ಮೈಸೂರು, ಏ. 17(ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧವನ್ನು ಮತ್ತಷ್ಟು ಬಿಗಿಗೊಳಿಸಿ ರುವುದರಿಂದ ಇಂದು ಮೈಸೂರಲ್ಲಿ ಹಾಟ್‍ಸ್ಪಾಟ್ ಗಳು ಸೇರಿದಂತೆ ಎಲ್ಲೆಡೆ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾ ಗಿರುವ ಮೈಸೂರಿನ ವಿಜಯನಗರ 1, 2ನೇ ಹಂತ, ನಜರ್‍ಬಾದ್, ಜನತಾನಗರ, ಕುವೆಂಪುನಗರ, ಜೆ.ಪಿ.ನಗರ, ಜಯಲಕ್ಷ್ಮಿಪುರಂ, ಶ್ರೀರಾಂಪುರ 2ನೇ ಹಂತ, ಸರ್ದಾರ್ ವಲ್ಲಭಭಾಯಿ ಪಟೇಲ್‍ನಗರ 2ನೇ ಹಂತಗಳಲ್ಲಿ ಎಲ್ಲಾ ಪ್ರಮುಖ ರಸ್ತೆ ಮತ್ತು ಸಣ್ಣಪುಟ್ಟ ರಸ್ತೆಗಳನ್ನೂ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿ ಪೊಲೀಸರು…