ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

June 4, 2020

ಮೈಸೂರು, ಜೂ.3- ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ಜೂ.4ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿಗೆ ಆಗಮಿಸುವ ಅವರು ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕೆ.ಆರ್.ವೃತ್ತದಲ್ಲಿ ರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡು ವರು. ಬೆಳಿಗ್ಗೆ 9.30 ಗಂಟೆಗೆ ಅರಸು ಮಂಡಳಿ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಅರಸು ಮಂಡಳಿ ಸಂಘದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವರ್ಧಂತ್ಯುತ್ಸವ ಆಚರಣೆ ಸಮಾರಂಭದಲ್ಲಿ ಭಾಗವಹಿ ಸುವರು. ಬೆಳಿಗ್ಗೆ 11.15ಕ್ಕೆ ತಲಕಾಡಿನಲ್ಲಿರುವ ವೈದೇಶ್ವರ ಸಮೂಹ ದೇವಾಲಯಗಳ ವೀಕ್ಷಣೆ ಮಾಡುವರು. ಮಧ್ಯಾಹ್ನ 1 ಗಂಟೆಗೆ ತಲಕಾಡಿನ ಕುರುಬಾಳ ಹುಂಡಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡ ಉದ್ಘಾಟನೆ ಮಾಡುವರು. ಮಧ್ಯಾಹ್ನ 3 ಗಂಟೆಗೆ ಸಹಕಾರ ಇಲಾಖೆ ವತಿಯಿಂದ ತಿ.ನರಸೀಪುರದಲ್ಲಿರುವ ಟಿ.ಎಪಿಸಿ ಎಂಎಸ್ ಬಿಲ್ಡಿಂಗ್‍ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆ ಮಾಡುವರು.

Translate »