ತಿ.ನರಸೀಪುರ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ ಆಲಗೂಡು ಬಡಾವಣೆ ಆಯ್ಕೆಯಾಗಿದ್ದು, ಪ.ಜಾತಿ, ಪಂಗಡ ಹಾಗೂ ಸಾಮಾನ್ಯ ಸಮುದಾಯವರಿಗೂ ನಿಗದಿತ ನಿವೇಶನದಲ್ಲಿ ಸೂರು ಕಟ್ಟಿಕೊಡಲಾಗುವುದು ಎಂದು ವರುಣಾ ಶಾಸಕ ಡಾ.ಎಸ್. ಯತೀಂದ್ರ ತಿಳಿಸಿದರು. ಪಟ್ಟಣದ ಆಲಗೂಡು ಬಡಾವಣೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಆಯ್ಕೆಗೊಂಡಿ ರುವ ಹಿನ್ನೆಲೆಯಲ್ಲಿ ಅಧಿ ಕಾರಿಗಳೊಂದಿಗೆ ಭೇಟಿ ನೀಡಿ, ಫಲಾನು ಭವಿಗಳ ಆಯ್ಕೆ ಸಂಬಂಧ ಮುಖಂಡ ರೊಂದಿಗೆ ಚರ್ಚೆ ನಡೆಸಿದರು. ನಿಗದಿತ ನಿವೇಶನಗಳಿರುವ ಫಲಾನುಭವಿ ಗಳ ಪಟ್ಟಿಯನ್ನು…