ಮೈಸೂರು

ತವರಿಗೆ ಬಂದವರು ಸೋಂಕು ತಂದರು

May 22, 2020

ಮಂಡ್ಯ, ಹಾಸನಕ್ಕೆ ಮಾರಕವಾದ ಮಹಾರಾಷ್ಟ್ರ

ರಾಜ್ಯದಲ್ಲಿ ಒಟ್ಟು 1605

ಬೆಂಗಳೂರು, ಮೇ 21-ಲಾಕ್‍ಡೌನ್ ಸಡಿಲಿಸಿ ಹೊರ ರಾಜ್ಯದವರು ಕರ್ನಾಟಕಕ್ಕೆ ಬರಲು ಅವಕಾಶ ನೀಡಿದ್ದೇ ರಾಜ್ಯಕ್ಕೆ ಮುಳುವಾದಂತಾಗಿದೆ. ಹೊರ ರಾಜ್ಯದಿಂದ ಬಂದ ಬಹುತೇಕರಲ್ಲಿ ಕೊರೊನಾ ಸೋಂಕು ಪತ್ತೆಯಾ ಗುತ್ತಿದೆ. ಗುರುವಾರ ರಾಜ್ಯದಲ್ಲಿ 143 ಮಂದಿಗೆ ಸೋಂಕು ಪತ್ತೆಯಾಗಿದ್ದು, ಅವರಲ್ಲಿ ಕೇವಲ 20 ಮಂದಿ ಮಾತ್ರ ರಾಜ್ಯದವರಾದರೆ, 7 ಮಂದಿ ಅರಬ್ ದೇಶದಿಂದ ಬಂದವರು. ಉಳಿದ 116 ಮಂದಿ ಹೊರ ರಾಜ್ಯದಿಂದ ಬಂದವರಾಗಿದ್ದು, ಅವರಲ್ಲಿ ಬರೋಬ್ಬರಿ 98 ಮಂದಿ ಮಹಾರಾಷ್ಟ್ರದಿಂದ ತವರಿಗೆ ಹಿಂತಿರುಗಿದವರಾಗಿ ದ್ದಾರೆ. ಇಂದು ಮಂಡ್ಯದಲ್ಲಿ 33,ಹಾಸನದಲ್ಲಿ 13 ಮತ್ತು ಮೈಸೂರಿನ ಒಬ್ಬರಲ್ಲಿ ಸೋಂಕು ಪತ್ತೆಯಾ ಗಿದ್ದು, ಇವರೆಲ್ಲರೂ ಮಹಾರಾಷ್ಟ್ರದ ಮುಂಬೈನಿಂದ ಬಂದವ ರಾಗಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1605ಕ್ಕೆ ಏರಿದರೆ, ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ದ್ವಿಶತಕ ಬಾರಿಸಿದೆ. ಅಲ್ಲಿ ಸೋಂಕಿತರ ಸಂಖ್ಯೆ 201. ಹಾಸನದಲ್ಲಿ ಸೋಂಕಿತರ ಸಂಖ್ಯೆ 66ಕ್ಕೆ ಏರಿಕೆಯಾ ಗಿದ್ದು, ಮೈಸೂರಿನಲ್ಲಿ ಇಬ್ಬರು ಸೋಂಕಿತರಿ ದ್ದಾರೆ. ಇನ್ನುಳಿದಂತೆ ಇಂದು ಬೆಂಗಳೂರಲ್ಲಿ 6, ಬೆಳಗಾವಿಯಲ್ಲಿ 9, ದಾವಣಗೆರೆಯಲ್ಲಿ 3, ಉತ್ತರ ಕನ್ನಡದಲ್ಲಿ 7, ವಿಜಯಪುರ ಮತ್ತು ತುಮಕೂರಿನಲ್ಲಿ ತಲಾ 1, ದಕ್ಷಿಣ ಕನ್ನಡ, ರಾಯಚೂರು ಮತ್ತು ಧಾರವಾಡ ತಲಾ 5, ಚಿಕ್ಕಬಳ್ಳಾಪುರ, ಗದಗ ಮತ್ತು ಕೋಲಾರದಲ್ಲಿ ತಲಾ 2, ಉಡುಪಿ ಯಲ್ಲಿ 26, ಬಳ್ಳಾರಿಯಲ್ಲಿ 11 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದ ಒಟ್ಟು 1605 ಸೋಂಕಿತರ ಪೈಕಿ ಇಂದು 15 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖ ರಾದವರ ಸಂಖ್ಯೆ 571ಕ್ಕೆ ಏರಿದೆ. ಈವರೆಗೆ 41 ಮಂದಿ ಸೋಂಕಿ ನಿಂದ ಮೃತಪಟ್ಟಿದ್ದು, 992 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಥಮ ಸಂಪರ್ಕ ಹೊಂದಿರುವ 10,647 ಮತ್ತು ದ್ವಿತೀಯ ಸಂಪರ್ಕ ಹೊಂದಿರುವ 12,957 ಮಂದಿ ಸೇರಿದಂತೆ ಒಟ್ಟು 23,604 ಮಂದಿಯನ್ನು ಕ್ವಾರಂ ಟೈನ್‍ನಲ್ಲಿಟ್ಟು ನಿಗಾ ವಹಿಸಲಾಗುತ್ತಿದೆ. ಇವರ ಕೋವಿಡ್-19 ಪರೀಕ್ಷಾ ವರದಿಗಳು ಬರಬೇಕಾಗಿದೆ. ಇಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ದಮನ್ ನಿಂದ 115 ಮತ್ತು ಮಸ್ಕಟ್‍ನಿಂದ 85 ಮಂದಿ, ಮಂಗಳೂರು ವಿಮಾನ ನಿಲ್ದಾಣಕ್ಕೆ ಯುಎಇಯಿಂದ 64 ಮಂದಿ ಸೇರಿದಂತೆ ಒಟ್ಟು 264 ಮಂದಿ ಬಂದಿದ್ದು, ಕ್ವಾರಂಟೈನ್‍ನಲ್ಲಿ ನಿಗಾ ವಹಿಸಲಾಗುತ್ತಿದೆ.

 

 

 

 

 

Translate »