ವಾಯುಪಡೆ ಹೆಲಿಕಾಪ್ಟರ್‍ಗಳ ನೆರವು ಸಾವಿರಾರು ಸ್ವಯಂ ಸೇವಕರ ನೆರವಿನೊಂದಿಗೆ ಅರಣ್ಯ ಸಿಬ್ಬಂದಿ ಸೆಣಸಾಟ ಬಂಡೀಪುರ: ಬಂಡೀಪುರ ಅಭಯಾರಣ್ಯದಲ್ಲಿ ಕಳೆದ ಐದು ದಿನಗಳಿಂದ ಸಾವಿರಾರು ಎಕರೆ ಕಾಡನ್ನು ಸರ್ವನಾಶ ಮಾಡಿದ ಅಗ್ನಿಯ ರುದ್ರನರ್ತನ ಇಂದು ಕೂಡ ಮುಂದು ವರೆದಿದೆ. ಅರಣ್ಯ ಸಿಬ್ಬಂದಿಯೊಂದಿಗೆ ಸಾವಿರಾರು ಸ್ವಯಂ ಸೇವಾ ಕಾರ್ಯಕರ್ತರು ಬೆಂಕಿ ನಂದಿಸಲು ಸೆಣಸಾಡುತ್ತಿದ್ದು, ವಾಯುಪಡೆಯ ಎರಡು ಹೆಲಿಕಾಪ್ಟರ್‍ಗಳು ಸಹ ನೆರವಿಗೆ ಧಾವಿಸಿವೆ. ಹೆಲಿಕಾಪ್ಟರ್‍ಗಳ ಮೂಲಕ ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದ ಸ್ವಲ್ಪ ಮಟ್ಟಿಗೆ ಬೆಂಕಿ ನಂದಿಸಲು ಸಾಧ್ಯವಾಯಿ ತಾದರೂ, ಪೂರ್ಣ ಪ್ರಮಾಣದಲ್ಲಿ…