ಮೈಸೂರು: ದಲಿತರ ವಿಳ್ಯೆದೆಲೆ ತೋಟಗಳನ್ನು ಉಳಿಸಬೇಕು. 245 ವಿಳ್ಯೆದೆಲೆ ವ್ಯವಸಾಯಗಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ವಿಳ್ಯೆದೆಲೆ ರೈತರ ಭೂ ಹೋರಾಟ ಸಮಿತಿ ಆಶ್ರಯದಲ್ಲಿ ನೂರಾರು ಮಂದಿ ಬುಧವಾರ ಮೈಸೂರಿನಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು. ಮೈಸೂರು ನ್ಯಾಯಾಲಯ ಎದುರಿನ ಗಾಂದಿ ಪುತ್ಥಳಿ ಬಳಿಯಿಂದ ಅರೆ ಬೆತ್ತಲೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಬಂದು ಅಲ್ಲಿ ಧರಣಿ ಕುಳಿತರು. ವಿಳ್ಯೆದೆಲೆ ಬೆಳೆದು ಜೀವನ ನಿರ್ವಹಿಸುತ್ತಿದ್ದ ಕುಟುಂಬಗಳು ಕೆಲವು ರಿಯಲ್…