ಮಂಡ್ಯ: ಜಿಲ್ಲೆಯ ವಿವಿಧೆಡೆ ಅಂಗನವಾಡಿ ಮಕ್ಕಳಿಗೆ ಸ್ವಂತ ಕಟ್ಟಡ ಗಳಿಲ್ಲದೇ ಬಾಡಿಗೆ ಕಟ್ಟಡ ಹಾಗೂ ಸೂಕ್ತ ವಿಲ್ಲದ ಕಟ್ಟಡಗಳಲ್ಲಿ ಪಾಠ ಕಲಿಯುವಂತಾ ಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪ್ರಗತಿ ಯಲ್ಲಿರುವ ಅಂಗನವಾಗಿ ಕಟ್ಟಡಗಳನ್ನು ಶೀಘ್ರ ಪೂರ್ಣಗೊಳಿಸುವ ಜೊತೆಗೆ, ಇನ್ನೂ ಆರಂಭಿಸದಿರುವ ಕಟ್ಟಡದ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು ಎಂದು ಜಿಪಂ ಅಧ್ಯಕ್ಷೆ ನಾಗರತ್ನ ತಿಳಿಸಿದರು. ಸೋಮವಾರ ಜಿಪಂ ಕಾವೇರಿ ಸಭಾಂಗಣದಲ್ಲಿ ನಡೆದ ಜಿಪಂ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗನವಾಡಿ ಕಟ್ಟಡಗಳ ಕಾಮಗಾರಿ ಬಹಳ ನಿಧಾನ ವಾಗಿ…