ಬಾವಲಿ: ಚಲಿಸುತ್ತಿದ್ದ ಜೀಪ್ ಮೇಲೆ ಮರವೊಂದರ ಕೊಂಬೆ ಬಿದ್ದು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ಹೆಚ್.ಡಿ. ಕೋಟೆ-ಮಾನಂದವಾಡಿ ರಸ್ತೆಯ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ಗೇಟ್ ಬಳಿ ನಡೆದಿದೆ. ಗಾಯಗೊಂಡವರನ್ನು ಕೇರಳದ ಕಲ್ಪಟ್ಟೆ ನಿವಾಸಿ ನಿಸಾರ್ ಅಲಿಯಾಸ್ ನಾಸಿರ್(35) ಎಂದು ಗುರುತಿಸಲಾಗಿದೆ. ನಿಸಾರ್ ತನ್ನ ಜೀಪ್(ಕೆಎಲ್.11, ಬಿ.7821)ನಲ್ಲಿ ಇಂದು ಸಂಜೆ 4.10ರಲ್ಲಿ ಹೆಚ್.ಡಿ.ಕೋಟೆಯಿಂದ ಅಂತರಸಂತೆ ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿದ್ದಾಗ ನಾಗರಹೊಳೆ ಅಭಯಾರಣ್ಯ ಮೂಲಕ ಹಾದು ಹೋಗುವ ಮಾನಂದವಾಡಿ ರಸ್ತೆಯ ಮದ್ದೂರು ಗೇಟ್ ಬಳಿ ಹಠಾತ್ತನೆ…