್ 219 ಸ್ಥಾನದಲ್ಲಿ ಸ್ಪರ್ಧಿಸಿ 37 ಸ್ಥಾನ ಗೆದ್ದು 14 ಜಿಲ್ಲೆಯಲ್ಲಿ ಒಂದೂ ಸ್ಥಾನ ಪಡೆದಿಲ್ಲ. ಆ ಪಕ್ಷ ಇಂದು ಆಡಳಿತ ನಡೆಸುತ್ತಿದೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸುತ್ತಿರುವುದು 37 ಶಾಸಕರ ಬಜೆಟ್. ಇದಕ್ಕೆ ಕಾಂಗ್ರೆಸ್‍ನ ಬೆಂಬಲವಿಲ್ಲ. ಸ್ವಾತಂತ್ರ್ಯ ನಂತರ 37 ಸ್ಥಾನ ಪಡೆದು ದಯನೀಯವಾಗಿ ಸೋತ ಪಕ್ಷ ಮಂಡಿಸುತ್ತಿರುವ ಬಜೆಟ್ ಇದಾಗಿದೆ. ಮಂಡನೆಯಾಗಲಿ, ನಂತರ ಮುಂದೇನಾಗಲಿದೆ ಎಂದು ಕಾದು ನೋಡೋಣ ಎಂದರು.

20-25 ಸಾವಿರ ನಕಲಿ ಮತದಾರರ ಮತದಾನ, ಚುನಾವಣಾ ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಜೆಡಿಎಸ್-ಕಾಂಗ್ರೆಸ್ ತೊಡಗಿದ್ದವು. ಚುನಾವಣೆ ಸಮಯದಲ್ಲಿ ಸುಳ್ಳು ಭರವಸೆಯನ್ನು ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಕೊಟ್ಟು ಜನರಿಗೆ ವಂಚನೆ, ನಂಬಿಕೆ ದ್ರೋಹ ಮಾಡಿದ್ದಾರೆ. ಅಧಿಕಾರಕ್ಕೆ ಬಂದರೂ ಕೊಟ್ಟ ಭರವಸೆ ಈಡೇರಿಸುವ ಕಳಕಳಿ ಇಲ್ಲ. ಒಂದು ವೇಳೆ ಅಪ್ಪ ಮಕ್ಕಳಿಗೆ ಬದ್ಧತೆ ಇದ್ದಿದ್ದರೆ ಭರವಸೆ ಈಡೇರಿಸುವ ಷರತ್ತು ಹಾಕದೇ ಮುಖ್ಯಮಂತ್ರಿ ಆಗಬಾರದಿತ್ತು. ಇದನ್ನು ಬಿಟ್ಟು ಅಧಿಕಾರದ ಚುಕ್ಕಾಣ ಹಿಡಿದು, ಜನರಿಗೆ ದ್ರೋಹವೆಸಗಿದ್ದಾರೆ. ನಾನು ಜನರ ಹಂಗಿನಲ್ಲಿ ಇಲ್ಲ, ಕಾಂಗ್ರೆಸ್ ಹಂಗಿನಲ್ಲಿದ್ದೇನೆ. ನಮಗೆ ಬಹುಮತ ಸಿಕ್ಕಿಲ್ಲ. ಹಾಗಾಗಿ ನಮ್ಮ ಪ್ರಣಾಳಿಕೆ ಈಡೇರಿಕೆ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ನಾವು ಬಹಳ ಎಚ್ಚರಿಕೆಯಿಂದ ಸದನದ ಕಾರ್ಯಕಲಾಪ ಎದುರಿಸಬೇಕು. ಸಚಿವರು ಅಧಿಕಾರ ಸ್ವೀಕರಿಸಿ 22 ದಿನವಾಗಿದೆ. ಆದರೂ ಯಾರೂ ಕೆಲಸ ಮಾಡುತ್ತಿಲ್ಲ. ಜನರು ಕಂಗಾಲಾಗಿದ್ದಾರೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ. ಅಧಿವೇಶನ ಮುಗಿದ ಬಳಿಕ ರಾಜ್ಯದ ಉದ್ದಗಲ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ. ಅವರೇ ಸರ್ಕಾರವನ್ನು ಅತಂತ್ರ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಮ್ಮವರು ಮಾಧ್ಯಮಗಳ ಮುಂದೆ ಹೋಗುವಾಗ ಎಚ್ಚರಿಕೆಯಿಂದ ಹೋಗಿ, ಸಿದ್ಧರಾಗಿ ಹೋಗಿ. ಏನೇನೋ ಮಾತನಾಡಬೇಡಿ ಎಂದು ಸಲಹೆ ನೀಡಿದರು.

ಲೋಕಸಭೆಯಲ್ಲಿ 25 ಸ್ಥಾನ ಗೆಲ್ಲುವ ಪಣ ತೊಟ್ಟು ಕೆಲಸ ಮಾಡಬೇಕು. ನಾಲ್ಕು ವರ್ಷದಲ್ಲಿ ಮೋದಿ ಸರ್ಕಾರದ ಸಾಧನೆ, ಯೋಜನೆ ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಹೆಚ್ಚು ದಿನ ಇರಲ್ಲ. ಸದನದ ಹೊರಗೆ, ಒಳಗೆ ಹೋರಾಟ ಮಾಡಿ ಪಕ್ಷ ಬಲವರ್ಧಿಸೋಣ. 25 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಪೂರ್ವಭಾವಿ ತಯಾರಿ ಮಾಡೋಣ. ಮೋದಿ ಈಗಾಗಲೇ ಸಂತ ಕಬೀರ ಕಾರ್ಯಕ್ರಮದ ಮೂಲಕ ಚುನಾವಣಾ ಕಹಳೆ ಮೊಳಗಿಸಿದ್ದಾರೆ. ಮತ್ತೊಮ್ಮೆ ಮೋದಿ ಸರ್ಕಾರ ತರಬೇಕು. ಕಾಂಗ್ರೆಸ್, ಜೆಡಿಎಸ್‍ನ ಹಲವು ನಾಯಕರು ನಮ್ಮ ಕಡೆ ಬರಲು ಸಿದ್ಧರಿದ್ದು ನಮ್ಮ ಕುರ್ಚಿ ಅತಂತ್ರ ಎಂದು ಯೋಚಿಸದೇ ಅವರನ್ನು ಕರೆತಂದು ಪಕ್ಷ ಬಲಪಡಿಸಿ ಎಂದು ಕರೆ ನೀಡಿದರು.

ಡಿಕೆಶಿ ಕಮಿಷನ್ ಡಿಮ್ಯಾಂಡ್

ಬೆಂಗಳೂರು:  ಬೃಹತ್ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅಧಿಕಾರ ಹಿಡಿದ ಸ್ವಲ್ಪ ದಿನದಲ್ಲೇ ಗುತ್ತಿಗೆದಾರರಿಂದ ಕಮಿಷನ್ ವಸೂಲಿಗೆ ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಗುರುತರ ಆರೋಪ ಮಾಡಿದ್ದಾರೆ. ಪಕ್ಷದ ಕಾರ್ಯ ಕಾರಣ ಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ ಕಮಿ ಷನ್ ನೀಡಿ ನೀರಾವರಿ ಇಲಾಖೆಯಲ್ಲಿ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಬಿಲ್ ಪಾವತಿಸದಂತೆ ಮೌಖಿಕ ಆದೇಶ ನೀಡಿದ್ದಾರೆ. ಹಿಂದೆ ನೀಡಿದ ಕಮಿ ಷನ್‍ಗೂ ನಮಗೂ ಸಂಬಂಧವಿಲ್ಲ. ಕಮಿಷನ್ ನೀಡಿದರೆ, ಗುತ್ತಿಗೆದಾರರ ಬಿಲ್‍ಗಳನ್ನು ಮಂಜೂರು ಮಾಡಿ ಎಂದು ಅಧಿಕಾರಿಗಳಿಗೆ ಕಟ್ಟಾದೇಶ ಮಾಡಿದ್ದಾರೆ. ಹಲವಷ್ಟು ಗುತ್ತಿಗೆದಾ ರರು ನನ್ನನ್ನು ಭೇಟಿ ಮಾಡಿ, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.