ಮೈಸೂರು

ಜು.1ರಿಂದ ಶಾಲೆ ಪುನಾರಂಭ ಪ್ರಸ್ತಾಪ ಕೈಬಿಡುವಂತೆ ಪತ್ರ ಚಳವಳಿ

June 5, 2020

ಮೈಸೂರು, ಜೂ.4(ಪಿಎಂ)- ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಯಲ್ಲಿ ಶಾಲೆಗಳನ್ನು ಜು.1ರಿಂದ ಪುನಾರಂಭಿಸುವ ಪ್ರಸ್ತಾಪ ಕೈಬಿಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ಅಂಚೆ ಚಳವಳಿ ನಡೆಸಲಾಯಿತು. ಮೈಸೂರಿನ ಚಾಮುಂಡಿಪುರಂ ಅಂಚೆ ಕಚೇರಿ ಮುಂಭಾಗ ಅಂಚೆ ಪೆಟ್ಟಿಗೆಗೆ ಅಂಚೆ ಕಾರ್ಡ್ ಹಾಕಿದ ನಂತರ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳು, ಪೆÇೀಷಕರು, ಶಿಕ್ಷಕರು ಕೊರೊನಾ ಭೀತಿಯಲ್ಲೇ ಇದ್ದಾರೆ. ಜು.1ರಿಂದ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬಾರದು ಎಂದು ಆಗ್ರಹಿಸಿದರು.

ಶಾಲೆಗಳಲ್ಲಿ ಮಕ್ಕಳ ನಡುವೆ ಅಂತರ ಕಾಯ್ದುಕೊಳ್ಳುವುದು ಕಷ್ಟ. ಮಕ್ಕಳಿಗೆ ಮಾಸ್ಕ್ ಹಾಕಿಸುವುದು ಸಹ ಸಾಧ್ಯವಾಗದೇ ಹೋಗಬಹುದು. ಮಕ್ಕಳ ಮನಸ್ಸು ಸೂಕ್ಷ್ಮ. ನಿಯಮ ಪಾಲಿಸುವಂತೆ ಅವರ ಮೇಲೆ ಒತ್ತಡ ಹೇರಲಾಗದು. ಕೊರೊನಾ ಹರಡದಂತೆ ತಡೆಯಲು ಕೈಗೆ ಸ್ಯಾನಿಟೈಸರ್ ಹಾಕಿಕೊಳ್ಳಬೇಕು. ಮಕ್ಕಳ ಕೈಗೆ ಸ್ಯಾನಿಟೈಸರ್ ಹಾಕುವುದು ಅಪಾಯ. ಸ್ಯಾನಿಟೈಸರ್ ಸಿಂಪಡಿಸಿದ ಕೈಗಳನ್ನು ಮಕ್ಕಳು ಬಾಯಿಗೆ ಹಾಕಿಕೊಳ್ಳುವ ಸಂಭವವಿರುತ್ತದೆ. ಹೀಗಾಗಿ ಪರಿಸ್ಥಿತಿಗೆ ಅನುಗುಣವಾಗಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‍ನಲ್ಲಿ ಶಾಲೆ ಆರಂಭಿಸಿ ಎಂದು ಮನವಿ ಮಾಡಿದರು. ವೇದಿಕೆಯ ಹರೀಶ್ ನಾಯ್ಡು, ಸುಚಿಂದ್ರ, ಶಿವು, ಚಕ್ರಪಾಣಿ, ಗೋಪಾಲಕೃಷ್ಣ ಮತ್ತಿತರರಿದ್ದರು.

Translate »