ಮೈಸೂರಿನಾದ್ಯಂತ ಸಂಚಾರ ಬಂದ್

ಮೈಸೂರು, ಏ. 17(ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧವನ್ನು ಮತ್ತಷ್ಟು ಬಿಗಿಗೊಳಿಸಿ ರುವುದರಿಂದ ಇಂದು ಮೈಸೂರಲ್ಲಿ ಹಾಟ್‍ಸ್ಪಾಟ್ ಗಳು ಸೇರಿದಂತೆ ಎಲ್ಲೆಡೆ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು.

ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾ ಗಿರುವ ಮೈಸೂರಿನ ವಿಜಯನಗರ 1, 2ನೇ ಹಂತ, ನಜರ್‍ಬಾದ್, ಜನತಾನಗರ, ಕುವೆಂಪುನಗರ, ಜೆ.ಪಿ.ನಗರ, ಜಯಲಕ್ಷ್ಮಿಪುರಂ, ಶ್ರೀರಾಂಪುರ 2ನೇ ಹಂತ, ಸರ್ದಾರ್ ವಲ್ಲಭಭಾಯಿ ಪಟೇಲ್‍ನಗರ 2ನೇ ಹಂತಗಳಲ್ಲಿ ಎಲ್ಲಾ ಪ್ರಮುಖ ರಸ್ತೆ ಮತ್ತು ಸಣ್ಣಪುಟ್ಟ ರಸ್ತೆಗಳನ್ನೂ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಹಾಟ್‍ಸ್ಪಾಟ್‍ಗಳೆಂದು ನಿಗದಿಗೊಳಿ ಸಿರುವ ಕಾರಣ ಭಯಭೀತರಾಗಿರುವ ಆ ಬಡಾ ವಣೆಗಳ ನಿವಾಸಿಗಳು ಮನೆಯಿಂದ ಹೊರಬರುತ್ತಿಲ್ಲ. ಅಲ್ಲಿನ ಯುವಕರು ತಾವಾಗಿಯೇ ಮುಂದೆ ಬಂದು ಸಣ್ಣಪುಟ್ಟ ಗಲ್ಲಿ, ರಸ್ತೆಗಳಿಗೂ ಕಲ್ಲು, ತೆಂಗಿನ ಗರಿ, ಮರದ ರೆಂಬೆಗಳನ್ನು ಅಡ್ಡಲಾಗಿ ಹಾಕಿ ವಾಹನಗಳು ಓಡಾಡದಂತೆ ಕಾಯುತ್ತಿರುವುದರಿಂದ ಹಾಟ್‍ಸ್ಪಾಟ್ ಬಡಾವಣೆಗಳಲ್ಲಿ ಸಂಚರಿಸುತ್ತಿಲ್ಲ.

ಆನ್‍ಲೈನ್‍ನಲ್ಲಿ ಬುಕ್ ಮಾಡಿದ ಆಹಾರ ಪದಾರ್ಥ ಗಳನ್ನು ಸರಬರಾಜು ಮಾಡುವವರು, ಆಸ್ಪತ್ರೆ, ಮೆಡಿಕಲ್ ಸ್ಟೋರ್, ಸರ್ಕಾರಿ ಕಚೇರಿ, ಅತ್ಯವಶ್ಯ ವಸ್ತು ಖರೀದಿಸಲು ಹೋಗುವವರು ಮಾತ್ರ ಇಂದು ಓಡಾಡುತ್ತಿದ್ದರೇ ಹೊರತು, ಉಳಿದಂತೆ ಜನರು ಮನೆಯಲ್ಲೇ ಉಳಿದು, ಪೊಲೀಸ್ ಆಯುಕ್ತರ ಲಾಕ್ ಡೌನ್ ಕಟ್ಟುನಿಟ್ಟಿನ ನಿರ್ಬಂಧಕಾಜ್ಞೆಯನ್ನು ಗೌರವಿ ಸಿದ್ದುದು ಕಂಡುಬಂದಿತು. ಹಾಟ್‍ಸ್ಪಾಟ್ ಎಂದು ಘೋಷಿಸಿರುವ ಬಡಾವಣೆಗಳೂ ಸೇರಿದಂತೆ ಮೈಸೂರು ನಗರದಾದ್ಯಂತ ಎಲ್ಲಾ ಠಾಣೆಗಳ ಗರುಡ, ಪಿಸಿಆರ್ ವಾಹನಗಳಲ್ಲಿ ಪೊಲೀಸರು ಪಬ್ಲಿಕ್ ಅಡ್ರೆಸ್ ಸಿಸ್ಟಂಗಳ ಮೂಲಕ ನಿರ್ಬಂಧಕಾಜ್ಞೆ ಬಗ್ಗೆ ಅನೌನ್ಸ್ ಮಾಡುತ್ತಿದ್ದರಲ್ಲದೇ, ಸೈರನ್ ಹಾಕಿಕೊಂಡು ಭಯ ಉಂಟು ಮಾಡಿ ಜನರು ಹೊರಬಾರದಂತೆ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಆಯುಕ್ತರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ಎ.ಎನ್. ಪ್ರಕಾಶ್‍ಗೌಡ ಸಹ ಮೈಸೂರು ನಗರದಾದ್ಯಂತ ಸಂಚರಿಸಿ ಲಾಕ್‍ಡೌನ್ ನಿರ್ಬಂಧ ವನ್ನು ಪರಿಶೀಲಿಸಿದರು.

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಎಲ್ಲೆಡೆ ಕೊರೊನಾ ವೈರಸ್ ಹರಡದಂತೆ ಫಾಗಿಂಗ್ ಮತ್ತು ಡಿಸ್‍ಇನ್‍ಫೆಕ್ಟಂಟ್ ರಸಾಯನಿಕ ಸಿಂಪಡಿ ಸುವ ಕಾರ್ಯವನ್ನು ಮುಂದುವರಿಸಿದ್ದಾರೆ.