ಮೈಸೂರು: ಭಾರತೀಯ ಮಹಿಳೆ ತನಗಾಗಿ ಬದುಕದೇ ಸದಾ ಇನ್ನೊಬ್ಬರಿಗಾಗಿ ಬದುಕುವಂತಾಗಿದ್ದು, ಈ ಕುರಿತಂತೆ ಜೂ.2ರ ಸಂಜೆ 6 ಗಂಟೆಗೆ ಮೈಸೂರಿನ ಕಲಾಮಂದಿರ ಪಕ್ಕದಲ್ಲಿರುವ ಕಿರು ರಂಗಮಂದಿರದಲ್ಲಿ `ಭಾರತೀಯ ನಾರಿ-1951’ ನಾಟಕ ಪ್ರದರ್ಶಿಸಲಾಗುವುದು ಎಂದು ನಾಟಕ ನಿರ್ದೇಶಕ ಎಂ.ಸಿದ್ದರಾಜು ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟಕವನ್ನು ತಾವು ನಿರ್ದೇಶಿಸಿದ್ದು, ಪ್ರತಿಬಿಂಬ ರಂಗತಂಡದ ಐದು ಮಂದಿ ಮಹಿಳಾ ಕಲಾವಿದರೂ ಸೇರಿದಂತೆ ಒಟ್ಟು 25 ಮಂದಿ ಕಲಾವಿದರು ನಾಟಕ ಪ್ರಸ್ತುತಪಡಿಸಲಿದ್ದಾರೆ. ಟಿಕೆಟ್ ದರ ರೂ.30…